HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸಮಾಜದಲ್ಲಿ ಸಮರ್ಪಣಾಭಾವದಿಂದ ಮೆರೆದವರು- ಶ್ರೀಮತಿ ಲಕ್ಷ್ಮೀ ಕಂಪ ಶ್ರದ್ಧಾಂಜಲಿಯಲ್ಲಿ ಜೆ.ಕೃಷ್ಣ ಭಟ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶ್ರೀಮತಿ ಲಕ್ಷ್ಮೀ ರಾಮಣ್ಣ ಗೌಡ ಅವರು ಮನೆಗೆ, ಸಮಾಜದ ಮತ್ತು ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿ ಅನೇಕ ಕೊಡುಗೆಗಳನ್ನು ನೀಡಿ ಸಮರ್ಪಣಾ ಭಾವ ಮೆರೆದವರು ಎಂದು ಕೆದಿಲ ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಜೆ.ಕೃಷ್ಣ ಭಟ್ ನುಡಿದರು. ಕೆದಿಲ ಗಾಂಧಿನಗರ ಶ್ರೀ ಶ್ರೀದೇವಿ ಸಭಾಭವನದಲ್ಲಿ ಅ.2ರಂದು ನಡೆದ ಶ್ರೀಮತಿ ಲಕ್ಷ್ಮೀ ಕಂಪ ಅವರ ವೈಕುಂಠ ಸಮಾರಾಧನೆಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.

ಶ್ರೀಮತಿ ಲಕ್ಷ್ಮೀ ರಾಮಣ್ಣ ಗೌಡರು ಹೇಗೆ ಸಮಾಜಕ್ಕೆ ಅನೇಕ ಕೊಡುಗೆ ನೀಡಿದವರಾಗಿದ್ದರೋ ಅದೇ ರೀತಿ ಅವರ ಮಕ್ಕಳು ಸಹ ಸಮಾಜಕ್ಕೆ, ಊರಿನ ದೈವಸ್ಥಾನ, ಭಜನಾಮಂದಿರ, ದೇವಸ್ಥಾನಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟವರಾಗಿದ್ದಾರೆ ಎಂದ ಅವರು ಅಗಲಿದ ಲಕ್ಷ್ಮೀ ಕಂಪ ಅವರಿಗೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಅಗಲಿದ ಲಕ್ಷ್ಮೀ ಅವರಿಗೆ ಚಿರಶಾಂತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಲಾಯಿತು. ಊರ ಗುರಿಕ್ಕಾರ್ ಆಗಿರುವ ಬಾಲಪ್ಪ ಗೌಡ ಕುದಂಬ್ಲಾಡಿ ಅವರ ಮಾರ್ಗದರ್ಶನದಂತೆ ಆರಂಭದಲ್ಲಿ ಲಕ್ಷ್ಮೀ ಅವರ ಭಾವ ಚಿತ್ರದ ಎದುರು ಅವರ ಪುತ್ರ ಈಶ್ವರ ಗೌಡ ದೀಪ ಪ್ರಜ್ವಲಿಸಿದರು. ಬಳಿಕ ಪುತ್ರಾದ ಸುಂದರ ಗೌಡ, ಪುರಂದರ ಗೌಡ, ಧರ್ನಪ್ಪ ಗೌಡ, ಪುತ್ರಿಯರಾದ ಸೇಸಮ್ಮ, ಕಮಲ, ಮೋನಮ್ಮ, ಬಾಲಕ್ಕ, ಸುಮತಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಗಣ್ಯರು ಪಷ್ಪಾರ್ಚಣೆ ಮಾಡಿದರು. ಶಾಸಕ ಸಂಜೀವ ಮಠಂದೂರು, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಸಂಘದ ಪದಾಧಿಕಾರಿಗಳು ಸೇರಿದಂತೆ ಊರಿನ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿರಿದ್ದರು. ಆಳ್ವಾಸ್ ಕಾಲೇಜಿನ ಉಪನ್ಯಾಸಕ ಸಂತೋಷ್ ಕೆ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.