ಪುತ್ತೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಪುತ್ತೂರು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಸಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನಾ ಕಾರ್ಯಕ್ರಮಗಳು ಅ.೩ರಂದು ನಡೆಯಿತು.
ನವೀಕೃತ ತರಕಾರಿ ಮಾರುಕಟ್ಟೆಯನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ ಉದ್ಘಾಟಿಸಿದರು. 1000 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ ಸೋಮಶೇಖರ್ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು. ಆರಂಭದಲ್ಲಿ ಸಂಡ್ರಿಶಾಪ್ ಕಟ್ಟಡವನ್ನು ಉದ್ಘಾಟಿಸಿದರು. ಸುಳ್ಯ ಶಾಸಕ ಎಸ್. ಅಂಗಾರ ನವೀಕೃತ ಹೂತೋಟವನ್ನು ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಶಾಸಕ ಸಂಜೀವ ಮಠಂದೂರು ವಹಿಸಿದ್ದರು. ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪ್ ಚಂದ್ರ ಶೆಟ್ಟಿ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸಹಾಯ ಅಯುಕ್ತ ಡಾ.ಯತೀಶ್ ಉಳ್ಳಾಲ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಡಬ ತಾ.ಪಂ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
7.56 ಕೋಟಿಯ ಕಾಮಗಾರಿ ಉದ್ಘಾಟನೆ:
ರೂ.೧ಕೋಟಿ ವೆಚ್ಚದ ೧೦೦೦ ಮೆಟ್ರಿಕ್ ಟನ್ ಗೋದಾಮು, ರೂ.೪೮.೫೦ಲಕ್ಷದ ಸಿ.ಸಿ ರಸ್ತೆ ಮತ್ತು ಚರಂಡಿ, ರೂ.೩.೧೫ಕೋಟಿ ವೆಚ್ಚದ ಕಡಬ ಉಪ ಮಾರುಕಟ್ಟೆ ಪ್ರಾಂಗಣದ ವಿವಿಧ ಅಭಿವೃದ್ಧಿ, 60ಸಿ ಯಲ್ಲಿ 19 ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿ, ರೂ.೧೧.೮೦ಲಕ್ಷದ ಸಂಡ್ರಿಶಾಪ್ಕಟ್ಟಡ, ರೂ.೩ಲಕ್ಷದಲ್ಲಿ ಕೊಂಬಾರು ಬೋಳ್ನಡ್ಕ-ಅರ್ದೇಲು-ಮುರುವಂಜಿ ರಸ್ತೆ ಅಭಿವೃದ್ಧಿ, ರೂ.೫ಲಕ್ಷದಲ್ಲಿ ಕೋಡಿಂಬಾಳ-ಮಜ್ಜಾರು-ಕಡವು ರಸ್ತೆ ಅಭಿವೃದ್ಧಿ, ರೂ.೩ಲಕ್ಷದಲ್ಲಿ ನೆಟ್ಟಣಿಗೆ ಮುಡ್ನೂರು ಸಾಂತ್ಯ, ಕೊಂಕಣಿಗುಂಡಿ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿ, ರೂ.2.50 ಲಕ್ಷದಲ್ಲಿ ಕೊಣಾಲು ತಿರ್ಲೆ, ಪಾತೃಪಾಡಿ ಪರಿಶಿಷ್ಟ ಜಾತಿ ಮಿಸಲು ರಸ್ತೆ ಅಭಿವೃದ್ಧಿ, ರೂ.೧.೫೦ಕೋಟಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಹಾಗೂ ಇಂಟರ್ಲಾಕ್, ರೂ.೫೦ಲಕ್ಷದಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದ ಗೋಡೆಗಳಿಗೆ ಬಣ್ಣ, ಮೆಶ್, ರೂ.೮.೮೦ಲಕ್ಷದಲ್ಲಿ ಆಡಳಿತ ಕಚೇರಿ ಮುಂಭಾಗದ ಹೂತೋಟ, ರೂ.೬ಲಕ್ಷದಲ್ಲಿ ೪೦೦ಎಂ.ಟಿ ಗೋದಾಮು ಅಭಿವೃದ್ಧಿ, ರೂ.೧೫ಲಕ್ಷದಲ್ಲಿ ಆಡಳಿತ ಕಚೇರಿ ಅಭಿವೃದ್ಧಿ, ರೂ.೨೫ಲಕ್ಷದಲ್ಲಿ ಸಂತೆ ಮಾರುಕಟ್ಟೆ ಹಾಗೂ ಅದರ ಸುತ್ತಲಿನ ಅಂಗಡಿ ಮಳಿಗೆಗಳ ಅಭಿವೃದ್ಧಿ, ರೂ.೧೨ಲಕ್ಷದಲ್ಲಿ ೬೦ಸಿಯಲ್ಲಿ ಬಜತ್ತೂರು, ಕೊಂಬಾರು, ಬಂಟ್ರ, ನೂಜಿಬಾಳ್ತಿಲ, ಕುಂತೂರು ಮತ್ತು ಆಲಂಕಾರು ಗ್ರಾಮಗಳಲ್ಲಿ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಉದ್ಘಾಟನೆ ನಡೆಯಿತು.
2.18 ಕೋಟಿಯ ಕಾಮಗಾರಿಗಳಿಗೆ ಶಂಕುಸ್ಥಾಪನೆ:
ಮುಖ್ಯ ಪ್ರಾಂಗಣದಲ್ಲಿ ರೂ.೫೦ಲಕ್ಷದ ವಿದ್ಯುತ್ ಕಾಮಗಾರಿ, ರೂ.೧೦ಲಕ್ಷದಲ್ಲಿ ಕಾರ್ಯದರ್ಶಿಯವರ ವಸತಿಗೃಹ ಅಭಿವೃದ್ಧಿ, ರೂ.೪೮ ಲಕ್ಷದಲ್ಲಿ ಕೆದಂಬಾಡಿ, ಬಲ್ನಾಡು, ಕೊಲ, ಬೆಟ್ಟಂಪಾಡಿ, ಕೊಳ್ತಿಗೆ, ಕುದ್ಮಾರು, ನೆಲ್ಯಾಡಿ, ಬೆಳ್ಳಿಪ್ಪಾಡಿ ಮತ್ತು ಸವಣೂರು ಗ್ರಾಮಗಳಲ್ಲಿ, ರೂ.೬೦ಲಕ್ಷದಲ್ಲಿ ಅರಿಯಡ್ಕ, ನಿಡ್ಪಳ್ಳಿ, ಕುರಿಯ, ಸವಣೂರು, ಪುಣ್ಚಪ್ಪಾಡಿ, ಕೌಕ್ರಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ, ಕೊಳ್ತಿಗೆ, ಬೆಳ್ಳಿಪ್ಪಾಡಿ, ಸರ್ವೆ, ಕೆಯ್ಯೂರು, ಕೆದಂಬಾಡಿ, ೧೦೨ನೆಕ್ಕಿಲಾಡಿ, ಐತ್ತೂರು, ಬಲ್ಯ, ಕಡಬ, ಮತ್ತು ಪೆರಾಬೆ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಮೀಸಲು ಸಂಪರ್ಕ ರಸ್ತೆ ಅಭಿವೃದ್ಧಿ, ರೂ.೧೦ಲಕ್ಷ ವೆಚ್ಚದಲ್ಲಿ ರೈತ ಸಭಾಭವನದ ಅಭಿವೃದ್ಧಿ, ಅದರ ಮುಂಭಾಗ ಹಾಗೂ ಅತಿಥಿ ಗೃಹದ ಹಿಂಭಾಗ ಇಂಟರ್ಲಾಕ್ ಅಳವಡಿಕೆ, ರೂ.೨೩ಲಕ್ಷದ ಬ್ಯಾಂಕ್ ಕಟ್ಟಡ, ಅಂಚೆ ಕಚೇರಿ, ಹೊಸ ಕ್ಯಾಂಟೀನ್, ಜೀಪ್ ಶೆಡ್ಗಳ ಅಭಿವೃದ್ಧಿ, ರೂ.೧ಲಕ್ಷದಲ್ಲಿ ಮುಖ್ಯ ರಸ್ತೆಯ ಬಳಿಯಿರುವ ಸ್ವಾಗತ ಕಮಾನು ದುರಸ್ತಿ ಹಾಗೂ ರೂ.16ಲಕ್ಷದಲ್ಲಿ ಕಡಬ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಆಡಳಿತ ಕಚೇರಿ, ಶೌಚಾಲಯ ಸುತ್ತ ಇಂಟರ್ ಲಾಕ್ ಅಳವಡಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಿತು.
ಎಪಿಎಂಸಿ ಉಪಾಧ್ಯಕ್ಷ ಮಂಜುನಾಥ್ ಎನ್.ಎಸ್, ಸದಸ್ಯರಾದ ಬೂಡಿಯಾರ್ ರಾಧಾಕೃಷ್ಣ ರೈ , ತೀರ್ಥಾನಂದ ದುಗ್ಗಳ, ಬಾಲಕೃಷ್ಣ ಬಾಣಜಾಲು, ಎ.ಕುಶಾಲಪ್ಪ ಗೌಡ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಮೇದಪ್ಪ ಗೌಡ, ಪುಲಸ್ತ್ಯ ರೈ, ಕೊರಗಪ್ಪ, ತ್ರಿವೇಣಿ ಪೆರ್ವೋಡಿ, ತೀರ್ಥಾನಂದ ದುಗ್ಗಳ, ವಿ.ಹೆಚ್.ಅಬ್ದುಲ್ ಶಕೂರ್, ಜಿ.ಕೃಷ್ಣ ಕುಮಾರ್ ರೈ, ನಾಮನಿರ್ದೇಶಿತ ಸದಸ್ಯರಾದ ಮೋಹನಾಂಗಿ, ಬಾಲಕೃಷ್ಣ ಜೋಯಿಸ, ಬಾಬು ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನರಿಮೊಗರು ಪ್ರಖ್ಯಾತಿ ಮಂಡಲದ ಸಮ್ರದ್ದಿ ಶೆಣೈ ಬಳಗ ಪ್ರಾರ್ಥಿಸಿದರು.