HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಗಾಂಧಿಯೊಂದಿಗೆ ಹೆಜ್ಜೆ ಹಾಕಿದ ಸ್ವಾತಂತ್ರ್ಯ ಹೋರಾಟಗಾರ ಕುಂಬ್ರದ ಇಬ್ರಾಹಿಂ ಹಾಜಿ ಬೊಳ್ಳಾಡಿ ನಿಧನ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: 1934 ರಲ್ಲಿ ದೇಶದ ಸ್ವಾತಂತ್ರ್ಯ ಹೋರಾಟ ಪರ್ಯಟನೆಯ ಭಾಗವಾಗಿ ಮಹಾತ್ಮ ಗಾಂಧೀಜಿಯವರು ಪುತ್ತೂರಿನಿಂದ ಸುಳ್ಯದ ವರೆಗೆ ಕಾಲ್ನಡಿಗೆ ಜಾಥ ಮಾಡಿದ್ದರು. ಅಂದು ಪುತ್ತೂರಿಗೆ ತೆರಳಿ ಅಲ್ಲಿ ಗಾಂಧಿಯವರನ್ನು ಸ್ವಾಗತಿಸಿ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ ಕುಂಬ್ರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂದೇ ಕರೆಸಿಕೊಂಡಿದ್ದ ಇಬ್ರಾಹಿಂ ಹಾಜಿ (99 ವ)ಬೊಳ್ಳಾಡಿಯವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಅ.೦೪ ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಬೊಳ್ಳಾಡಿಯಲ್ಲಿ ವಾಸವಾಗಿದ್ದ ಇವರು ೧೯೩೪ ರಲ್ಲಿ ಕರಾವಳಿಗೆ ಗಾಂಧೀಯವರು ಬಂದಾಗ ಬಾಲಕನಾಗಿದ್ದು ಗಾಂಧಿ ಜೊತೆ ಒಂದು ವಾರ ಕಳೆದಿದ್ದರು ಎಂದು ಸ್ವತಃ ಇಬ್ರಾಹಿಂ ಬೊಳ್ಳಾಡಿಯವರೇ ಸಂದರ್ಶನವೊಂದರಲ್ಲಿ ತಮ್ಮ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಹೇಳಿಕೊಂಡಿದ್ದರು. ಪುತ್ತೂರಿನಿಂದ ಬೆಂಗಳೂರಿನ ತನಕ ಕಾಲ್ನಡಿಗೆಯಲ್ಲೇ ಸಾಗಿದ್ದರು. ಬೆಂಗಳೂರಿನಲ್ಲಿ ನಡೆದ ಹಲವು ಸ್ವಾತಂತ್ರ್ಯ ಹೋರಾಟಗಳಲ್ಲಿ ಇಬ್ರಾಹಿಂ ಬೊಳ್ಳಾಡಿಯವರು ಭಾಗವಹಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಇವರಿಗೆ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವ ನೀಡಿವೆ. ಶೇಖಮಲೆ ಜುಮಾ ಮಸೀದಿಯ ಮಾಜಿ ಕಾಯದರ್ಶಿಯಾಗಿ, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ ಇದರ ಪೋಷಕರಾಗಿದ್ದ ಇವರು ಹಳೇಯ ಕಾಲದ ಇತಿಹಾಸವನ್ನು ಸಮಗ್ರವಾಗಿ ವಿವರಿಸುತ್ತಿದ್ದ ವ್ಯಕ್ತಿಯಾಗಿದ್ದರು.
ಮೃತರು ಪುತ್ರರಾದ ಅಬ್ದುಲ್ಲಾ, ಅಬ್ಬಾಸ್, ಮಹಮ್ಮದ್, ಬಶೀರ್ ಫೈಝಿ, ಪುತ್ರಿಯರಾದ ಆಮೀನಾ ಮತ್ತು ಸಫೀಯರವರುಗಳನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.