ಕಾಂಗ್ರೆಸ್ ಬಾಯಿಗೆ ಬಂದ ಹಾಗೆ ಬೊಗಳಿದ್ರೆ ನಾವಿರೋದೆ ಬೀಗ ಹಾಕಲು | ಪತ್ರಿಕಾ ಮಾಧ್ಯಮದವರೊಂದಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾಂಗ್ರೆಸ್‌ನವರು ದಾರಿ ತಪ್ಪಿದ ಮಗನ ಹಾಗೆ ಕೆಲಸ ಮಾಡುತ್ತಿದ್ದಾರೆ. ಅವರು ಬಾಯಿಗೆ ಬಂದ ಹಾಗೆ ಮಾರ್ಗದಲ್ಲಿ ಬೊಗಳಿದರೆ ನಾವಿರೋದೆ ಇವರ ಬಾಯಿಗೆ ಬೀಗ ಹಾಕಲು. ರೈತರ ಪರವಾಗಿ ಇರುವುವರಿಗೆ ನಾವು ಜೈ ಹೇಳುತ್ತೇವೆ ಹೊರತು ರೈತರ ವಿರೋಧಿ, ದಲ್ಲಾಳಿ ಪರವಾಗಿ ಇರುವವರ ಬಾಯಿ ಕಟ್ಟಿ ಹಾಕಲಿದ್ದೇವೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಅವರು ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾ ಮಾದ್ಯಮವರೊಂದಿಗೆ ಮಾತನಾಡಿದರು. ಮಹಾತ್ಮಾ ಗಾಂಧೀಜಿಯವರ ಗ್ರಾಮರಾಜ್ಯದ ಮೂಲಕ ರಾಮರಾಜ್ಯ, ಲಾಲ್‌ಬಹದ್ದೂರ್ ಶಾಸ್ತ್ರಿಯವರ ಜೈ ಕಿಸಾನ್ ಪರವಾಗಿ ಕೆಲಸ ಮಾಡಿದ ಮತ್ತು ರೈತರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸಿದ ಏಕೈಕ ಪಕ್ಷ ಅದು ಬಿಜೆಪಿ. ಆದರೆ ಕಾಂಗ್ರೆಸ್‌ನವರು ಕೀಳು ಮಟ್ಟದ ರಾಜಕಾರಣವನ್ನು ಜನ ಸಹಿಸುವುದಿಲ್ಲ. ಈಗಾಗಲೇ ನೀರಿನಿಂದ ತೆಗೆದ ಮೀನಿನ ಹಾಗೆ ವಿಲವಿಲ ಒದ್ದಾಡುತ್ತಿದ್ದಾರೆ. ರೈತರ ಪರದ ಕಾರ್ಯಕ್ರಮದಲ್ಲಿ ಅಪಪ್ರಚಾರ ಒಳ್ಳೆದಲ್ಲ. ಒಂದೆ ಒಂದು ರಾಜಕೀಯ ಪಕ್ಷ ದೇಶದಲ್ಲಿ ತಾನು ಜನರಿಗೆ ಕೊಟ್ಟ ಚುನಾವಣಾ ಪ್ರಣಾಳಿಕೆಯನ್ನು ಅತ್ಯಂತ ಯಶಸ್ವಿಯಾಗಿ ಇಂಪ್ಲಿಮೆಂಟ್ ಮಾಡಿದ್ದಾರೆ ಅದು ಬಿಜೆಪಿ ಮಾತ್ರ. ಈ ನಡುವೆ ಇನ್ನೂ ಒಂದು ಭರವಸೆ ಈಡೇರಿಕೆ ಬಾಕಿ ಇದೆ. ಅದು ಕೂಡಾ ಮುಂದಿನ ದಿನದಲ್ಲಿ ನೆರವೇರಲಿದೆ ಎಂದ ಅವರು ಕಾಂಗ್ರೆಸ್‌ನವರಿಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ. ಎಪಿಎಂಸಿ ಕಾಯ್ದೆ ರೈತರ ಪರವಾಗಿ ಇರಬೇಕೆ ಹೊರತು ಕಾಯ್ದೆಯಿಂದ ರೈತರಿಗೆ ಹಾನಿಯಾಗಬಾರದು ಎಂಬ  ಸ್ಪಷ್ಟ ಉದ್ದೇಶ ನಮ್ಮದು. ಹಿಂದೆ ರೈತ ತನ್ನ ಎಲ್ಲಾ ಉತ್ಪನ್ನವನ್ನು ತೆಗೆದು ಕೊಂಡು ಹೋಗಿ ಎಪಿಂಸಿಗೆ ಹಾಕಬೇಕು. ಶ್ರಮ, ಭೂಮಿ, ಬಂಡವಾಳ, ಉತ್ಪಾದನೆ ರೈತನ್ನದ್ದು ಆದರೆ ರೈತನಿಗೆ ಮಾರಾಟದ ಹಕ್ಕು ಇರಲಿಲ್ಲ. ಇಲ್ಲಿನ ತನಕ ಸ್ವಾತಂತ್ರ ಸಿಕ್ಕಿಲ್ಲ. ದಲ್ಲಾಳಿಗಳ ಹಾವಳಿ ಎಪಿಎಂಸಿಯನ್ನು ನುಂಗಿದೆ. ರೈತನ ಕೈ ಕಟ್ಟಿ ಹಾಕಿದ ಹಾಗೆ. ಆದರೆ ನಾವು ಕಾಯ್ದೆ ತರುವ ಮೂಲಕ ಓಪನ್ ಮಾರ್ಕೆಟ್ ಸೌಲಭ್ಯ ಒದಗಿಸಿದ್ದೇವೆ. ರೈತ ಎಲ್ಲಿ ಬೇಕಾದರೂ ತನ್ನ ಉತ್ಪನ್ನವನ್ನು ಮಾರಾಟ ಮಾಡಬಹುದು. ಎಲ್ಲೋ ಒಂದು ಕಡೆ ರೈತರಿಗೆ ಫ್ರೀ ಹ್ಯಾಂಡ್ ಕೊಡುವುದೇ ನಮ್ಮ ಉದ್ದೇಶ. ಇಂತಹ ಸಂದರ್ಭದಲ್ಲಿ ಈಗ ಎಪಿಎಂಸಿಯವರು ಖಾಸಗಿಯವರೊಂದಿಗೆ ಸ್ಪರ್ಧೆ ಮಾಡಬೇಕು. ಅದರ ಮೂಲಕ ರೈತ ಎಲ್ಲಿ ಹೆಚ್ಚು ಸಿಗುತ್ತದೆ ಅಲ್ಲಿ ಕೊಡಲು ಸಹಕಾರ ಸಿಗಲಿದೆ. ರೈತ ಇವತ್ತು ಯಾವುದೇ ಕಾಂಟ್ರೇಕ್ಟ್‌ನಿಂದ ಹೊರಗೆ ಬರಬಹುದು. ರೈತ ಬೆಳೆದ ಉತ್ಪಾದನೆಯನ್ನು ರೈತ ಹೇಳಿದ ಧಾರಣೆಗೆ ಕೊಡಬಹುದು. ಎಂದ ಅವರು ನಾವು ಯಾವತ್ತು ನಮ್ಮ ಪ್ಲಾನ್‌ಗಳನ್ನು ಅದು ಇಂಪ್ಲಿಮೆಂಟ್ ಆಗುವಂತಹ ಆಕ್ಷನ್‌ಗಳ ಆಧಾರಿತವಾಗಿ ಮಾಡುತ್ತೇವೆ. ಬರೆ ಘೊಷಣೆ ಮಾಡಿ ಬಿಡುವುದಿಲ್ಲ. ರೈತರಿಗೆ ವಾರ್ಷಿಕ ರೂ. 6ಸಾವಿರ ಕೊಡುವ ಮೂಲಕ ರೈತರಿಗೆ ಆದಾಯದ ಮೂಲದ ಹಲವು ದಾರಿ ಕೊಟ್ಟಿದ್ದೇವೆ. ಕಾಂಗ್ರೆಸ್‌ನವರಂತೆ ಸಾಲ ಮನ್ನ ಮಾಡಿ ಚಪ್ಪಾಳೆ ತಟ್ಟಿ ಓಟು ಕೇಳುವ ಪ್ರಯತ್ನ ನಮ್ಮದಲ್ಲ. ಸ್ವಾಮಿನಾಥನ್ ವರದಿ 2006ರಲ್ಲಿ ರೈತನಿಗೆ ಕಾಸ್ಟ್ ಆಫ್ ಪ್ರೊಡಕ್ಷನ್‌ನಿಂದ ಒಂದುವರೆ ಪರ್ಸಂಟ್ ಜಾಸ್ತಿ ಸಿಗಬೇಕೆಂಬ ನಿಯಮದಂತೆ ನಾವು ರೈತನಿಗೆ ಸ್ವಾಭಿಮಾನದ ಬದುಕು ಕೊಡುವ ಕೆಲಸ ಮಾಡಿದ್ದೇವೆ. ಆದರೆ ಕಾಂಗ್ರೆಸ್‌ನವರು ಇನ್ನೂ ಕೂಡಾ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಡಿ.ವಿ.ಸದಾನಂದ ಗೌಡ ಹೇಳಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸಂಜೀವ ಮಠಂದೂರು, ಸುಳ್ಯ ಶಾಸಕ ಎಸ್ ಅಂಗಾರ, ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸೇರಿದಂತೆ ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.