HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬಿಳಿನೆಲೆ: ಧರ್ಮಸ್ಥಳ ಯೋಜನೆ ವತಿಯಿಂದ ಗಾಂಧಿಸ್ಮೃತಿ ಮತ್ತು ನವಜೀವನೋತ್ಸವ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಕಡಬ: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಬಿಳಿನೆಲೆ ವಲಯ ವತಿಯಿಂದ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ  ಅ.2ರಂದು ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಮೃತಿ ಹಾಗೂ ನವಜೀವನೋತ್ಸವ ಕಾರ್ಯಕ್ರಮ ನಡೆಯಿತು.

ಬಿಳಿನೆಲೆ ವಲಯ ಅಧ್ಯಕ್ಷ ಸತೀಶ್ ಎರ್ಕ ಕಾರ್ಯಕ್ರಮ ಉದ್ಘಾಟಿಸಿದರು. ಬಿಳಿನೆಲೆ ವಲಯ ಜನಜಾಗೃತಿ ಸಮಿತಿ ಅಧ್ಯಕ್ಷ ತಮ್ಮಯ್ಯ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಯೋಜನಾಧಿಕಾರಿ‌ ಮೇದಪ್ಪ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ನವಜೀವನ ಸಮಿತಿ ವಲಯಾಧ್ಯಕ್ಷ ಬೊಮ್ಮಣ್ಣ ಗೌಡ, ಬಿಳಿನೆಲೆ ವಲಯ ನವಜೀವನ ಸಮಿತಿ ಸದಸ್ಯರಾದ ಗೋಪಾಲಕೃಷ್ಣ ಭಟ್, ಯುವಕ ಮಂಡಲದ ಕಾರ್ಯದರ್ಶಿ ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯೋಜನೆಯ ವತಿಯಿಂದ ಅನಾರೋಗ್ಯ ಪೀಡಿತರಾಗಿರುವವರಿಗೆ ನೀಡಲಾದ ವೀಲ್ ಚಯರ್ ಹಾಗೂ ಹ್ಯಾಂಡ್ ಸ್ಟಿಕ್ ನ್ನು ಫಲಾನುಭವಿಗಳಿಗೆ ಯೋಜನಾಧಿಕಾರಿಗಳು ವಿತರಿಸಿದರು. ರುಕ್ಮಿಣಿ ಹಾಗೂ ಬೊಮ್ಮಣ್ಣ ಗೌಡ ಅವರು ಅನಿಸಿಕೆ ವ್ಯಕ್ತಪಡಿಸಿದರು.

ಬಿಳಿನೆಲೆ ವಲಯ ಮೇಲ್ವಿಚಾರಕ ಧರ್ಣಪ್ಪ ಗೌಡ ಸ್ವಾಗತಿಸಿ, ನವಜೀವನ ಸಮಿತಿ ಸದಸ್ಯ ಶ್ರೀನಾಥ್ ವಂದಿಸಿದರು. ಕೊಂಬಾರು ಸೇವಾಪ್ರತಿನಿಧಿ ಪರಮೇಶ್ವರ ಉರುಂಬಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಲತಾ, ಧನ್ಯ, ಯಶಸ್ವಿನಿ ಪ್ರಾರ್ಥಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.