ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜಯಂತಿ ಆಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯುಗಪ್ರವರ್ತಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಅವರ ಅನುಯಾಯಿಯಾಗಿದ್ದ ಮಾಜಿ ಪ್ರಧಾನಿ ಶ್ರೀ ಲಾಲ್ ಬಹುದ್ದೂರು ಶಾಸ್ತ್ರೀಜಿಯವರ ತತ್ವ ಸಿದ್ಧಾಂತಗಳ ಪಾಲನೆಯಿಂದ ನಮ್ಮೆಲ್ಲರ ಜೀವನ ಸಾರ್ಥಕವಾಗುವುದು ಎಂದು ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ರವೀಂದ್ರ ಶೆಟ್ಟಿ ದರ್ಬೆ ಇವರು ಸರಕಾರಿ ಪ್ರೌಡಶಾಲೆ ಹಿರೆಬಂಡಾಡಿ ಇಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಶಾಲಾ ಮುಖ್ಯಶಿಕ್ಷಕಿಯವರಾದ ಶ್ರೀಮತಿ ವೇದಾವತಿಯವರು ಜಗತ್ತಿಗೆ ಕೊರೋನಾ ಮಹಾಮಾರಿ ಆವರಿಸಿರುವ ಸಂದರ್ಭದಲ್ಲಿ ಈ ಮಹಾನುಭಾವರ ತತ್ವಗಳಾದ ಸರಳ ಜೀವನ, ಸ್ವಚ್ಚತೆ, ಸ್ವಾವಲಂಬಿ ಬದುಕು ಅಗತ್ಯವಿದೆ ಎಂದು ತಮ್ಮ ಮುಖ್ಯ ಅತಿಥಿಗಳ ಭಾಷಣದಲ್ಲಿ ನುಡಿದರು. ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷರಾದ ಶ್ರೀ ಶ್ರೀಧರ ಮಠಂದೂರು, ಅತಿಥಿಗಳಾದ ರೋ. ಜಗದೀಶ ನಾಯಕ್, ರೋ.ಸಮೀರ್, ರೋ. ಶ್ರೀಕಾಂತ ಪಟೇಲ್, ಶ್ರೀಮತಿ ಹರಿಣಿ, ಸುಜಿತ್, ಅಮಿತ್, ಮಾನ್ವಿ, ತನ್ವಿ ಮತ್ತು ಶಿಕ್ಷಕರಾದ ಸೀತಾರಾಮ ಗೌಡ, ಲಲಿತಾ ಮತ್ತು ವಸಂತ ಕುಮಾರ್ ಇವರು ಗಾಂಧಿ ಮತ್ತು ಶಾಸ್ತ್ರೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸರ್ವಧರ್ಮ ಪ್ರಾರ್ಥನೆ ಮಾಡಿದರು. ಇದೇ ಸಂದರ್ಭದಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್ ವತಿಯಿಂದ ಶಾಲೆಗೆ ಸ್ಯಾನಿಟೈಸರ್ ಸ್ಟ್ಯಾಂಡ್ ಹಸ್ತಾಂತರಿಸಲಾಯಿತು. ಹಿರಿಯ ಶಿಕ್ಷಕರಾದ ಶ್ರೀ ಹರಿಕಿರಣ್ ಕೆ ಇವರು ಸ್ವಾಗತಿಸಿದರು. ಉಪ್ಪಿನಂಗಡಿ ಜೇಸಿ ಅಧ್ಯಕ್ಷರಾದ ಶ್ರೀ ಶಶಿಧರ ನೆಕ್ಕಿಲಾಡಿ ಇವರು ಧನ್ಯವಾದ ಸಮರ್ಪಣೆಗೈದರು. ಕನ್ನಡ ಶಿಕ್ಷಕರಾದ ಫಿರೋಜ್ ನಾಯ್ಕ್ ಇವರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.