HomePage_Banner
HomePage_Banner
HomePage_Banner
HomePage_Banner
HomePage_Banner

ಫಾತಿಮಾ ಸ್ಮೈಲ್ ಗ್ರೂಪ್ ಆಫ್ ಕ್ಲಿನಿಕ್ 4ನೇ ಸಹಸಂಸ್ಥೆ ಶುಭಾರಂಭ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಫಾತಿಮಾ ಸ್ಮೈಲ್ ಗ್ರೂಪ್ ಆಫ್ ಕ್ಲಿನಿಕ್ 4ನೇ ಸಹಸಂಸ್ಥೆ ಅ.4ರಂದು ವಿಟ್ಲ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಪುತ್ತೂರು ಮುದರ್ರಿಸ್ ಅಸ್ಸಯ್ಯದ್ ಅಹಮ್ಮದ್ ಪೂಕೋಯ ತಂಙಲ್ ದುವಾಃ ಆಶೀರ್ವಚನಗೈದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಕ್ಲಿನಿಕ್‌ನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿಯೂ ಆಧುನಿಕ ತಂತ್ರಜ್ಞಾನಗಳ ಬಳಕೆ ಇಂದಿಗೆ ಹೆಚ್ಚು ಆವಶ್ಯಕ. ಈ ನಿಟ್ಟಿನಲ್ಲಿ ವಿಟ್ಲದಲ್ಲಿ ಆಧುನಿಕ ಶೈಲಿಯ ಉಪಕರಣಗಳೊಂದಿಗೆ ಪ್ರಾರಂಭಗೊಂಡಿರುವ ಫಾತಿಮ ಸ್ಮೈಲ್ ಕೇರ್ ಡೆಂಟಲ್ ಕ್ಲಿನಿಕ್‌ನ ಪ್ರಯೋಜನವನ್ನು ವಿಟ್ಲದ ಜನತೆ ಪಡೆಯುವಂತಾಗಲಿ ಎಂದು ಹಾರೈಸಿದರು.


ಜಿ.ಪಂ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ, ಬೆಳೆಯುತ್ತಿರುವ ವಿಟ್ಲಕ್ಕೆ ಅತ್ಯಾಧುನಿಕ ಶೈಲಿಯ ದಂತ ಚಿಕಿತ್ಸಾಲಯ ಉತ್ತಮ ಕೊಡುಗೆಯಾಗಿದೆ. ತಾಲೂಕು ಕೇಂದ್ರವಾಗಲಿರುವ ವಿಟ್ಲದ ಬೆಳವಣಿಗೆಗೆ ಪೂರಕವಾಗಿದೆ. ಸೇವಾ ಮನೋಭಾವದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದಾಗ ಯಶಸ್ವಿ ವೈದ್ಯನಾಗಲು ಸಾಧ್ಯ ಎಂದರು.


ರಶೀದ್ ವಿಟ್ಲ ಮಾತನಾಡಿ, ಅನುಭವೀ ವೈದ್ಯರ ತಂಡವನ್ನು ಒಳಗೊಂಡಿರುವ ಫಾತಿಮ ಸ್ಮೈಲ್ ಕೇರ್ ವಿಟ್ಲವನ್ನು ಕೇಂದ್ರವನ್ನಾಗಿಸಿ ಸುತ್ತ ಮುತ್ತಲ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದರು. ಪುತ್ತೂರಿನ ಜಿಲ್ಲಾ ನ್ಯಾಯಾಲಯದ ಶಿರಸ್ತೇದಾರ್ ಅಬ್ಬಾಸ್ ಮಾತನಾಡಿ, ಜನತೆಯ ಸೇವೇಯೇ ಮುಖ್ಯ ಧ್ಯೇಯವ್ನಾಗಿಸಿರುವ ಸಂಸ್ಥೆಯ ಉನ್ನತಿಯತ್ತ ಸಾಗಲಿ ಎಂದು ಆಶಿಸಿದರು. ಜಿಲ್ಲಾ ವಕ್ಫ್ ಬೋರ್ಡ್‌ನ ಯುನಿಟಿ ಹಸನ್ ಹಾಜಿ, ಅಬೂಬಕ್ಕರ್ ಸಿದ್ದಕ್, ವಿಟ್ಲ ಪಡ್ನೂರು ಗ್ರಾ.ಪಂ ಮಾಜಿ ಸದಸ್ಯ ಶರೀಫ್, ಪುತ್ತು ಕೊಡಂಗೆ, ಶರೀಫ್ ಕೊಡಂಗೆ, ಮಿತ್ರ ಫ್ಯಾಶನ್‌ನ ಮ್ಹಾಲಕ ಶರೀಫ್ ಸೂಪರ್‌ಲೈನ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಭೇಟಿ ನೀಡಿ ಶುಭಹಾರೈಸಿದರು. ಫಾತಿಮ ಸ್ಮೈಲ್ ಗ್ರೂಪ್ ಆಫ್ ಕ್ಲಿನಿಕ್‌ನ ಡಾ.ಶಾಫಿ ಬಿ. ಹಾಗೂ ಕ್ಲಿನಿಕ್ ವೈದ್ಯರ ತಂಡ ಉಪಸ್ಥಿತರಿದ್ದರು. ಡಾ.ಇಸ್ಮಾಯಿಲ್ ಸರ‍್ಪ್ರಾಝ್ ಸ್ವಾಗತಿಸಿ, ವಂದಿಸಿದರು.


ಚಿಕಿತ್ಸೆಗಳು:

ಹಲ್ಲು ಕೀಳುವುದು, ಹಲ್ಲು ತುಂಬಿಸಿವುದು, ವಕ್ರದಂತ ಚಿಕಿತ್ಸೆ, ಬೇರುನಾಳ ಚಿಕಿತ್ಸೆ, ಕೃತಕ ಹಲ್ಲು ಜೋಡಣೆ, ಮಕ್ಕಳ ಹಲ್ಲಿನ ಚಿಕಿತ್ಸೆ, ಹಲ್ಲು ಶುಚಿಗೊಳಿಸುವುದು ಹಾಗೂ ಒಸಡು ಶಸ್ತ್ರಚಿಕಿತ್ಸೆಗಳು ಮೊದಲಾದ ಹಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದ ಸೇವೆಗಳು ಲಭ್ಯವಿದೆ.

ಡೆಂಟಲ್ ಸರ್ಜನ್‌ಗಳು:
ದರ್ಬೆ ಮಹಾಲಿಂಗೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ಫಾತಿಮಾ ಸ್ಮೈಲ್ ಪ್ಲಸ್‌ನಲ್ಲಿ ಡೆಂಟಲ್ ಸರ್ಜನ್‌ಗಳಾದ ಡಾ.ಶಾಫಿ, ಡಾ.ಕೀರ್ತಿಕಾ ಕೆ., ಡಾ.ಅಪೂರ್ವ, ಕಲ್ಲಡ್ಕ ಹ್ಯಾಪಿ ಸ್ಟಾರ್ ಟವರ್‌ನಲ್ಲಿರುವ ಫಾತಿಮಾ ಸ್ಮೈಲ್ ಟೂತ್‌ನಲ್ಲಿ ಡಾ.ಬೀಫಾತಿಮಾ ಕೆ., ಡಾ.ನಾಸಿರ, ಉಪ್ಪಿನಂಗಡಿ ಪೃಥ್ವಿ ಶಾಫಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಫಾತಿಮಾ ಸ್ಮೈಲ್ ಡೆಂಟ್‌ನಲ್ಲಿ ಡಾ. ಮಹಮ್ಮದ್ ಅನಾಸ್, ಡಾ.ಸಿಯಾದ್, ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್‌ನಲ್ಲಿರುವ ಫಾತಿಮಾ ಸ್ಮೈಲ್ ಕೇರ್‌ನಲ್ಲಿ ಡಾ.ಇಸ್ಮಾಯಿಲ್ ಸರ‍್ಪ್ರಾಝ್, ಡಾ.ಶಾಫಿ ಬಿ., ಹಾಗೂ ಡಾ.ನಾದಿಯಾ ಚಿಕಿತ್ಸೆ ಲಭ್ಯರಿದ್ದಾರೆ.

ವಿಸಿಟಿಂಗ್ ಡಾಕ್ಟರ‍್ಸ್:
ಕ್ಲಿನಿಕ್‌ನಲ್ಲಿ ಲಭ್ಯವಿರುವ ವೈದ್ಯರಲ್ಲದೆ ನುರಿತ ವೈದ್ಯರುಗಳು ಸೇವೆಗೆ ಲಭ್ಯಲಿರಲಿದ್ದಾರೆ. ಆರ್ಥೋಡೋಂಟಿಸ್ಟ್ ಡಾ.ರೇವಂತ್ ಸೂಂತೋಡು, ಎಂಡೋಡೋಂಟಿಸ್ಟ್ ಡಾ.ಯಾಸೀರ್ ಅರಾಫತ್, ಓರಲ್& ಮ್ಯಾಕ್ಸಿಯಾಫೀಸಿಯಲ್ ಸರ್ಜನ್ ಡಾ.ಜೊಯೆಲ್, ಪಿರಿಯಾಡೋಂಟಿಸ್ಟ್ ಮತ್ತು ಇಂಪ್ಲೆಂಟಾಲಜಿಸ್ಟ್ ಡಾ.ಅಜಯ್ ಕುಮಾರ್ ಇ.ಜಿ., ಪಿರಿಯಾಡೋಂಟಿಸ್ಟ್ ಡಾ.ಅಶ್ವಿನ್ ಡಿ. ಮೊದಲಾದ ವೈದ್ಯರು ಎಲ್ಲಾ ಕ್ಲಿನಿಕ್‌ಗಳಲ್ಲೂ ಸೇವೆಗೆ ಲಭ್ಯಲಿರಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.