HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಇಂದು ರಾಜ್ಯ ಜೀವ ವೈವಿದ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಕಡಬಕ್ಕೆ ಆಗಮನ


ಕಡಬ: ರಾಜ್ಯ ಜೀವ ವೈವಿದ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಪೆರಾಬೆ ಗ್ರಾಮ ಉರುಂಬಿಯಲ್ಲಿ ಕುಮಾರಧಾರ ನದಿಗೆ ಬಾಗಿನ ಅರ್ಪಿಸಿ ಬಳಿಕ ಕಡಬದ ಅಂಬೇಡ್ಕರ್ ಭವನದಲ್ಲಿ ಜೀವ ವೈವಿದ್ಯ ನಿರ್ವಹಣಾ ಸಭೆ ನಡೆಸಲಿದ್ದಾರೆ ಎಂದು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಹೇಳಿದ್ದಾರೆ. ಸಭೆಯು ಪೂರ್ವಾಹ್ನ 11.30 ಸುಮಾರಿಗೆ ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಈ ಸಭೆಯಲ್ಲಿ ಜೀವ ವೈವಿದ್ಯ ನಿರ್ವಹಣಾ ಸಮಿತಿಯ ಕಡಬ ತಾಲೂಕು ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಸದಸ್ಯರಾದ ತೇಜಶ್ವಿನಿಶೇಖರ ಗೌಡ, ಶುಭದಾ ರೈ, ಮುತ್ತ ಅಜಿಲ, ವಾಸುದೇವ ಇಡ್ಯಾಡಿ, ಚಿದಾನಂದ ಅಜಿಲ ಉಪಸ್ಥಿತರಿರಲಿದ್ದಾರೆ. ಸಭೆಯಲ್ಲಿ ಕಡಬ ತಹಸೀಲ್ದಾರ್ ಸಾಮಾಜಿಕ ಅರಣ್ಯ ಇಲಾಖಾ ಅಧಿಕಾರಿಗಳು, ವಲಯ ಅರಣ್ಯ ಇಲಾಖೆ ಪಂಜ ಹಾಗೂ ಸುಬ್ರಹ್ಮಣ್ಯ, ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಕಡಬ, ಸಹಾಯಕ ನಿರ್ಧೇಶಕರು ಪಶು ಸಂಗೋಪನಾ ಇಲಾಖೆ, ತಾಲೂಕು ಆಯೂಷ್ ವೈದ್ಯಾಧಿಕಾರಿ, ಅಲ್ಲದೆ ಜನತಾ ಜೀವ ವೈವಿದ್ಯ ಸಂಯೋಜಕಿ ಶ್ವೇತಾ, ಎಂ.ಜಿ.ಎನ್.ಆರ್.ಇ.ಜಿ.ಎ ಕಡಬ ಇದರ ತಾಂತ್ರಿಕ ಸಹಾಯಕಿ, ಪ್ರಶಾಂತಿ, ಸವಿತಾ ಲೋಬೋ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ನವೀನ್ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.