HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ ನಲ್ಲಿ ಗಾಂಧೀಜಯಂತಿ ಆಚರಣೆ| ಸರಳ, ಸ್ವಾವಲಂಬಿ ಬದುಕಿಗೆ ಗಾಂಧೀಜಿಯವರ ಜೀವನ ಪ್ರೇರಣೆ: ಡಾ. ವರದರಾಜಚಂದ್ರಗಿರಿ

Puttur_Advt_NewsUnder_1
Puttur_Advt_NewsUnder_1

 
ಪುತ್ತೂರು: ಸರಳತೆಯನ್ನು ನಮ್ಮ ಜೀವನದ ಭಾಗವಾಗಿಸಿಕೊಳ್ಳುವುದು ಅವಶ್ಯಕ, ರಾಮ ರಾಜ್ಯದ ಕನಸು ಗಾಂಧೀಜಿಯವರದು, ಇದರ ಅರ್ಥ ಐಷಾರಾಮಿ ಜೀವನ ನಡೆಸುವುದಲ್ಲ ಸರಳವಾಗಿ ಜೀವನ ನಡೆಸುವುದಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಹೇಳಿದರು. ಅವರು ಕಾಲೇಜಿನಲ್ಲಿ ಗಾಂಧೀಜಿಯವರ ಜನ್ಮದಿನದ ಪ್ರಯುಕ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮತ್ತು ರೋವರ್‍ಸ್ ಮತ್ತು ರೇಂಜರ್‍ಸ್ ಘಟಕಗಳು ಆಯೋಜಿಸಿದ “ವಿಶ್ವ ಅಹಿಂಸಾ ದಿನಾಚರಣೆ”ಯಲ್ಲಿ ‘ಗಾಂಧೀಜಿ ಬದುಕು, ಚಿಂತನೆ ಮತ್ತು ಪ್ರಸ್ತುತತೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಪ್ರಸ್ತುತ ಜೀವನಲ್ಲಿ ಅವಶ್ಯಕತೆ ಇರುವ ಸ್ವಾವಲಂಬಿ ಬದುಕು, ಪರೋಪಕಾರ ಮನೋಭಾವ, ಪರಿಸರ ಬಗೆಗಿನ ಕಾಳಜಿಗಳನ್ನು ಯುವ ಸಮುದಾಯ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಶ್ರೀ ಹರಿಪ್ರಸಾದ್‌ ಎಸ್ ‌ಇವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳು ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳಿಂದ ಪ್ರೇರಿತವಾದ ಯೋಜನೆ, ಎನ್ನೆಸ್ಸೆಸ್‌ನಲ್ಲಿನ ತೊಡಗಿಸಿಕೊಳ್ಳುವಿಕೆ ವಿಧ್ಯಾರ್ಥಿಗಳಲ್ಲಿ ಸಮಾಜಮುಖಿ ಪ್ರಾಮಾಣಿಕ ಜೀವನ ನಡೆಸಲು ಸಹಕಾರಿ ಎಂದು ಹೇಳಿದರು.


ಗಾಂಧಿ ಜಯಂತಿಯ ಅಂಗವಾಗಿ ಕಾಲೇಜಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ದಾಮೋದರ ಕಣಜಾಲು, ಡಾ.ದೇವರಾಜ್‌ಆರ್, ಉದಯರಾಜ್‌ಎಸ್, ಶ್ರೀ ಶ್ರೀಧರಮೂರ್ತಿ ಕೆ ಮತ್ತು  ಶಶಿಕುಮಾರ ಇವರು ಉಪಸ್ಥಿತರಿದ್ದರು. ಹರಿಪ್ರಸಾದ್‌ಎಸ್ ಸ್ವಾಗತಿಸಿದರು. ಡಾ. ಪೊಡಿಯ ವಂದಿಸಿದರು. ವಿಧ್ಯಾರ್ಥಿ ನಿರಂಜಿತಾ ಜಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.