HomePage_Banner
HomePage_Banner
HomePage_Banner
HomePage_Banner
HomePage_Banner

ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿಯಲ್ಲಿ ಗಾಂಧಿಸ್ಮೃತಿ, ನವಜೀವನೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಪುತ್ತೂರು, ಕೆಮ್ಮಿಂಜೆ, ಬೆಟ್ಟಂಪಾಡಿ ವಲಯ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಪುತ್ತೂರು, ಕೆಮ್ಮಿಂಜೆ ಹಾಗೂ ಬೆಟ್ಟಂಪಾಡಿ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಸ್ಮೃತಿ ಹಾಗೂ ನವಜೀವನೋತ್ಸವ ಕಾರ್ಯಕ್ರಮಗಳು ಅ.2ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಡಾ.ನಾರಾಯಣ ಭಟ್ ಮಾತನಾಡಿ, ಮದ್ಯವರ್ಜನ ಶಿಬಿರದಲ್ಲಿ ಸಚ್ಚೆಯಿಂದ ಭಾಗವಹಿಸಿ, ಉತ್ತಮ ವ್ಯಕ್ತಿಗಳಾಗುವ ಮುಖಾಂತರ ಜಾಗೃತಿ ಮೂಡಿಸಬೇಕು ಎಂದರು. ತಾಲೂಕು ಅಖಿಲ ಕರ್ನಾಟಕ ಜನಜಾಗೃಥಿ ವೇದಿಕೆ ಅಧ್ಯಕ್ಷ ಮಹಾಬಲ ರೈ ವಳತ್ತಡ ದೀಪಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಲೋಕೇಶ್ ಹೆಗ್ಡೆ, ಜನಜಾಗೃತಿ ವೇದಿಕೆ ಪುತ್ತೂರು ವಲಯದ ಅಧ್ಯಕ್ಷ ಶೀನಪ್ಪ ಕುಲಾಲ್, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ವಲಯಾಧ್ಯಕ್ಷ ಚಂದ್ರಶೇಖರ್, ಬೆಟ್ಟಂಪಾಡಿ ವಲಯಾಧ್ಯಕ್ಷ ನವೀನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಪಾನಮುಕ್ತ ಜೀವನ ನಡೆಸುತ್ತಿರುವ ಜನಾರ್ದನ ಗೌಡ, ಸುರೇಶ್ ಪಾಣಾಜೆ ಹಾಗೂ ಚೆನ್ನಪ್ಪ ಮರಿಕೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಮೆರವಣಿಗೆ:
ಕಾರ್ಯಕ್ರಮದ ಪ್ರಾರಂಭದಲ್ಲಿ ಗಾಂಧಿಕಟ್ಟೆಯ ಬಳಿಯಿಂದ ಕಾರ್ಯಕ್ರಮದ ಸಭಾಂಗಣದ ತನಕ ಮೆರವಣಿಗೆ ನಡೆಯಿತು. ಪಾನಮುಕ್ತರಾಗಿ ನವಜೀವನವನ್ನು ನಡೆಸುತ್ತಿರುವವರು, ಕಚೇರಿ ಸಿಬಂದಿಗಳು ಹಾಗೂ ಒಕ್ಕೂಟ, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ತಾಲೂಕು ಯೋಜನಾಧಿಕಾರಿ ಆನಂದ ಕೆ ಸ್ವಾಗತಿಸಿದರು. ಮೇಲ್ವಿಚಾರಕಿ ಪಾವನ ಸನ್ಮಾನಿತರ ಪರಿಚಯ ಮಾಡಿದರು. ಕವಿತಾ ವಸಂತ್ ಕಾರ್ಯಕ್ರಮ ನಿರೂಪಿಸಿ, ಮೇಲ್ವಿಚಾರಕಿ ಯೋಗೀಶ್ವರಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.