HomePage_Banner
HomePage_Banner
HomePage_Banner
HomePage_Banner
HomePage_Banner

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 151ನೇ ಜಯಂತಿ| ನಗರಸಭೆಯಿಂದ ಸ್ವಚ್ಛ ಭಾರತಾ ಅಭಿಯಾನದ 6ನೇ ವಾರ್ಷಿಕೋತ್ಸವ – ಜಾಥಾ

Puttur_Advt_NewsUnder_1
Puttur_Advt_NewsUnder_1

ಗಾಂಧೀಜಿ ಕಂಡ ಗ್ರಾಮಸ್ವರಾಜ್ಯದ ರಾಮರಾಜ್ಯ ಆಗಬೇಕು- ಸಂಜೀವ ಮಠಂದೂರು
ಸರಕಾರದ ನಿಯಮ ಮಾಸ್ಕ್, ಸಾಮಾಜಿಕ ಅಂತರ ಪಾಲಿಸಿ – ಡಾ. ಯತೀಶ್ ಉಳ್ಳಾಲ್
ತಿಳುವಳಿಕೆ, ಮನವರಿಕೆಯ ಗುರಿ – ರೂಪಾ ಶೆಟ್ಟಿ

ಪುತ್ತೂರು: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 151ನೇ ಜಯಂತಿ ಅಂಗವಾಗಿ ನಗರಸಭೆಯಿಂದ ಸ್ವಚ್ಛ ಭಾರತ ಅಭಿಯಾನದ 6ನೇ ವಾರ್ಷಿಕೋತ್ಸವದ ಅಂಗವಾಗಿ ಅ.2ರಂದು ಪುತ್ತೂರು ನಗರಸಭೆಯ ಎಲ್ಲಾ ವಾರ್ಡ್‌ಗಳಲ್ಲಿ ಆರೋಗ್ಯ ಜಾಗೃತಿಯನ್ನು ನಗರಸಭೆ ಸಿಬ್ಬಂದಿಗಳು ಮತ್ತು ಪೌರ ಕಾರ್ಮಿಕರಿಂದ ತ್ಯಾಜ್ಯ ವಿಲೇವಾರಿ ವಾಹನಗಳ ಮೂಲಕ ತೆರಳಿ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ ನಡೆಯಿತು. ಶಾಸಕ ಸಂಜೀವ ಮಠಂದೂರು ಅವರು ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.


ಗಾಂಧೀಜಿ ಕಂಡ ಗ್ರಾಮಸ್ವರಾಜ್ಯದ ರಾಮರಾಜ್ಯ ಆಗಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸ್ವಾತಂತ್ರ್ಯ ಬಂದ ಮೇಲೆ ನಮ್ಮ ಆರೋಗ್ಯ, ಜೀವದ ರಕ್ಷಣೆ ಕುರಿತು ಬಹುಶಃ ನಾವು ಈ ತನಕ ಎಚ್ಚರಿಕೆ ವಹಿಸಿಕೊಳ್ಳದಂತಹ ಎಲ್ಲಾ ಎಚ್ಚರಿಕೆಯನ್ನು ಕೋವಿಡ್ ಬಂದ ಮೇಲೆ ಎಚ್ಚರಿಕೆ ವಹಿಸಿಕೊಂಡಿದ್ದೇವೆ. ನಮ್ಮ ಬದುಕಿನ, ಜೀವ ರಕ್ಷಣೆ, ಆರೋಗ್ಯ ಕಾಪಾಡುವ ಸಂಗತಿಗೆ ಹೆಚ್ಚಿನದ ಆದ್ಯತೆ ಕೊಡುತ್ತಿದ್ದೇವೆ. ಇವತ್ತು ನಮ್ಮ ಜೀವ ರಕ್ಷಣೆ ಜೊತೆಗೆ ಮತ್ತೊಬ್ಬರ ಜೀವ ರಕ್ಷಣೆಯೂ ನಮ್ಮ ಕರ್ತವ್ಯ ಎಂದು ಈ ಭಾರಿ ಗಾಂಧೀ ಜಯಂತಿ ಸ್ವಚ್ಛತೆಯ ಜೊತೆಗೆ ಆರೋಗ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪುತ್ತೂರು ಸ್ವಚ್ಛ ಸುಂದರ ಆಗಬೇಕೆಂಬ ನಿಟ್ಟಿನಲ್ಲಿ ರಾಜ್ಯದಲ್ಲಿ ಸ್ವಚ್ಛತೆಯಲ್ಲಿ ಪುತ್ತೂರು ೬ನೇ ಸ್ಥಾನಕ್ಕೆ ಬಂದಿದೆ. ಇದಕ್ಕೆ ಕಾರಣಕರ್ತರಾದ ಪುತ್ತೂರಿನ ನಾಗರಿಕರು ಮತ್ತು ವಿಶೇಷವಾಗಿ ನಮ್ಮ ಸ್ವಚ್ಛತ ಕಾರ್ಯಕರ್ತರಾದ ಪೌರ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಬೇಕು ಎಂದ ಅವರು ಎಲ್ಲಾ ಕಡೆ ಸ್ವಚ್ಛತೆಯನ್ನು ಗಾಂಧೀಜಿ ಕಂಡಂತಹ ಗ್ರಾಮಸ್ವರಾಜ್ಯದ ರಾಮರಾಜ್ಯ ಆಗಬೇಕೆಂದರು.

ಸರಕಾರದ ನಿಯಮ ಮಾಸ್ಕ್, ಸಾಮಾಜಿಕ ಅಂತರ ಪಾಲಿಸಿ:
ಸಹಾಯ ಆಯುಕ್ತ ಡಾ. ಯತೀಶ್ ಉಳ್ಳಾಲ್ ಅವರು ಮಾತನಾಡಿ ಕೋವಿಡ್ -೧೯ಗೆ ಸಂಬಂಧಿಸಿ ನಾವು ನಮ್ಮನ್ನು ಕಾಪಾಡುವುದರ ಜೊತೆಗೆ ನಮ್ಮಿಂದ ಇತರರಿಗೆ ತೊಂದರೆ ಆಗಬಾರದು ಎಂಬ ದಿಸೆಯಿಂದ ಜಾಥಾದ ಮೂಲಕ ಪುತ್ತೂರಿನ ಎಲ್ಲಾ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಆಗಿದೆ. ಸರಕಾರದ ನಿಯಮದಂತೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಪಾಲಿಸಿಕೊಂಡು ಆರೋಗ್ಯ ಕಾಪಾಡಿ ಎಂದರು.

ತಿಳುವಳಿಕೆ, ಮನವರಿಕೆಯ ಗುರಿ:
ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ೬ನೇ ವರ್ಷದ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಲ್ಲಿ ಪುತ್ತೂರಿನ ಜನರಿಗೆ ಆರೋಗ್ಯ ಕಾಪಾಡುವ ಕುರಿತು ಜಾಗೃತಿ ಮೂಡಿಸುವ ಜಾಥಾ ಹಮ್ಮಿಕೊಂಡಿದ್ದು, ನಗರಸಭೆಯ ಪ್ರತಿ ವಾರ್ಡ್‌ಗಳಿಗೆ ಜಾಗೃತಿ ಜಾಥಾ ಹೋಗಲಿದೆ. ಇದರ ಜೊತೆ ಕಸ ವಿಂಗಡಣೆ, ವಿಲೇವಾರಿ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ವಾಹನದ ಮೂಲಕ ನಡೆಯಲಿದೆ. ಒಟ್ಟು ಜನರಿಗೆ ಆರೋಗ್ಯ, ಸ್ವಚ್ಛತೆಯ ಕುರಿತು ತಿಳುವಳಿಕೆ ಮತ್ತು ಮನವರಿಕೆ ಮಡುವುದೇ ನಮ್ಮ ಗುರಿ ಎಂದು ಹೇಳಿದರು. ನಗರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ ಮತ್ತು ಕಂದಾಯ ನಿರೀಕ್ಷಕ ರಾಧಾಕೃಷ್ಣ ಗೌಡ ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ಸದಸ್ಯರಾದ ಗೌರಿ ಬನ್ನೂರು, ವಿದ್ಯಾ ಆರ್ ಗೌರಿ, ಇಂದಿರಾ ಪುರುಷೋತ್ತಮ, ಪ್ರೇಮಲತಾ ನಂದಿಲ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಲೆಕ್ಕಾಧಿಕ್ಷಕ ಸಿ.ಆರ್ ದೇವಾಡಿಗ, ಕುಡಿಯುವ ನೀರು ಸರಬರಾಜು ವಿಭಾಗದ ವಸಂತ, ರಾಜೇಶ್ ನಾಕ್ ಸೇರಿದಂತೆ ನಗರಸಭೆ ಸಿಬ್ಬಂದಿಗಳು, ಪೌರ ಕಾರ್ಮಿಕರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.