HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕಂಬಳ ಪ್ರೇಮಿ ರಿಚರ್ಡ್ ಡಾಯಸ್, ಡಾಯಸ್ ಕಾಂಪ್ಲೆಕ್ಸ್ ಮಾಲಕ ಇಗ್ನೀಶಿಯಸ್ ಡಾಯಸ್ ಸಹೋದರರ ಶ್ರದ್ಧಾಂಜಲಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಇತ್ತೀಚೆಗೆ ಅಗಲಿದ ಕೋಟಿ ಚೆನ್ನಯ ಜೋಡುಕರೆ ಕಂಬಳ ಪುತ್ತೂರು ಇದರ ಆರಂಭದಿಂದಲೂ ಸಕ್ರಿಯರಾಗಿ ಭಾಗವಹಿಸುತ್ತಾ ಬಂದಿದ್ದು, ಪ್ರಸ್ತುತ ಕಂಬಳ ಸಮಿತಿಯ ಉಪಾಧ್ಯಕ್ಷರಾಗಿರುವ ಕಂಬಳ ಪ್ರೇಮಿ ಇಲ್ಲಿನ ಎಪಿಎಂಸಿ ರಸ್ತೆಯ ಲಿಲ್ಲಿ ಕಾಂಪ್ಲೆಕ್ಸ್, ಕ್ರಿಸ್ಟೋಫರ್ ಅರ್ಥ್ ಮೂವರ್ಸ್, ಕ್ರಿಸ್ಟೋಫರ್ ಸರ್ವಿಸ್ ಸ್ಟೇಶನ್ ನ ಮಾಲಕರಾದ ರಿಚರ್ಡ್(ಲೂಯಿಸ್) ಡಾಯಸ್ ಹಾಗೂ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಾಜಿ ನಿರ್ದೇಶಕ, ಎಪಿಎಂಸಿ ರಸ್ತೆಯ ಡಾಯಸ್ ಕಾಂಪ್ಲೆಕ್ಸ್ ನ ಮಾಲಕರಾದ ಇಗ್ನೀಶಿಯಸ್ ಡಾಯಸ್ ಸಹೋದರರ ತಿಂಗಳ ನೆನಪಿನ ಪೂಜೆಯು ಏಳ್ಮುಡಿ ಸಿಮೆತರಿಯ ಚಾಪೆಲ್ ನಲ್ಲಿ ಅ.2 ರಂದು ಜರಗಿತು.

ಮಾಯಿದೆ ದೇವುಸ್ ಚರ್ಚ್ ನ ಪ್ರಧಾನ ಧರ್ಮಗುರು ವಂ/ಲಾರೆನ್ಸ್ ಮಸ್ಕರೇನ್ಹಸ್ ರವರು ಬಲಿಪೂಜೆಯನ್ನು ನೆರವೇರಿಸಿ, ಅಗಲಿದ ರಿಚರ್ಡ್ ಡಾಯಸ್ ಹಾಗೂ ಇಗ್ನೀಶಿಯಸ್ ಡಾಯಸ್ ಸಹೋದರರ ಆತ್ಕಕ್ಕೆ ಚಿರಶಾಂತಿ ದೊರಕಲೆಂದು ಪ್ರಾರ್ಥಿಸಿದರು. ಪೂಜೆಯ ಬಳಿಕ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿನ ನೂತನ ಸಭಾಂಗಣದಲ್ಲಿ ನಡೆದ ಸರಳ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಸೋಜಾ ಮೆಟಲ್ಸ್ ನ ಮಾಲಕರಾದ ಜೋನ್ ಕುಟಿನ್ಹಾರವರು, ರಿಚರ್ಡ್ ಡಾಯಸ್ ಹಾಗೂ ಇಗ್ನೀಶಿಯಸ್ ಡಾಯಸ್ ಸಹೋದರರು ಅವರವರ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡುವ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಒಂದರ್ಥದಲ್ಲಿ ಇಲ್ಲಿನ ಎಪಿಎಂಸಿ ರಸ್ತೆಯ ನಿವಾಸಿಗಳಲ್ಲಿ ಡಾಯಸ್ ರವರ ಕುಟುಂಬ ಬಹಳ ಪ್ರಸಿದ್ಧಿ ಪಡೆದಿದೆ ಎಂದರೆ ತಪ್ಪಾಗಲಾರದು. ಇತರ ಧರ್ಮದವರು ಕೂಡ ಡಾಯಸ್ ಕುಟುಂಬದವರನ್ನು ಬಹಳಷ್ಟು ಹಚ್ಚಿಕೊಂಡಿರುವುದು ಅವರು ಮಾಡಿದ ಸಮಾಜಸೇವೆಯೇ ಸಾಕ್ಷಿಯಾಗಿದೆ. ತಿಂಗಳುಗಳ ಅಂತರದಲ್ಲಿ ಈ ಈರ್ವರು ಸಹೋದರರು ನಮ್ಮಿಂದ ದೂರವಾಗಿರುವುದು ನಮಗೂ ಮತ್ತು ಅವರ ಕುಟುಂಬಕ್ಕೂ ನೋವಿನ ಸಂಗತಿಯಾಗಿದೆ. ಈ ಈರ್ವರು ಸಹೋದರರು ಮಾಡಿರುವ ಉತ್ತಮ ನಡೆಯನ್ನು ನಾವೆಲ್ಲರೂ ಸ್ಮರಿಸುತ್ತಾ, ಅವರುಗಳ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂಬುದೇ ನಮ್ಮೆಲ್ಲರ ಪ್ರಾರ್ಥನೆಯಾಗಿದೆ ಎಂದು ಹೇಳಿ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಿ.ರಿಚರ್ಡ್ ಡಾಯಸ್ ರವರ ಪತ್ನಿ ಐಡಾ ಡಾಯಸ್ ಮತ್ತು ಮಕ್ಕಳು, ದಿ.ಇಗ್ನೀಶಿಯಸ್ ಡಾಯಸ್ ರವರ ಪತ್ನಿ ಫ್ಲೋರಿನ್ ಡಾಯಸ್ ಮತ್ತು ಮಕ್ಕಳು, ಸಹೋದರ ವಲೇರಿಯನ್ ಡಾಯಸ್ ಮತ್ತು ಫ್ಯಾಮಿಲಿ, ಸಹೋದರಿಯರಾದ ಝೀಟ ಡಾಯಸ್ ಮತ್ತು ಫ್ಯಾಮಿಲಿ, ರೀಟ ಡಾಯಸ್ ಮತ್ತು ಫ್ಯಾಮಿಲಿಯವರ ಜೊತೆಗೆ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಾಯಿದೆ ದೇವುಸ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಆರ್ಥಿಕ ಸಮಿತಿ ಸದಸ್ಯರಾದ ಝೇವಿಯರ್ ಡಿ’ಸೋಜ, ವಿನ್ಸೆಂಟ್ ತಾವ್ರೋ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ, ನಿರ್ದೇಶಕ ಜೆ.ಪಿ ರೊಡ್ರಿಗಸ್ ಹಾಗೂ ಡಾಯಸ್ ಕಾಂಪ್ಲೆಕ್ಸ್, ಲಿಲ್ಲಿ ಕಾಂಪ್ಲೆಕ್ಸ್, ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿನ ಮಳಿಗೆಗಳ ಮಾಲಕರು ಮತ್ತು ಸಿಬ್ಬಂದಿ, ದಿ.ರಿಚರ್ಡ್ ಡಾಯಸ್ ಹಾಗೂ ಇಗ್ನೀಶಿಯಸ್ ಡಾಯಸ್ ರವರ ಹಿತೈಷಿಗಳು ಉಪಸ್ಥಿತರಿದ್ದು ಅಗಲಿದ ರಿಚರ್ಡ್ ಡಾಯಸ್ ಹಾಗೂ ಇಗ್ನೀಶಿಯಸ್ ಡಾಯಸ್ ಸಹೋದರರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಅಗಲಿದ ರಿಚರ್ಡ್ ಡಾಯಸ್ ಹಾಗೂ ಇಗ್ನೀಶಿಯಸ್ ಡಾಯಸ್ ರವರ ಸಹೋದರಿ ರೀಟ ಡಾಯಸ್ ರವರು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ವಾಳೆಯ ಗುರಿಕಾರ ಜೋನ್ ಡಿ’ಸೋಜರವರು ಪ್ರಾರ್ಥನಾ ವಿಧಿಯನ್ನು ನೆರವೇರಿಸಿ, ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.