HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಆಡಳಿತ ನಡೆಸುವುದು ಮಾತ್ರವಲ್ಲ ಸಾಮಾನ್ಯ ಜನರ ಆರೋಗ್ಯ ಕಾಪಾಡುವುದು ನಮ್ಮ ಉದ್ದೇಶ ಬಿಜೆಪಿಯಿಂದ ಎಲ್ಲಾ ವಾರ್ಡ್‌ಗಳಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಷ್ಟ್ರಪಿತ ಮಹತ್ಮಾ ಗಾಂಧೀಜಿಯವರ ಜಯಂತಿಯ ಅಂಗವಾಗಿ ಅ. 2ರಂದು ಪುತ್ತೂರು ನಗರಸಭೆಯ ಎಲ್ಲಾ ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಪುತ್ತೂರು ನಗರಸಭಾ ಬಿಜೆಪಿ ಸದಸ್ಯರು, ನಗರ ಮಂಡಲ ವ್ಯಾಪ್ತಿಯ 42 ಬೂತ್‌ಗಳ ಪದಾಧಿಕಾರಿಗಳು ಹಾಗೂ ನಗರಮಂಡಲದ ವಿವಿಧ ಮೋರ್ಚಾಗಳ ವತಿಯಿಂದ ಆರಂಭಗೊಂಡ ಸ್ವಚ್ಚತಾ ಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಅವರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.


ಆಡಳಿತ ನಡೆಸುವುದು ಮಾತ್ರವಲ್ಲ ಸಾಮಾನ್ಯ ಜನರ ಆರೋಗ್ಯ ಕಾಪಾಡುವುದು ನಮ್ಮ ಉದ್ದೇಶ :
ಗಾಂಧೀಜಿಯವ ಭಾವ ಚಿತ್ರದ ಎದುರು ದೀಪ ಪ್ರಜ್ವಲಿಸಿ ಪುಷ್ಪಾರ್ಚನೆ ಮಾಡಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ದೇಶಕ್ಕಾಗಿ ತನನ್ನು ತಾನು ಸಮರ್ಪಣೆ ಮಾಡಿದ ಮಹಾತ್ಮಾ ಗಾಂಧಿ ಮತ್ತು ದೇಶದ ಕೃಷಿಕರ ಮೇಲೆ ಕಾಳಜಿಯಿಂದ ಜೈಜವಾನ್ ಜೈ ಕಿಸಾನ್ ಎಂಬ ಸಂದೇಶ ನೀಡಿದ ದೇಶದ ೨ನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶಕ್ಕೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಕಳೆದ ೬ ತಿಂಗಳಿನಿಂದ ಕೋವಿಡ್ ಬಂಧನದಲ್ಲಿದ್ದ ನಮಗೆ 151ನೇ ಗಾಂಧೀ ಜಯಂತಿ ಹೆಚ್ಚು ಮಹತ್ವ ನೀಡಿದೆ. ಇವತ್ತು ಕೋವಿಡ್‌ಗೆ ಸಂಬಂಧಿಸಿ ದಂಡದ ಭಯಕ್ಕಿಂತ ಜೀವದ ಭಯ ಮುಖ್ಯ ಎಂದು ಅರಿವು ನೀಡುವ ಕೆಲಸ ಆಗಬೇಕೆಂದು ಹೇಳಿದ ಅವರು ಇವತ್ತು ಸ್ವಚ್ಛತೆಗೆ ಹೆಚ್ಚಿನ ಅದ್ಯತೆ ನೀಡುವ ನಿಟ್ಟಿನಲ್ಲಿ ಪ್ರಧಾನಿಯವರು ಸ್ವಚ್ಛ ಭಾರತ್ ಮಿಷನ್ ಇಲಾಖೆಯನ್ನು ತಂದಿದ್ದಾರೆ. ಇಂತಹ ಸಂದರ್ಭದಲ್ಲಿ ಕೋಟ್ಯಾಂತರ ರೂಪಾಯಿ ಅನುದಾವನ್ನು ಸ್ವಚ್ಛತೆಗೆ ಮೀಸಲಿಟ್ಟರೂ ಕೇವಲ ಸರಕಾರ ನಡೆಸುವುದು ನಮ್ಮ ಕೆಲಸ ಅಲ್ಲ. ಸಾಮಾನ್ಯ ಜನರ ಬದುಕು ನಿರ್ಮಾಣ ಮಾಡುವುದು ಮತ್ತು ಸಾಮಾನ್ಯ ಜನರಿಗೆ ಆರೋಗ್ಯ ಕೊಡುವುದು ನಮ್ಮ ಉದ್ದೇಶ, ಕರ್ತವ್ಯ ಆಗಬೇಕೆಂದರು. ನಮ್ಮೂರಿನ ನಗರ, ಗ್ರಾಮ ಸ್ವಚ್ಛ ಸುಂದರ ನಗರ ಆಗಬೇಕೆಂದು ಕಲ್ಪಣೆ ಇಟ್ಟು ಕೊಂಡು ಸಪ್ತಾಹಕ್ಕೆ ಕರೆ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ಸೇವಾ ಸಪ್ತಾಹ ಆಚರಿಸಿದ್ದೆವು. ಇವತ್ತು ಗಾಂಧೀ ಜಯಂತಿಗೆ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದೇವೆ. ಕಳೆದ ವರ್ಷ ಗಾಂಧೀ ಸಂಕಲ್ಪ ಯಾತ್ರೆಯ ಮೂಲಕ ಮನೆ ಮನೆಗೆ ಗಾಂಧೀ ವಿಚಾರವನ್ನು ಮುಟ್ಟಿಸುವ ಕೆಲಸ ಮಾಡಿದ್ದೇವೆ. ಇವತ್ತು ನಮ್ಮೆಲ್ಲರ ಕಾರ್ಯಕರ್ತರು ಪ್ರತಿ ಭೂತ್‌ಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದಾರೆ ಎಂದ ಅವರು ಇದು ಕೇವಲ ಕಾರ್ಯಕ್ರಮದ ಆಗದೆ ಬದುಕಿನ ಜೀವನದ ಉದ್ದಕ್ಕೂ ಆಗಾಗ ನಮ್ಮ ಆರೋಗ್ಯ ಪರಿಸರ ಕಾಪಾಡುವ ಕೆಲಸ ಆಗಬೇಕು. ಮುಂದಿನ ದಿನ ಮಾಸ್ಕ್ ರಹಿತ ಗಾಂಧೀ ಜಯಂತಿ ಆಗುವುದರ ಜೊತೆಗೆ ನಗರಸಭೆಗೂ ಸ್ವಚ್ಚತೆಯಲ್ಲಿ ನಂ.೧ ಸ್ಥಾನ ದೊರಕಬೇಕೆಂದು ಅವರು ಹೇಳಿದರು.

ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಯುವರಾಜ್ ವಂದಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ಆರ್.ಸಿ.ನಾರಾಯಣ್, ಜಿಲ್ಲಾ ಕಾರ್ಯದರ್ಶಿ ಬೂಡಿಯಾರ್ ರಾಧಾಕೃಷ್ಣ ರೈ, ಜಯಂತಿ ನಾಯಕ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಶೆಟ್ಟಿ, ನಗರಸಭೆ ಸದಸ್ಯರಾದ ಗೌರಿ ಬನ್ನೂರು, ವಿದ್ಯಾ ಆರ್ ಗೌರಿ, ಪದ್ಮನಾಭ ನಾಕ್ ಪಡೀಲ್, ಪ್ರೇಮಲತಾ ನಂದಿಲ, ಭಾಮಿ ಅಶೋಕ್ ಶೆಣೈ, ನವೀನ್ ಪೆರಿಯತ್ತೋಡಿ, ಶಿವರಾಮ, ಮನೋಹರ್ ಕಲ್ಲಾರೆ, ವಸಂತ ಕಾರೆಕ್ಕಾಡು, ಮಹಿಳಾ ಮೋರ್ಚಾದ ಅಧ್ಯಕ್ಷೆ ಶರವಾತಿ ರವಿನಾರಾಯಣ, ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಜಯಶ್ರೀ, ಎಸ್ಟಿ ಮೋರ್ಚಾದ ಅಧ್ಯಕ್ಷ ಅಶೋಕ್ ಬಲ್ನಾಡು, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ, ಆರ್.ಹೆಚ್.ಸೆಂಟರ್‌ನ ಮಾಲಕ ಗೋಪಾಲ್ ಭಟ್, ಅಶೋಕ್ ಕುಂಬ್ಳೆ, ಮನೋಹರ್ ರೈ ಬನ್ನೂರು ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಿಜೆಪಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ರಾಮ್‌ದಾಸ್ ಹಾರಡಿ, ಗೌರಿ ಬನ್ನೂರು ಅವರು ಸ್ವಚ್ಚತಾ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದರು. ಕ್ರೀಡಾಂಗಣದ ಮೇಲುಸ್ತುವಾರಿಯಾಗಿರುವ ಯುವಜನ ಸಬಲೀಕರಣ ಕ್ರೀಡಾಧಿಕಾರಿ ಕ್ರೀಡಾಂಗಣ ಸ್ವಚ್ಛತೆಗೆ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.