ಕಾವಿನ ಗಾಂಧಿಗೆ ಲಯನ್ಸ್ ವತಿಯಿಂದ ಸನ್ಮಾನ

Puttur_Advt_NewsUnder_1
Puttur_Advt_NewsUnder_1


ಪುತ್ತೂರು:ರಾಷ್ಟ್ರ ಪಿತ ಮಹಾತ್ಮಾ ಗಾಂಧೀಜಿಯವರ ಜನ್ಮದಿನವಾದ ಇಂದು ಕಾವಿನ ಗಾಂಧಿ ಎಂದೇ ಖ್ಯಾತರಾಗಿರುವ ಚಿಕ್ಕಪ್ಪ ರೈ ಎನ್ ಅವರ ಜನ್ಮದಿನವನ್ನು ಆಚರಿಸಿ ಅವರನ್ನು ಸನ್ಮಾನಿಸಲಾ ಯಿತು. ಪುತ್ತೂರು ಕಾವು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಇಂದು ಕಾವು ಅಕ್ಷಯ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ನಡೆಯಿತು. ಮಹಾತ್ಮಾ ಗಾಂಧೀಜಿವರು ನಮಗೆಲ್ಲ ಎಂದಿಗೂ ಮಹಾತ್ಮಾ ರಾಗಿದ್ದಾರೆ. ಅವರು ಒಂದು ಅತ್ಯಪೂರ್ವಾದ ಶಕ್ತಿ.ಎಲ್ಲರೂ ಹೋರಾಟ ಎಂದರೆ ಆಯುಧ ಹಿಡಿಯುವುದನ್ನು ಅರಿತರೆ ಇವರು ಅಹಿಂಸೆ, ಉಪವಾಸ ಸತ್ಯಾಗ್ರಹ ಚಳುವಳಿಯ ಮೂಲಕ ಎಲ್ಲರ ಮನಸನ್ನು ಗೆದ್ದು ಸ್ವಾತಂತ್ರ್ಯ ಗೆದ್ದವರು.ಇವರ ತತ್ವ ಆದರ್ಶಗಳು ಎಂದಿಗೂ ಪ್ರಸ್ತುತ ಎಂದು ಲಯನ್ಸ್ ವಲಯ 1 ರ ವಲಯಾಧ್ಯಕ್ಷ ಲ.ಕಾವು ಹೇಮನಾಥ್ ಶೆಟ್ಟಿ ಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷಿ ಕುಟುಂಬದಲ್ಲಿ ಜನಿಸಿದ ಚಿಕ್ಕಪ್ಪ ರೈ ಯವರು ಬಾಲ್ಯದಲ್ಲಿಯೇ ಪೋಲಿಯೋ ಪೀಡಿತರಾದರೂ ಛಲಬಿಡದೆ ಕೃಷಿಕನಾಗಿ ದುಡಿದವರು, ನಂತರದ ದಿನಗಳಲ್ಲಿ ಜವಳಿ ಅಂಗಡಿ ಟೈಲರ್ ವೃತ್ತಿಯನ್ನು ಆಯ್ದು ತನ್ನ ಕುಟುಂಬವನ್ನು ಸಲಹಿದರು. ಜೀವನ ಪೂರ್ತಿ ಗಾಂಧೀಜಿ ಯ ಆದರ್ಶವನ್ನು ಪಾಲಿಸಿಕೊಂಡು ನಮ್ಮೆಲ್ಲರಿಂದ ಗಾಂಧೀ ಎಂದು ಕೆರಸಿಕೊಂಡವರು ಈ ಸಂದರ್ಭದಲ್ಲಿ ಅವರ ಹುಟ್ಟುಹಬ್ಬ ಆಚರಿಸಿ ಸನ್ಮಾನಿಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.

ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ಲ.ರಮೇಶ್ ರೈ ಸಾಂತ್ಯ ಸ್ವಾಗತಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯದರ್ಶಿ ಲ. ಪಾವನರಾಮ ವಂದಿಸಿದರು.ಕಾರ್ಯಕ್ರಮ ದಲ್ಲಿ ಜಿ ಪಂ ಸದಸ್ಯೆ ಲ.ಅನಿತಾಹೇಮನಾಥ್ ಶೆಟ್ಟಿ, ಲ. ದಿವ್ಯನಾಥ್ ಶೆಟ್ಟಿ, ಸೋಮವಾರ ಪೇಟೆ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಲ. ಮಂಜುನಾಥ್ ಚೌಟ, ಲ. ಶಶಿಕಲಾ ಚೌಟ ಮತ್ತು ಲಯನ್ಸ್ ಕುಟುಂಬಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.