ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ ಮಾದರಿ ಸಂಘವಾಗಿ ಬೆಳೆಯಲಿ ಪ್ರಧಾನ ಆಡಳಿತ ಕಚೇರಿಗೆ ಭೇಟಿ ನೀಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ ಆರಂಭಗೊಂಡ ದಿನದಿಂದ ಕೇವಲ ಸಮುದಾಯವನ್ನು ಮಾತ್ರವಲ್ಲ ಸಮಾಜದ ಏಳಿಗಾಗಿ ಶ್ರಮಿಸುತ್ತಿದೆ. ಸಾರ್ವಜನಿಕರೊಂದಿಗೆ ವ್ಯವಹಾರದಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ ಸಂಘ ಮಾದರಿಯಾಗಿ ಬೆಳೆಯಲಿ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಪುತ್ತೂರು ಎಪಿಎಂಸಿ ರಸ್ತೆಯ ಮಾನಾರ್ಚ್ ಕಾಂಪ್ಲೆಕ್ಸ್‌ನ ಸ್ವಂತ ಕಟ್ಟಡದಲ್ಲಿರು ಸಂಘದ ಪ್ರಧಾನ ಆಡಳಿತ ಕಚೇರಿಗೆ ಭೇಟಿ ನೀಡಿದ ಅವರು ಮಾತನಾಡಿದರು. ಸಮುದಾಯದ ಮೂಲಕ ಹುಟ್ಟಿ ಬಂದ ಮತ್ತು ಕಷ್ಟದ ಸಂದರ್ಭದಲ್ಲೂ ಹಿರಿಯ ಕೊಡುಗೆಗಳನ್ನು ಸ್ಮರಿಸಿದ ಅವರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘಕ್ಕೆ ಪೂರ್ಣ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು. ಶಾಸಕ ಸಂಜೀವ ಮಠಂದೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸ್ವಾಗತಿಸಿ, ಸಂಘದ ಪ್ರಧಾನ ಕಚೇರಿಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ವಂದಿಸಿದರು.


ಸಂಘದ ಆಡಳಿತ ನಿರ್ದೇಶಕರಾದ ಮೋಹನ್ ಗೌಡ ಇಡ್ಯಡ್ಕ, ರಾಮಕೃಷ್ಣ ಗೌಡ ಕರ್ಮಲ, ಶಿವರಾಮ ಗೌಡ ಇಡ್ಯಪೆ, ವೆಂಕಟ್ರಮಣ ಗೌಡ ಕರೆಂಕಿ, ಸಾಂತಪ್ಪ ಗೌಡ ಪಿಜಕಳ, ನೇತ್ರಾವತಿ ಪಿ ಗೌಡ, ನಾಗೇಶ್ ನುಳಿಯಾರು, ಸಲಹಾ ಸಮಿತಿ ಸದಸ್ಯರಾದ ಗೌರಿ ಬನ್ನೂರು, ರವಿ ಮುಂಗ್ಲಿಮನೆ, ಶ್ರೀಧರ ಗೌಡ ಕಣಜಾಲು, ಬಾಬು ಗೌಡ ಭಂಡಾರದಮನೆ, ಲಿಂಗಪ್ಪ ಗೌಡ ತೆಂಕಿಲ, ಮಾಜಿ ನಿರ್ದೇಶಕರಾದ ಚಂದರಶೇಖರ್ ಬರತ್ತೋಡು, ಸಾವಿತ್ರಿ ಗೌಡ, ಪುತ್ತೂರು ಶಾಖೆಯ ಮನೇಜರ್ ತೇಜಸ್ವಿನಿ, ಕಡಬ ಶಾಖೆಯ ಧರ್ಮರಾಜ್, ನೆಲ್ಯಾಡಿ ಶಾಖೆಯ ಶಿವಪ್ರಸಾದ್, ಕುಂಬ್ರದ ದಿನೇಶ್, ಉಪ್ಪಿನಂಗಡಿಯ ರೇವತಿ, ಅಲಂಕಾರಿನ ವಿನೋದ್‌ರಾಜ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.