HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪೆರ್ಲಂಪಾಡಿ: ಗಾಂಧಿ ಸ್ಮೃತಿ ಹಾಗೂ ನವಜೀವನವೋತ್ಸವ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1


ಬಡಗನ್ನೂರು:   ಅವಕಾಶಗಳು ಮತ್ತು ಸಾಮಾರ್ಥ್ಯಗಳು  ವ್ಯಕ್ತಿಯ ವ್ಯಕ್ತಿತ್ವ ವಿಕಾಸನಕ್ಕೆ ಪೂರಕವಾಗಿದೆ ಎಂದು  ಬಾಯಾಂಬಾಡಿ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಸಂತ ಕುಮಾರ್ ರೈ ದುಗ್ಗಳ ಹೇಳಿದರು ಅವರು   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅರಿಯಡ್ಕ ವಲಯ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಅರಿಯಡ್ಕ ವಲಯ ಇದರ ವತಿಯಿಂದ ಗಾಂಧಿ ಸ್ಮೃತಿ ಮತ್ತು ನವಜೀವನವೋತ್ಸವ 
ಕಾರ್ಯಕ್ರಮವನ್ನು  ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮವು ಬಾಯಾಂಬಾಡಿ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಸ್ಕಂದ ಸಭಾಂಗಣದಲ್ಲಿ ಅ.2 ರಂದು ನಡೆಯಿತು. ದುಷ್ಚಾಟಕ್ಕೆ ಒಳಗಾದ ಕುಟುಂಬ ಮತ್ತು  ಸಮಾಜದಲ್ಲಿನ ಜನರನ್ನು ಸರಿದಾರಿ ತರುವಲ್ಲಿ ಪೂರಕ ಕಾರ್ಯಕ್ರಮವನ್ನು  ಮತ್ತು ಬೆಂಬಲ ನೀಡುವಲ್ಲಿ ಜನಜಾಗೃತಿ ವೇದಿಕೆ ಯಶಸ್ಸು ಕಂಡಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕೈಜೋಡಿಸುವ ಮೂಲಕ ಮತ್ತು ಕೃಷಿ ಚಟುವಟಿಕೆಗಳಿಗೆ ರೈತರಿಗೆ ವಿವಿಧ ರೀತಿಯ ಮಾಹಿತಿ ನೀಡುವ ಮೂಲಕ ಬಡಜನರಿಗೆ ಆಶೋತ್ತರವಾಗಿದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತೆ ಹಾಗೂ  ಅಭಿವೃದ್ಧಿ ನಿಟ್ಟಿನಲ್ಲಿ ಸಹಾಯಧನ ನೀಡುವ ಮೂಲಕ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿ ಸಹಕಾರಿಯಾಗಿದೆ. ತಮ್ಮ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಲ್ಲಿ ಪೂಜ್ಯ ಕಾವೂಂದರ ಸಹಾಯಧನ ನೀಡಿದ ಬಗ್ಗೆ ಈ ಸಂದರ್ಭದಲ್ಲಿ ಸ್ಮರಿಸುವ ಅಗತ್ಯ ವಿದೆ ಎಂದ ಅವರು ಅವಕಾಶ ಬಂದಾಗ ಸಾಮಾರ್ಥ್ಯ ಅರಿವು ಮೂಡುತ್ತದೆ ಅಗ ಮಾತ್ರ ತಮ್ಮ ವ್ಯಕ್ತಿತ್ವ ವಿಕಾಸ ಆಗಲು ಸಾಧ್ಯ ಗ್ರಾಮಾಭಿವೃದ್ಧಿ ಯೋಜನೆ  ಸಮಾಜ ಸೇವೆಯಲ್ಲಿ ತಮ್ಮನ್ನು ತಾನು ತೊಡಗಿಸಿ ಕೊಳ್ಳಲು ಸಹಕಾರಿಯಾಗಿದೆ ಪೂಜ್ಯರ ಯೋಜನೆ ಮತ್ತು ಯೋಚನೆಗಳನ್ನು ಈಡೇರಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳೋಣ ಎಂದ ಅವರು ಗ್ರಾಮದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಎಂದು ಮನಗೊಂಡ ಗಾಂಧಿ ತತ್ವ ಹಾಗೂ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿ ಶುಭ ಹಾರಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಲೆಕ್ಕ ಪರಿಶೋಧಕಿ ಶಾಲಿನಿ ಮಾತನಾಡಿ ಗಾಂಧಿಯವರ ಎಲ್ಲರೂ ಒಂದೇ ಎಂದು ಭಾವನೆ ಹೊಂದಿದವರು  ಪೂಜ್ಯರು  ಗಾಂಧಿಯವರು ಅಸಯಗಳನ್ನು ಮನೆಮನೆಗೆ ಮುಟ್ಟಿಸುವ ಕೆಲಸವನ್ನು ಮಾಡಿದರು. 1982 ಆರಂಭದಲ್ಲಿ 9 ವರ್ಷಗಳ ಕಾಲ ಬೆಳ್ತಂಗಡಿ ತಾಲೂಕಿನ ಮನೆ ಬಾಗಿಲಿಗೆ ಅಭಿವೃದ್ಧಿ ದೃಷ್ಟಿಯಿಂದ ಬೇಕಾದ ಎಲ್ಲಾ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಲಾಯಿತು. ಸದನಂತರ ಸರ್ವೆಮಾಡಿದಾಗ ಯಾವುದೇ ಪ್ರಯೋಜನವನ್ನು ಮನಗೊಂಡ ಪೂಜ್ಯರು ಪ್ರಥಮ ಭಾರಿ ಬೆಳ್ತಂಗಡಿ ತಾಲೂಕಿನಲ್ಲಿ  ಪ್ರಗತಿ ಬಂಧು ಸ್ವ ಸಹಾಯ ತಂಡ  ಹುಟ್ಟು ಹಾಕಿ  ಅದಕ್ಕೆ ಪೂರಕವಾಗಿ ಉಳಿತಾಯ ಮಾಡಿಕೊಂಡು ಅದಕ್ಕೆ ಪುರಕವಾಗಿ ಅರ್ಥಿಕ ವ್ಯವಸ್ಥೆಗೆ ಮಾಡಿಕೊಡಲಾಯಿತು.ಮತ್ತು ಸಮಾಜದ ಜನರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಜನಜಾಗೃತಿ ಹುಟ್ಟು ಹಾಕಿ ಅ ಮುಖೇನ ಅರಿವಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಯಿತು.

ಮಕ್ಕಳಿಗೆ ಆರಂಭದಲ್ಲಿ ಯೋಗ್ಯ ಶಿಕ್ಷಣ,  ಸ್ವಸ್ಥ ಸಂಕಲ್ಪ ಪ್ರೋತ್ಸಾಹ ಸಹಾಯ ಧನ, ವೈದ್ಯಕೀಯ,ತಾಂತ್ರಿಕ ಶಿಕ್ಷಣಕ್ಕೆ ಸಹಾಯಧನ ನೀಡಲಾಯಿತು ಬಳಿಕ ಸ್ವಂತ ಉದ್ಯೋಗ ನಡೆಸುವ ದೃಷ್ಟಿಯಲ್ಲಿ ರೂಟ್ ಸೆಟ್ ಸಂಸ್ಥೆ  ಪೂರಕ ತರಬೇತಿ ನೀಡಲಾಯಿತು. ತದನಂತರ ಗ್ರಹಸ್ಥಾಶ್ರಮದಲ್ಲಿ ಸರಳ ಜೀವನ ನಡೆಸು ನಿಟ್ಟಿನಲ್ಲಿ ಸಾಮುಹಿಕ ಧಾರ್ಮಿಕ ಪ್ರಜ್ಞೆ ಮೂಡಿಸುವ ದೃಷ್ಟಿಯಿಂದ ಸಾರ್ವಜನಿಕ ಸತ್ಯ ನಾರಾಯಣ ,ಭಜನ ಕಮ್ಮಟ ಶನಿ ಪೂಜೆ ,ಸಾಮೂಹಿಕ ವಿವಾಹ  ಅನಂತರದ ಅವದಿಯಲ್ಲಿ ಹುಟ್ಟಿನಿಂದ  ಕೊನೆಯ ತನಕ ಎಲ್ಲಾ ರೀತಿಯಲ್ಲಿ ಸಹಾಯ ಹಸ್ತ ನೀಢುತ್ತ ಬರುತ್ತಿದೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ  ಶಾಲೆಗಳಿಗೆ ಕೊಠಡಿ, ವಿವಿಧ ಸಂಘ ಸಂಸ್ಥೆಗಳ ಮೂಲಕ  ಅಂತಿಮವಾಗಿ ಸಂಸ್ಕಾರಯುತ ನಡೆಯುವ ನಿಟ್ಟಿನಲ್ಲಿ ರುದ್ರ ಭೂಮಿ ಅಭಿವೃದ್ಧಿಯಲ್ಲೂ ಸಹಕಾರಿಯಾಗಿದೆ . ಈ ಸೌಲಭ್ಯಗಳನ್ನು ಪಡೆಯುವಲ್ಲಿ ಚಿಟಿಕೆಗಳಾಗದೆ ಚಪ್ಪಾಳೆಗಳಾಗಬೇಕು ಎಂದ ಅವರು ಗಾಂಧಿಯವರ ಅಸಯದಂತೆ ನಾವೆಲ್ಲರೂ ಒಂದೇ ತಾವೇಲ್ಲರೂ ಸ್ವಾವಲಂಬಿಯಾಗಿ ಬದುಕುವ ಅಸಯಕ್ಕೆ ಪೂರಕವಾಗಿ ಧರ್ಮಸ್ಥಳದಲ್ಲಿ ಎಲ್ಲವನ್ನೂ ನಡೆಸಲಾಗುತ್ತದೆ. ನವಜೀವನ ಸಮಿತಿ ಸದಸ್ಯರು ಹೊಸ ಜೀವನಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ಪೂಜ್ಯರ ಅಸಯವನ್ನು ಸಹಾರಿಯಾಗುವಲ್ಲಿ ಸಹಕಾರಿಸುವಂತೆ ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಅರಿಯಡ್ಕ ವಲಯ ಜನಜಾಗೃತಿ  ತಿಲಕ್ ರೈ ಕುತ್ಯಾಡಿ ನವಜೀವನ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿ ಮಾತನಾಡಿ ಮಹಾತ್ಮಾ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ರವರ ತತ್ವ ಮತ್ತು ಆದರ್ಶಗಳನ್ನು ತಮ್ಮ ಜೀವನದ ಅಳವಡಿಸಿಕೊಂಡು ಜೀವನ ನಡೆಸುಂತೆ ಕಿವಿಮಾತು ಹೇಳಿದರು.

 

ಮುಖ್ಯ ಅತಿಥಿಯಾಗಿ ಬಾಯಾಂಬಾಡಿ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಚೆನ್ನಪ್ಪ, ಹಾಗೂ ಅರಿಯಡ್ಕ ವಲಯ ಜನಜಾಗೃತಿ ವಲಯಾಧ್ಯಕ್ಷ ವಿಕ್ರಮ್ ರೈ ಸಾಂತ್ಯ  ಸಂದಬೋಚಿತ ಮಾತನಾಡಿ ಶುಭ ಹಾರೈಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಅರಿಯಡ್ಕ ವಲಯ ಜನಜಾಗೃತಿ ಮಾಜಿ ವಲಯಾಧ್ಯಕ ನಾರಾಯಣ ರೈ ಕುದ್ಕಾಡಿ ವಹಿಸಿ ಮಾತನಾಡಿ ಮಹಾತ್ಮ ಗಾಂಧಿಜೀ ರವರ ಅಸಯದಂತೆ ರಾಮ ರಾಜ್ಯ ಕನಸು ಕಂಡ ಪೂಜ್ಯರು ಗ್ರಾಮದ ಬಡ ಕುಟುಂಬದ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಗತಿ ಬಂಧು ಹಾಗೂ ಸ್ವ ಸಹಾಯ ಸಂಘಗಳನ್ನು ಹುಟ್ಟು ಹಾಕಿ ತಮ್ಮ ಸ್ವಂತ ಭೂಮಿ ದುಡಿದು ಸ್ವಾವಲಂಬಿಗಳಾಗಿ ಬದುಕಲು ದಾರಿ ಮಾಡಿಕೊಟ್ಟಿದೆ. ಸಮಾಜದ ದುಷ್ಚಟ ಹಾಗೂ ದುರ್ವೆಸನಿಗಳನ್ನು ತೊಡೆದು ಹಾಕಿ ನೆಮ್ಮದಿ ಜೀವನ ನಡೆಸುವಲ್ಲಿ ಸಹಕಾರಿಯಾಗಿದೆ. ಜನಜಾಗೃತಿ ವೇದಿಕೆ ಮೂಲಕ  ಜನರ ಬದಕಿಗೆ ಅರಿವು ಮೂಡಿಸುವ ಕೆಲಸ ನಡೆದಿದೆ.ಮುಂದೆಯೂ ಪೂಜ್ಯರ ಕನಸು ನನಸಾಗಿಸುವ ಎಲ್ಲಾ ಕಾರ್ಯಕ್ರಮದಲ್ಲಿ ತಾವೇಲ್ಲರೂ ಸಹಕಾರಿಸೋಣ ಎಂದು ಹೇಳಿದರು.
ವೇದಿಕೆಯಲ್ಲಿ  ಪಟ್ಟೆ ಜನಜಾಗೃತಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಕೋಳ್ಳಿಗೆ ಜನಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮ್ ಸುಂದರ್,
ಅರಿಯಡ್ಕ ವಲಯ ಬಿಸಿ ಟ್ರಸ್ಟ್ ಅಧ್ಯಕ್ಷೆ ನವೀನ ಬಿ.ಡಿ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ನವಜೀವನ ಸಮಿತಿ ಸದಸ್ಯರು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸದಸ್ಯರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅರಿಯಡ್ಕ ವಲಯ ಬಿಸಿ ಟ್ರಸ್ಟ್ ಮಾಜಿ ಅಧ್ಯಕ್ಷ ಉದಯ ಕುಮಾರ್ ಸ್ವಾಗತಿಸಿದರು,  ಈಶ್ವರಮಂಗಲ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಸೇವಾ ಪ್ರತಿನಿಧಿ ಸುಂದರ ವಂದಿಸಿದರು ಅರಿಯಡ್ಕ ವಲಯ ಮೇಲ್ವಿಚಾರಕಿ ಶೃತಿ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಸೌಮ್ಯ ಪ್ರಾರ್ಥಿಸಿದರು.
ಕಾರ್ಯಕ್ರಮ ಉದ್ಘಾಟನೆ ಬಳಿಕ ಮಹಾತ್ಮಾ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಗಣ್ಯರಿಂದ ಹಾಗೂ  ನವಜೀವನ ಸದಸ್ಯರ  ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು. ಬಳಿಕ ನವಜೀವನ ಸದಸ್ಯರನ್ನು ಗುಲಾಬಿ ಹೂ ನೀಡಿ ಗೌರವಿಸಲಾಯಿತು.
Attachments area
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.