HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬ್ಲಾಕ್ ಕಾಂಗ್ರೆಸ್‌ನಿಂದ ಕಿಲ್ಲೆ ಮೈದಾನದಲ್ಲಿ ಸ್ವಚ್ಛತೆಗೆ ಆದ್ಯತೆ: ಗಾಂಧೀಜಿ, ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ – ಕೃಷಿ ಕಾಯ್ದೆ ವಿರುದ್ಧ ಧರಣಿ ಸತ್ಯಾಗ್ರಹ

Puttur_Advt_NewsUnder_1
Puttur_Advt_NewsUnder_1

ಬಂಡವಾಳ ಶಾಹಿ ಪರವಾಗಿರುವ ಸರಕಾರ ರೈತರನ್ನು ಕಡೆಗಣಿಸಿದೆ- ಮಹಮ್ಮದ್ ಬಡಗನ್ನೂರು
ಬಿಜೆಪಿಯಿಂದ ರೈತರ ಜಮೀನು ಕಿತ್ತುಕೊಳ್ಳುವ ಯೋಜನೆ – ಉಮಾನಾಥ್ ಶೆಟ್ಟಿ
ರೈತರ ಬೆನ್ನುಮೂಳೆಗೆ ಕೊಡಲಿ ಏಟು ಕೊಟ್ಟ ಬಿಜೆಪಿ- ಸಾಹಿರ ಜುಬೇರ್
ಮಹಿಳೆಗೆ ರಕ್ಷಣೆ ಕೊಡದ ಸರಕಾರ – ಮುರಳಿಧರ ರೈ ಮಠಂತಬೆಟ್ಟು
ಗಾಂಧೀ ಜಯಂತಿ ಸರಕಾರದ ನಾಟಕ – ಎಮ್.ಬಿ.ವಿಶ್ವನಾಥ ರೈ
ಕಾಂಗ್ರೆಸ್ ಹುಟ್ಟಿದ್ದು ಜನರ ಸೇವೆಗಾಗಿ – ಭಾಸ್ಕರ್ ಗೌಡ ಕೋಡಿಂಬಾಳ
ಅತ್ಯಾಚಾರ ಆಡಳಿತದ ದೌರ್ಬಲ್ಯ – ಮುರಳೀಧರ ಕೆಮ್ಮಾರ

ಪುತ್ತೂರು : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ದೇಶದ 2ನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಆಚರಣೆಯನ್ನು ಗಾಂಧೀಜಿಯವರ ಸಂಕಲ್ಪದಂತೆ ಸ್ವಚ್ಛತೆಗೆ ಆದ್ಯತೆ ಕೊಟ್ಟು ಕಿಲ್ಲೆ ಮೈದಾನದ ಅಮರ್‌ಜವಾನ್ ಜ್ಯೋತಿ ಸ್ಮಾರಕದ ಬಳಿ ಕಸ, ಹುಲ್ಲು ಕಡ್ಡಿಗಳನ್ನು ವಿಲೇವಾರಿ, ಶುಚಿಗೊಳಿಸಿದ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರ ಅಂಗೀಕರಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ಧರಣಿ ಸತ್ಯಾಗ್ರಹವು ಪುತ್ತೂರು ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅ.೨ರಂದು ನಡೆಯಿತು.
ಧರಣಿ ಸತ್ಯಾಗ್ರಹಕ್ಕೂ ಆರಂಭದಲ್ಲಿ ಮೈದಾನದಲ್ಲಿದ್ದ ಕಸಗಳನ್ನು, ಹುಲ್ಲುಗಳು, ತರೆಗೆರೆಗಳನ್ನು ತೆರವು ಮಾಡಿದ ಬಳಿಕ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಭಾವ ಚಿತ್ರ ಇಟ್ಟು ಪುಷ್ಪಾರ್ಚನೆ ಮಾಡಲಾಯಿತು. ಇದರ ಜೊತೆಗೆ ಹತ್ಯಾಚರಕ್ಕೆ ಒಳಪಟ್ಟ ಮನಿಷಾ ವಾಲ್ಮೀಕಿಯ ಭಾವ ಚಿತ್ರಿವಿಟ್ಟು ಆಕೆಗೆ ನ್ಯಾಯ ಕೊಡುವಂತೆ ಒತ್ತಾಯಿಸಲಾಯಿತು.

ಬಂಡವಾಳ ಶಾಹಿ ಪರವಾಗಿರುವ ಸರಕಾರ ರೈತರನ್ನು ಕಡೆಗಣಿಸಿದೆ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಅವರು ಮಾತನಾಡಿ ರಾಷ್ಟ್ರದ ಏಕತೆ, ಅಖಂಡತೆ, ಸಮಗ್ರತೆಯನ್ನು ಬಿಂಬಿಸಿ ರಾಷ್ಟ್ರದ ಸ್ವತಂತ್ರ್ಯಕ್ಕೆ ದೊಡ್ಡ ಶಕ್ತಿ ನೀಡಿ ಹುತಾತ್ಮರಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ದೇಶದ ೨ನೇ ಪ್ರಧಾನ ಮಂತ್ರಿಯಾಗಿ ಜೈವವಾಜ್ ಜೈ ಕಿಸಾನ್ ಸಂದೇಶವನ್ನು ನೀಡಿ ಅಮರರಾದ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮದಿನೋತ್ಸವದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ಜನವಿರೋಧಿ ನೀತಿ ದೇಶದ ರೈತರನ್ನು ಕಡೆಗಣಿಸಿದೆ. ಅಡಿಕೆ ಬೆಲೆ ಕುಸಿದಾಗ ವಾರಣಾಸಿ ಸುಬ್ರಾಯ ಅವರು ಕ್ಯಾಂಪ್ಕೋ ಹುಟ್ಟು ಹಾಕಿ ಅಡಿಕೆಗೆ ಬೆಂಬಲ ಬೆಲೆ ಕೊಡುವ ಕೆಲಸ ಮಾಡಿದ್ದರು. ಆದರೆ ಇವತ್ತು ಸರಕಾರ ರೈತರ ಬೆನ್ನೆಲುಬಿಗೆ ಬರೆ ಎಳೆಯುತ್ತಿದೆ. ಉಳುವವನೆ ಭೂಮಿಯು ಒಡೆಯನೆಂದು ಇಂದಿರಾಗಾಂಧಿ ದೇಶಕ್ಕೆ ಶಕ್ತಿ ನೀಡಿದರು. ಬಡವರ್ಗಕ್ಕೆ ಸಾಂತ್ವನ ನೀಡಿದರು. ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸ್ ಅವರು ಉಳುವವನೆ ಹೊಲದೊಡೆಯನೆಂದು ಭೂಸುಧಾರಣೆ ಕಾಯ್ದೆ ತರುವ ಮೂಲಕ ಬಡವರಿಗೆ ಭೂಮಿ ಹಂಚುವ ಕೆಲಸ ಆಗಿತ್ತು. ಆದರೆ ಕರ್ನಾಟಕ ಬಿಜೆಪಿ ಸರಕಾರ ಸುಮಾರು ೬೦ ಸಾವಿರಕ್ಕಿಂತ ಹೆಚ್ಚು ಹೆಕ್ಟೇರ್ ಕೃಷಿ ಭೂಮಿಯನ್ನು ಬಂಡವಾಳ ಶಾಹಿಗಳಿಗೆ ನೀಡುವ ಮೂಲಕ ರೈತರನ್ನು ಕಡೆಗಣಿಸಿದೆ. ಬಂಡವಾಳ ಶಾಹಿ ಪರವಾಗಿ ಸರಕಾರ ನಿಂತಿದೆ ಎಂದರು.

ಬಿಜೆಪಿಯಿಂದ ರೈತರ ಜಮೀನು ಕಿತ್ತುಕೊಳ್ಳುವ ಯೋಜನೆ:
ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಉಮಾನಾಥ್ ಶೆಟ್ಟಿಯವರು ಮಾತನಾಡಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ದೇಶದ ರೈತರಿಗೆ ಕೃಷಿ ಮಾಡಲು ಭೂಮಿ ಕೊಟ್ಟರೆ ಇವತ್ತು ಬಿಜೆಪಿ ಸರಕಾರ ಕೊಟ್ಟ ಭೂಮಿಯನ್ನು ಕಿತ್ತು ಕೊಳ್ಳುವ ಸಂಗತಿ ಮಾಡುತ್ತಿದೆ. ಹಿಂದೆ ಭೂಮಿ ಕೊಡುವಾಗ ಕಾನೂನು ಮಾಡುತ್ತಿದ್ದರು. ಈಗ ಭೂಮಿಯನ್ನು ಕಿತ್ತು ಕೊಳ್ಳಲು ಕಾನೂನು ಮಾಡಲು ಆಗಿಲ್ಲ ಎಂದು ಸುಗ್ರಿವಾಜ್ಞೆ ಮಾಡುತ್ತಿದ್ದಾರೆ. ಇದು ದೇಶದ ರೈತರಿಗೆ ಮಾಡಿರುವ ದೊಡ್ಡ ಅನ್ಯಾಯ ಎಂದರು. ಪ್ರಜಾಪ್ರಭುತ್ವದಲ್ಲಿ ಗೆದ್ದಂತಹ ನಮ್ಮ ಶಾಸಕರು ತೀರ್ಮಾಣ ಮಾಡಿ ರೈತರಿಗೆ ಅನುಕೂಲ ಆಗುವಂತಹ ಕಾನೂನು ಮಾಡಬೇಕಿತು. ಆದರೆ ಇವರು ರೈತರರಿಗೆ ಅನಾನುಕೂಲ ಆಗುವಂತಹ ಕಾನೂನು ತಂದಿದ್ದಾರೆ. ಸುಗ್ರಿವಾಜ್ಞೆ ತರುವಂತಹ ಅವಶ್ಯಕತೆ ಏನಿತ್ತು ಎಂದು ಅವರು ಪ್ರಶ್ನಿಸಿದರು.

ರೈತರ ಬೆನ್ನುಮೂಳೆಗೆ ಕೊಡಲಿ ಏಟು ಕೊಟ್ಟ ಬಿಜೆಪಿ:
ನ್ಯಾಯವಾದಿ ಸಾಹಿರ ಜುಬೇರ್ ಅವರು ಮಾತನಾಡಿ ರೈತರು ದೇಶದ ಬೆನ್ನುಮೂಳೆ ಎಂದು ಹೇಳುವವರೆ ಇವತ್ತು ಅವರ ಬೆನ್ನುಮೂಳೆಗೆ ಕೊಡಲಿ ಏಟು ಕೊಟ್ಟು ದೇಶದ ಅಭಿವೃದ್ಧಿ ಮಾಡಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ. ರೈತರನ್ನು ಯಾವ ಸ್ಥಾನದಲ್ಲಿ ಇಡಬೇಕೋ ಅಲ್ಲಿ ಇಡದೆ ರೈತರ ಉತ್ತಮ ಗೌರವವನ್ನು ಕಿತ್ತು ಬಂಡವಾಳ ಶಾಹಿಗಳಿಗೆ ಬಿಜೆಪಿ ಸರಕಾರ ನೀಡುತ್ತಿದೆ ಎಂದ ಅವರು ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಕುರಿತು ಮಾತನಾಡಿದರು.


ಮಹಿಳೆಗೆ ರಕ್ಷಣೆ ಕೊಡದ ಸರಕಾರ:
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಅವರು ಮಾತನಾಡಿ ದೇಶದಲ್ಲಿ ಭೂಸುಧಾರಣೆ ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಆಗುವ ಶೋಷಣೆ ವಿರುದ್ಧ ಇವತ್ತು ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜಯಂತಿಯ ಮೂಲಕ ಧ್ವನಿ ಎತ್ತಲಿದ್ದೇವೆ. ಅದೇ ರೀತಿ ಅತ್ಯಾಚಾರಕ್ಕೆ ಒಳಪಟ್ಟ ಮಹಿಳೆಗೆ ನ್ಯಾಯ ಕೇಳಿ ಹೋದ ನಮ್ಮ ನಾಯಕರನ್ನು ಶೋಷಣೆ ಮಾಡಿದ ಸರಕಾರ ನೀತಿಯನ್ನು ಖಂಡಿಸುತ್ತೇವೆ ಎಂದ ಅವರು ಮಹಿಳೆಗೆ ರಕ್ಷಣೆ ಕೊಡದ ಸರಕಾರ ಉದ್ದಾರ ಆಗುವುದಿಲ್ಲ ಎಂದರು.

ಗಾಂಧೀ ಜಯಂತಿ ಸರಕಾರದ ನಾಟಕ:
ಕೆಪಿಸಿಸಿ ಸದಸ್ಯ ಎಮ್.ಬಿ ವಿಶ್ವನಾಥ ರೈ ಅವರು ಮಾತನಾಡಿ ಗಾಂಧೀಜಿಯವರನ್ನು ಗುಂಡಿಕ್ಕಿ ಕೊಂದ ಗೋಡ್ಸ್‌ಗೆ ಸಂಘಪರಿವಾರ ಹಸ್ತವಿದೆ. ಇದರ ಜೊತೆಯಲ್ಲಿ ಸರಕಾರವೂ ಇದೆ. ಆದರೆ ಮತ್ತೊಂದು ಕಡೆ ಗಾಂಧೀಜಿಯವರ ಅದರ್ಶವನ್ನು ಕೊಂಡಾಡುವ ಕಪಟ ನಾಟಕ ಮಾಡುತ್ತಿದೆ. ಒಟ್ಟು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿ ಸರಕಾರದ ನಾಟಕವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕಾಂಗ್ರೆಸ್ ಹುಟ್ಟಿದ್ದು ಜನರ ಸೇವೆಗಾಗಿ:
ನ್ಯಾಯವಾದಿ ಭಾಸ್ಕರ್ ಗೌಡ ಕೋಂಡಿಬಾಳ ಅವರು ಮಾತನಾಡಿ ಕಾಂಗ್ರೆಸ್ ಹುಟ್ಟಿಕೊಂಡದ್ದು ಅಧಿಕಾರಕ್ಕಲ್ಲ. ಜನರ ಸೇವೆಗಾಗಿ. ಅದನ್ನು ಗುರಿಯಾಗಿಟ್ಟು ಕೊಂಡು ಇವತ್ತು ಜನರ ಸೇವೆ ಮಾಡುತ್ತಿದೆ. ಸತ್ಯ, ಶಾಂತಿ, ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟವರು ಗಾಂಧೀಜಿ. ಅದರೆ ಅವರನ್ನು ಕೊಂದ ಗೋಡ್ಸೆ ಸಂತತಿ ನಮ್ಮ ದೇಶದಲ್ಲಿ ಇರುವ ತನಕ ದೇಶ ಅಭಿವೃದ್ಧಿ ಕಾಣದು. ಈಗಿನ ರಾಜ್ಯ ಸರಕಾರ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿ 2 ಕೋಟಿಗೂ ಹೆಚ್ಚು ನಿರುದ್ಯೋಗ ಸೃಷ್ಟಿಸಿರುವುದೆ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.

ಅತ್ಯಾಚಾರ ಆಡಳಿತದ ದೌರ್ಬಲ್ಯ:
ಕಾಂಗ್ರೆಸ್ ಪುತ್ತೂರು ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಮುರಳಿಧರ ಕೆಮ್ಮಾರ ಅವರು ಮಾತನಾಡಿ ರಾಷ್ಟ್ರದಲ್ಲಿ ಅಮಾನುಷ ವಿಕೃತ ಕಾಮುಖರ ಕ್ರೂರತೆಗೆ ಮನಿಷಾ ವಾಲ್ಮೀಕಿ ಬಲಿಯಾಗಿರುವುದು ದೇಶದ ಆಡಳಿತ ದೌರ್ಬಲ್ಯವಾಗಿದೆ. ಮತ್ತೊಂದು ಕಡೆ ದೇಶದ ರೈತರಿಗೆ ಮರಣ ಶಾಸನ ಮಾಡುವ ಕೆಲಸ ಸರಕಾರದಿಂದ ಆಗುತ್ತಿದೆ. ಈ ಕುರಿತರು ಸರಕಾರವನ್ನು ಖಂಡಿಸಬೇಕಾಗಿದೆ ಎಂದರು.

ಕೆಪಿಸಿಸಿ ಸದಸ್ಯ ಎಂ.ಬಿ.ವಿಶ್ವನಾಥ, ಕಾಂಗ್ರೆಸ್ ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಉಮಾನಾಥ್ ಶೆಟ್ಟಿ, ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಕಿಸಾನ್ ಘಟಕದ ಅಧ್ಯಕ್ಷ ಮುರಳಿಧರ ಗೌಡ ಕೆಮ್ಮಾರ, ನ್ಯಾಯವಾದಿ ಸಾಹಿರ ಜುಬೇರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಆಳ್ವ, ಅಮಳ ರಾಮಚಂದ್ರ, ಭಾಸ್ಕರ್ ಗೌಡ ಕೋಡಿಂಬಾಳ, ರೋಶನ್ ರೈ ಬನ್ನೂರು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳಿಧರ ರೈ ಮಂಠತಬೆಟ್ಟು, ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜ, ಪೂಡಾ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ನಗರಸಭಾ ಸದಸ್ಯ ಯೂಸೂಪ್ ಡ್ರೀಮ್, ರಿಯಾಜ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಅರ್ಷದ್ ದರ್ಬೆ, ನ್ಯಾಯವಾದಿ ಎಂ.ಪಿ.ಅಬೂಬಕ್ಕರ್, ಅಬ್ದುಲ್ ರಹಿಮಾನ್ ಅಝಾದ್, ಹನೀಫ್ ಬಗ್ಗುಮೂಲೆ, ಹಸೈನಾರ್ ಬನಾರಿ, ಅಮರ್‌ನಾಥ್ ಗೌಡ, ಕಂಬಳ ಸಮಿತಿ ಕಾರ್ಯದರ್ಶಿ ಪಿ.ವಿ.ದಿನೇಶ್, ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ನವೀನ್ ರೈ ಚೆಲ್ಯಡ್ಕ, ರಾಜ್ಯದ ನಿರ್ದೇಶಕ ಮನ್‌ಮೋಹನ್ ರೈ, ಯೂಸೂಪ್ ತಾರಿಗುಡ್ಡೆ, ಸಂತೋಷ್ ರೈ ಚಿಲ್ಮೆತ್ತಾರು, ಬಿ.ಕೆ. ಅಬ್ದುಲ್ ರಹಿಮಾನ್, ಯಾಕೂಬ್ ಕುರಿಯ, ಆದಂ ಕಲ್ಲರ್ಪೆ, ಬಾಲಕೃಷ್ಣ ಗೌಡ ಕೆಮ್ಮಾರ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ, ಕೋಡಿಂಬಾಡಿ ಪಂಚಾಯತ್ ಮಾಜಿ ಸದಸ್ಯ ಜಗನ್ನಾಥ ಶೆಟ್ಟಿ, ನ್ಯಾಯವಾದಿ ಸಿದ್ದಿಕ್, ರಶೀದ್ ಮುರ, ಪಾರೂಕ್ ಪಳ್ಳತ್ತೂರು, ಉಲ್ಲಾಸ್ ಕೋಟ್ಯಾನ್ ಮತ್ತಿರರು ಉಪಸ್ಥಿತರಿದ್ದರು. ಕಾಂಗ್ರೆಸ್ ಮುಖಂಡ ಇಸಾಕ್ ಸಾಲ್ಮರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ವಂದಿಸಿದರು. ಧರಣಿ ಸತ್ಯಗ್ರಹದ ಕೊನೆಯಲ್ಲಿ ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ, ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೀಡಾಗಿದ್ದ ಮನೀಷಾ ವಾಲ್ಮೀಕಿಯವರ ಆತ್ಮಕ್ಕಾಗಿ  ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಸರಕಾರಿ ತಹಸೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಪುತ್ತೂರಿನ ಶಾಸಕರೇ ನೀವು ಸೆ.28ರಂದ ರೈತರ ಪ್ರತಿಭಟನೆಗೆ ಬರುವವರು ರೈತರಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದ್ದೀರಿ. ಆದರೆ ನೀವು ಕೂಡಾ ದೇವರಾಜ್ ಅರಸು ಕೊಟ್ಟಂತಹ ಭೂಮಸೂದೆಯ ಕಾನೂನಿಂದ ನೀವು ರೈತರಾಗಿದ್ದೀರಿ. ನೀವೂ ಕೂಡಾ ಒಬ್ಬ ರೈತ. ಹಿಂದೆ ನಮ್ಮ ಶಾಸಕರ ಅವಧಿಯಲ್ಲಿ ಮಂಜೂರಾದ ಭೂಮಿಯನ್ನು ಇವತ್ತು ನಿಮ್ಮ ಅವಧಿಯಲ್ಲಿ ಇನ್ನೂ ಕೂಡಾ ರೈತರಿಗೆ ಖಾತೆ ಮಾಡಿಸಿಲ್ಲ. ಅದರ ಬದಲು ಸುಗ್ರಿವಾಜ್ಞೆ ಕೊಟ್ಟು ಅವರ ಜಮೀನನ್ನು ಕಿತ್ತು ಕೆಲಸ ಆಗುತ್ತಿದೆ. ನಿಮಗೆ ತಾಕತ್ತಿದ್ದರೆ ಫಾರ್ಮ್ ನಂಬ್ರ ೫೦, ೫೩, ೫೮, ೫೬ ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಕುಮ್ಕಿ ಹಕ್ಕು ಕೊಡಿಸಿ, ವಿಲೇವಾರಿ ಮಾಡಿ, ಸುಗ್ರಿವಾಜ್ಞೆ ಮೂಲಕ ರೈತರಿಗೆ ಭೂಮಿ ಕೊಡಿಸಲು ಸಾಧ್ಯವಾದರೆ ನಾನು ನಿಮಗೆ ಸೆಲ್ಯೂಟ್ ಕೊಡುತ್ತೇನೆ. ಇಲ್ಲವಾದರೆ ನಿಮ್ಮ ವಿರುದ್ಧ ರೈತರ ಧಿಕ್ಕಾರ ಆರಂಭವಾಗಲಿದೆ, ಇವತ್ತು ಸಾಂಕೇತಿಕ ಪ್ರತಿಭಟನೆ, ಮುಂದೆ ರಾಜ್ಯದ ಎಲ್ಲಾ ಕಡೆ ಪ್ರತಿಭಟನೆ ನಡೆಯಲಿದೆ ಎಂಬ ಸವಾಲು ಹಾಕುತ್ತಿದ್ದೇನೆ.- ಉಮಾನಾಥ ಶೆಟ್ಟಿ, ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.