HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಶ್ರೀ ಮಹಾಲಿಂಗೆಶ್ವರ ಐಟಿಐಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿ | ರೂ. 20ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಶಿಫಾರಸ್ಸಿನ ಮೇರೆಗೆ ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ನಡೆಯುತ್ತಿರುವ ರೂ.20ಲಕ್ಷ ವೆಚ್ಚದ ಕಾಮಗಾರಿಗಳನ್ನು ಸಂಸ್ಥೆಗೆ ಭೇಟಿ ನೀಡಿದ ಸಚಿವರೇ ಖುದ್ದು ಪರಿಶೀಲಿಸಿದರು.

ಶ್ರೀ ಮಹಾಲಿಂಗೇಶ್ವರ ಐಟಿಐ ಸಂಚಾಲಕ ಯು.ಪಿ.ರಾಮಕೃಷ್ಣ ಗೌಡ ಅವರು ಸಚಿವರನ್ನು ಸ್ವಾಗತಿಸಿ, ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಮೇಲಂತಸ್ತಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಭಾಂಗಣ ಮತ್ತು ಇತರ ಕಾಮಗಾರಿಗಳನ್ನು ಡಿ.ವಿ.ಸದಾನಂದ ಗೌಡ ಅವರು ಪರಿಶೀಲನೆ ನಡೆಸಿದರು. ಎಮ್.ಸಿ.ಎಫ್ ಸಂಸ್ಥೆಯ ಸೂಪರಿಡೆಂಟ್ ಕೃಷ್ಣಪ್ಪ ಅವರಲ್ಲಿ ಕಾಮಗಾರಿ ಕುರಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ದಕ್ಷಿಣ ಕನ್ನಡ ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಡಂಗಾಯ, ಜೊತೆ ಕಾರ್ಯದರ್ಶಿ ಕಿಶೋರ್ ನೆಲ್ಲಿಕಟ್ಟೆ, ಸಂಸ್ಥೆಯ ನಿದೇರ್ಶಕ ಚಿದಾನಂದ ಬೈಲಾಡಿ, ಸಂಸ್ಥೆಯ ಪ್ರಾಂಶುಪಾಲ ಪ್ರಕಾಶ್ ಪೈ ಬಿ, ಕಚೇರಿ ಅಧೀಕ್ಷಕ ಉಮೇಶ್ ಎಮ್, ಒಕ್ಕಲಿಗ ಸಮುದಾ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮೋಹನ್ ಗೌಡ ಇಡ್ಯಡ್ಕ, ಎ.ವಿ.ಜಿ.ಅಸೋಸಿಯೇಟ್ಸ್‌ನ ಮಾಲಕ ಎ.ವಿ.ನಾರಾಯಣ, ಕೊಂಕಣ್ ರೈಲ್ವೇ ಇಲಾಖೆಯ ಸ್ಟೇಷನ್ ಮೆನೇಜರ್ ಸುರೇಶ್ ಡಿ.ವಿ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ ಸೇರಿದಂತೆ ಸಂಸ್ಥೆಯ ತರಬೇತಿದಾರರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.