HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ತುಳು ಸಂಸ್ಕೃತಿಗೆ ರಾಷ್ಟ್ರ-ಅಂತಾರಾಷ್ಟ್ರೀಯ ಮನ್ನಣೆ ಸಿಗಲಿ ರಾಜಬೂಡುದ ಪುದ್ವಾರ್ ಲೇಸ್ 2020 ರಲ್ಲಿ ಹೇಮಂತ್ ರೈ ಮನವಳಿಕೆಗುತ್ತು

Puttur_Advt_NewsUnder_1
Puttur_Advt_NewsUnder_1


ಬೆಂಗಳೂರು: ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಂತೆ ಸಂಸ್ಕೃತಿ, ಆಚರಣೆಗಳನ್ನು ಮರೆಯಬಾರದು. ಇವನ್ನು ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುವಂತೆ ಮಾಡುವ ಕೆಲಸ ಆಗಬೇಕಿದೆ ಎಂದು ಭಾರತ – ಮಾಲ್ಡೀವ್ಸ್ ಟ್ರೇಡ್ ಫೋರಂನ ಉಪಾಧ್ಯಕ್ಷ, ಪುತ್ತೂರು ಮೂಲದ ಹೇಮಂತ್ ರೈ ಮನವಳಿಕೆಗುತ್ತು ಹೇಳಿದರು. ಬೆಂಗಳೂರಿನಲ್ಲಿರುವ ವಿವಿಧ ತುಳು ಸಂಘಟನೆ ಹಾಗೂ ಬೆಂಗಳೂರು ಕರಾವಳಿಗರ ಒಕ್ಕೂಟದ ಅಧ್ಯಕ್ಷ ಸುಂದರ್‌ರಾಜ್ ರೈ ಅವರ ನೇತೃತ್ವದಲ್ಲಿ ಶುಕ್ರವಾರ ಮೆಜೆಸ್ಟಿಕ್‌ನ ಹೋಟೆಲ್ ಸ್ವಾಗತ ಸಭಾಂಗಣದಲ್ಲಿ ರಾಜಬೂಡುದ ಪುದ್ವಾರ್ ಲೇಸ್ – ೨೦೨೦ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದವರೆಲ್ಲರೂ ಕೃಷಿ ಪ್ರಧಾನ ವ್ಯವಸ್ಥೆಯೇ ಹಿನ್ನೆಲೆ ಹೊಂದಿರುತ್ತಾರೆ. ಈ ಕೃಷಿ ಪ್ರಧಾನ ವ್ಯವಸ್ಥೆಯ ಒಂದು ಭಾಗ ಪುದ್ವಾರ್ ಅಥವಾ ಹೊಸ ಅಕ್ಕಿ ಊಟ. ನಾವು ಮಣ್ಣು, ನೀರು, ಪ್ರಕೃತಿ, ಗೋವು ಇವನ್ನೆಲ್ಲಾ ಆರಾಧಿಸುತ್ತಾ ಬಂದವರು. ಇವೆಲ್ಲಾ ನಮಗೆ ಸಿಕ್ಕಿದ ಬಳುವಳಿ. ಇದರ ಜೊತೆಗೆ ದೈವಾರಾಧನೆಯನ್ನು ಮಾಡುತ್ತಿದ್ದೇವೆ. ಆದ್ದರಿಂದ ಕೇರಳದಂತೆಯೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದೇವರ ನಾಡೆಂದು ಹೇಳಿದರೂ ತಪ್ಪಾಗದು. ಈ ಎಲ್ಲಾ ಆಚರಣೆ, ಸಂಸ್ಕೃತಿ ಮೂಲೆಗುಂಪಾಗದಂತೆ ಎಚ್ಚರ ವಹಿಸಬೇಕಾದ ಅಗತ್ಯತೆ ನಮ್ಮ ಮುಂದಿದೆ. ಈ ಹಿನ್ನೆಲೆಯಲ್ಲಿ ರಾಜಬೂಡುದ ಪುದ್ವಾರ್ ಕಾರ್ಯಕ್ರಮ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂದರು.

ತುಳು ಸಂಸ್ಕೃತಿಯು ರಾಷ್ಟ್ರ – ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಳ್ಳಬೇಕಾಗಿದೆ. ಕೇರಳಿಗರು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ. ತುಳುವರಲ್ಲಿಯೂ ಕೂಡ ಕೇಂದ್ರ ಸಚಿವರು ಸೇರಿದಂತೆ ಉನ್ನತ ಹುದ್ದೆಯಲ್ಲಿ ಇರುವವರಿದ್ದಾರೆ. ಅವರ ಮೇಲೆ ಒತ್ತಡ ತಂದು ತುಳುವಿಗೆ ಸೂಕ್ತ ಸ್ಥಾನಮಾನ ಸಿಗುವಂತೆ ಮಾಡುವ ಕೆಲಸ ಆಗಬೇಕು. ಇದಕ್ಕಾಗಿ ಬೆಂಗಳೂರಿನರುವ ಎಲ್ಲಾ ದ.ಕ.ದ ಸಂಘಟನೆಗಳು ಒಂದಾಗಿ ಮುನ್ನಡೆಯಬೇಕು. ಕೊರೋನಾದಿಂದ ಎದುರಾಗಿರುವ ಋಣಾತ್ಮಕ ಅಂಶಗಳನ್ನೇ ಅಸ್ತ್ರವಾಗಿ ಬಳಸಿಕೊಂಡು, ಯಶಸ್ಸಿನತ್ತ ಮುನ್ನಡೆಬೇಕು ಎಂದರು. ಪುದ್ವಾರ್ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಲ್ಲವ ಸಂಘದ ಅಧ್ಯಕ್ಷ ವೇದ ಕುಮಾರ್, ನಮ್ಮನ್ನು ಹಿಂದಿಕ್ಕಿ ಕೊರೋನಾ ಮುಂದೆ ಹೋಗುತ್ತಿದೆ. ಇಂತಹ ಸಂದರ್ಭದಲ್ಲೂ ನಮ್ಮ ತುಳು ಆಚರಣೆಗಳನ್ನು ಮರೆಯಬಾರದು. ಹೊಸ ಅಕ್ಕಿಯೇ (ಪುದ್ವಾರ್) ಕೊರೋನಾಗೆ ಮದ್ದಾಗಲಿ. ರಾಜ್ಯ, ದೇಶ ಎಂತಹ ಸಂಕಷ್ಟದಲ್ಲಿದೆ ಎಂಬುದು ನಮಗೆ ತಿಳಿದಿದೆ. ಇವೆಲ್ಲಾ ನೀಗಿ, ಮಾಸ್ಕ್ ಕಳಚಿ ಮುಖ ತೋರಿಸಿಕೊಂಡು ಓಡಾಡುವ ದಿನಕ್ಕೆ ಪುದ್ವಾರ್ ನಾಂದಿ ಹಾಡಲಿ ಎಂದು ಶುಭಹಾರೈಸಿದರು.


ಇದೇ ಸಂದರ್ಭ ಭಾರತ – ಮಾಲ್ಡೀವ್ಸ್ ಟ್ರೇಡ್ ಫಾರಂನ ಉಪಾಧ್ಯಕ್ಷ ಹೇಮಂತ್ ರೈ ಮನವಳಿಕೆಗುತ್ತು, ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಚ್.ಎಸ್. ರಾಘವೇಂದ್ರ ಶೆಟ್ಟಿ, ಬೆಂಗಳೂರು ಉತ್ತರ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಆಶಾ ರಾವ್ ಅವರನ್ನು ಸನ್ಮಾನಿಸಲಾಯಿತು. ಕಾ-ನಾದ ಫಿನಿಕ್ಸ್‌ನ ಡಾ. ಗುರುಪ್ರಸಾದ್ ಅವರು, ತುಳು ಲಿಪಿ ಸೇರಿದಂತೆ 10 ಭಾಷೆಗಳನ್ನು ಟೈಪಿಸಬಲ್ಲ ಕೀಪ್ಯಾಡ್ ಅನ್ನು ಪರಿಚಯಿಸಿದರು. ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ ಚೇಂಡ್ಲ, ಆನೆಗುಂದಿ ಪಂಚ ಸಿಂಹಾಸನ ವಿಕಾಸ ಪೀಠದ ಹರಿಶ್ಚಂದ್ರ ಆಚಾರ್ಯ, ಪರಿವಾರ ಬಂಟ ಸಂಘದ ರಘುವೀರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ರಾಜ್ ಸಂಪಾಜೆ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.