ಸರಕಳ್ಳತನದ ಆರೋಪಿಗಳನ್ನು 48 ಗಂಟೆಯಲ್ಲಿ ಬಂಧಿಸಿದ ವಿಟ್ಲ ಠಾಣಾ ಎಸ್.ಐ, ಸಿಬ್ಬಂದಿಗಳಿಗೆ ಕುಂಡಡ್ಕ ವಿಷ್ಣುಮೂರ್ತಿ ಯುವಕ ಮಂಡಲ, ದೇವಸ್ಥಾನದ ಆಡಳಿತ ಸಮಿತಿಯಿಂದ ಸನ್ಮಾನ

Puttur_Advt_NewsUnder_1
Puttur_Advt_NewsUnder_1

 
ಪುತ್ತೂರು: ಕೆಲದಿನಗಳ ಹಿಂದೆ ಕುಂಡಡ್ಕ ಪರಿಸರದಲ್ಲಿ ನಡೆದ ಸರಕಳ್ಳತನ ಪ್ರಕರಣವನ್ನು ಬೇಧಿಸಿ, ಆರೋಪಿಗಳನ್ನು ೪೮ ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾದ ವಿಟ್ಲ ಠಾಣಾ ಉಪನಿರೀಕ್ಷಕ ಹಾಗೂ ಸಿಬಂದಿಗಳಿಗೆ ಕುಂಡಡ್ಕ ವಿಷ್ಣುನಗರದ ಶ್ರೀವಿಷ್ಣುಮೂರ್ತಿ ಯುವಕ ಮಂಡಲ ಹಾಗೂ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಸನ್ಮಾನ ಕಾರ್ಯಕ್ರಮವು ಅ.4ರಂದು ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಸನ್ಮಾನ ಸ್ಚೀಕರಿಸಿದ ಉಪನಿರೀಕ್ಷಕ ವಿನೋದ್ ರೆಡ್ಡಿ ಮಾತನಾಡಿ, ಪೊಲೀಸ್ ಇಲಾಖೆಯಿಂದ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೇವೆ. ನಮ್ಮ ಕೆಲಸವನ್ನು ಗುರುತಿಸಿ ಸನ್ಮಾನಿಸಿರುವುದು ನಮ್ಮ ಕರ್ತವ್ಯಕ್ಕೆ ದೊರೆತ ಬೋನಸ್ ಆಗಿದೆ ಎಂದರು. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ನಡೆದ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕೊರೋನಾ ವೈರಸ್‌ನಿಂದಾಗಿ ಮಾಸ್ಕ್ ಧರಿಸುವ ಜಾಗೃತಿಯಂತೆ ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ಬೈಕ್ ಚಾಲನೆ ಮಾಡುವಂತೆ ಜಾಗೃತಿ ಮೂಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ಅವರು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ವಿಟ್ಲ ಅರಮನೆಯ ಕೃಷ್ಣಯ್ಯರವರು ಮಾತನಾಡಿ, ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರವೂ ಆವಶ್ಯಕ. ಇಲ್ಲಿ ನಡೆದ ಪ್ರಕರಣವನ್ನು ಬೇದಿಸಿದ ಪೊಲೀಸರರನ್ನು ಗೌರವಿಸುವ ಮೂಲಕ ಕುಂಡಡ್ಕದ ವಿಷ್ಣು ಯುವಕ ಮಂಡಲದ ಯುವಕ ತಂಡವು ಉತ್ತಮ ಕಾರ್ಯವನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಸಮಾಜದ ಬಡವರ ಕಣ್ಣಿರು ಒರೆಸುವ ಕಾರ್ಯಗಳು ಯುವಕ ಮಂಡಲದ ಮೂಲಕ ನಡೆಯಲಿ ಎಂದು ಹೇಳಿದರು.

ಜಾತ್ರೋತ್ಸವ ಸಮಿತಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮರುವಾಳ ಮಾತನಾಡಿ, ಪೊಲೀಸ್ ಇಲಾಖೆಯು ಸೈನ್ಯಕ್ಕೆ ಸಮಾನವಾದ ಇಲಾಖೆ. ತಮ್ಮ ಸರ್ವಸ್ವವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟವರು. ಸಾರ್ವಜನಿಕರಿಗೆ ನ್ಯಾಯ ಒದಗಿಸುವ ಪೊಲೀಸ್ ಇಲಾಖೆಗೆ ನಾವು ಆಧಾರವಾಗಿ ನಿಲ್ಲಬೇಕು ಎಂದರು.

ಸನ್ಮಾನ ಸ್ವೀಕರಿಸಿದ ಜಿಲ್ಲಾ ಅಪರಾಧ ಪತ್ತೆ ದಳದ ಪ್ರವೀಣ್ ರೈ, ಪ್ರತಾಪ್ ರೆಡ್ಡಿ ಮಾತನಾಡಿ ಅನಿಸಿಕೆ ವ್ಯಕ್ತಪಡಿಸಿದರು. ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಗೋವಿಂದ ರಾಜ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಠಾಣಾ ಉಪ ನಿರೀಕ್ಷಕ ವಿನೋದ್ ರೆಡ್ಡಿ, ಜಿಲ್ಲಾ ಅಪರಾದ ಪತ್ತೆ ದಳದ ಪ್ರವೀಣ್ ರೈ, ಸಿಬಂದಿಗಳಾದ ಪ್ರಸನ್ನ, ಲೋಕೇಶ್, ಪ್ರತಾಪ್ ರೆಡ್ಡಿ, ವಿನಾಯಕರವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು,ಯುವಕ ಮಂಡಲದ ಗೌರವಾಧ್ಯಕ್ಷರಾಗಿರುವ ದಯಾನಂದ ಶೆಟ್ಟಿ ಉಜಿರೆಮಾರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮಹೇಶ್ ಶಂಖನಾದ ಮೊಳಗಿಸಿದರು. ಯತೀಶ್ ಹಡೀಲು, ಸಾಗರ್ ಬರೆ. ಜಿತೇಶ್, ಸುದೀರ್, ಪುರಂದರ ಪಿಲಿಪೆ, ಪ್ರಶಾಂತ್ ಹೆಮನಾಜೆ, ಜಯಕರ ಶೆಟ್ಟಿ, ಕಿರಣ್ , ಗಿರೀಶ್, ಹೃತಿಕ್, ಆನಂದ ಮಾನಾಜೆಮೂಲೆ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ವಿನೋದ್ ವಿಷ್ಣುನಗರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.