ಆಟೋ ಚಾಲಕ, ಮಾಲಕರ, ಕುಟುಂಬದ ಆರೋಗ್ಯ ಕಾಳಜಿ- ಪುತ್ತೂರಿನಲ್ಲಿ ನಡೆಯಿತು ಉಚಿತ ಆರೋಗ್ಯ ತಪಾಸಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1
  • ರೋಟರಿ ಯುವ, ನೇತ್ರತ್ವ ಉಷಾ ಪಾಲಿಕ್ಲಿನಿಕ್, ಧನ್ವಂತರಿ ಲ್ಯಾಬೋರೇಟರಿ ಸಹಭಾಗಿತ್ವ
  • ಒಂದೇ ಸೂರಿನಡಿ ಎಲ್ಲಾ ರೀತಿಯ ವೈದ್ಯಕೀಯ ಸೇವೆ ಉತ್ತಮ – ಡಾ. ಅಶೋಕ್ ಕುಮಾರ್ ರೈ
  • ಆರೋಗ್ಯಕ್ಕೆ ಹೆಚ್ಚಿನ ಅದ್ಯತೆ ಕೊಡುವ ಉದ್ದೇಶ – ಡಾ. ಹರ್ಷಕುಮಾರ್ ರೈ ಮಾಡಾವು


ಪುತ್ತೂರು: ಲಾಕ್‌ಡೌನ್ ಸಡಿಲಗೊಂಡು ಜನ ಮತ್ತು ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಸಿಕ್ಕರೂ ಆಟೊ ಸೇವೆಯನ್ನು ಜನರು ನಿರೀಕ್ಷಿತಮಟ್ಟದಲ್ಲಿ ಪಡೆಯುತ್ತಿಲ್ಲ. ದುಡಿಮೆ ಇಲ್ಲದೇ ಆಟೋ ಚಾಲಕರು, ಮಾಲಕರು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಚಾಲಕರು ತಮ್ಮ ಮತ್ತು ಕುಟುಂಬದ ಆರೋಗ್ಯ ಕಾಪಾಡುವಲ್ಲಿ ಆರ್ಥಿಕ ತೊಂದರೆ ಎದುರಿಸುತ್ತಿರುವುದನ್ನು ಮನಗಂಡ ರೋಟರಿ ಕ್ಲಬ್ ಪುತ್ತೂರು ಯುವ ಸಂಸ್ಥೆಯು ಉಷಾ ಪಾಲಿಕ್ಲಿನಿಕ್ ಮತ್ತು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಸಹಭಾಗಿತ್ವದಲ್ಲಿ ಪುತ್ತೂರು ತಾಲೂಕಿನ ಆಟೋ ಚಾಲಕ ಮತ್ತು ಮಾಲಕರ ಕುಟುಂಬದವರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮಾಡುವ ಮೂಲಕ ಚಾಲಕರ ಸೇರಿದಂತೆ ಅವರ ಕುಟುಂಬದವರ ಆರೋಗ್ಯ ಕಾಪಾಡುವಲ್ಲಿ ಮುಂದಾಗಿದ್ದಾರೆ.
ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆ.೪ ರಂದು ದರ್ಬೆ ಶ್ರೀರಾಮ ಸೌಧದಲ್ಲಿರುವ ಉಷಾ ಪಾಲಿ ಕ್ಲಿನಿಕ್‌ನಲ್ಲಿ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಶಿಬಿರಕ್ಕೆ ಚಾಲನೆ ನೀಡಿದರು.

ಒಂದೇ ಸೂರಿನಡಿ ಎಲ್ಲಾ ರೀತಿಯ ವೈದ್ಯಕೀಯ ಸೇವೆ ಉತ್ತಮ:
ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಅವರು ಮಾತನಾಡಿ ಕೊರೋನಾ ಮಹಾರೋಗಕ್ಕೆ ಸಂಬಂಧಿಸಿ ಎಲ್ಲಾ ಇಲಾಖೆಗಳು ಕೊರೋನಾ ವಾರಿಯರ್‍ಸ್ ಆಗಿ ಸೇವೆ ನೀಡುತ್ತಿರುವ ಸಂದರ್ಭದಲ್ಲಿ ಬೇರೆ ಬೇರೆ ಖಾಯಿಲೆಗಳಿಗೆ ಒಂದೇ ಸೂರಿನಡಿಯಲ್ಲಿ ವೈದ್ಯರನ್ನು ಸೇರಿಸಿ ಚಿಕಿತ್ಸೆ ಕೊಡಿಸುವ ಶಿಬಿರ ಉತ್ತಮವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರೋಟರಿ ಯುವ ಸಂಸ್ಥೆಯಿಂದ ಡಾ. ಅಶೋಕ್ ಕುಮಾರ್ ರೈ ಅವರನ್ನು ಸನ್ಮಾನಿಸಲಾಯಿತು.


ಆರೋಗ್ಯಕ್ಕೆ ಹೆಚ್ಚಿನ ಅದ್ಯತೆ ಕೊಡುವ ಉದ್ದೇಶ :
ಶಿಬಿರದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಡಾ. ಹರ್ಷಕುಮಾರ್ ರೈ ಮಾಡಾವು ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಆಟೋ ಚಾಲಕರು ಸಂಕಷ್ಟಕ್ಕೆ ಒಳಾಗಿದ್ದಾರೆ. ಅವರಿಗೆ ಅವರ ಮತ್ತು ಕುಟುಂಬದ ಆರೋಗ್ಯದ ಕಡೆ ಗಮನ ಹರಿಸಲು ಆರ್ಥಿಕ ಸಮಸ್ಯೆ ಎದುರಾಗಿದೆ. ಇಂತಹ ಪ್ರಥಮ ಬಾರಿಗೆ ರೋಟರಿ ಯುವ ಸಂಸ್ಥೆ ಅವರ ರಿಕ್ಷಾ ಚಾಲಕರು ಕೂಡಾ ಆರೋಗ್ಯದಿಂದ ಇರಬೇ  ಕೆಂಬ ನೆಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ. ಸುಮಾರು ೧೫ಕ್ಕೂ ಹೆಚ್ಚು ತಜ್ಞ ವೈದ್ಯರು ಸಲಹೆ ಮತ್ತು ಚಿಕಿತ್ಸೆಗೆ ಲಭ್ಯರಿದ್ದಾರೆ ಎಂದರು.


ರಿಕ್ಷಾ ಚಾಲಕರಿಗೆ ಗೌರವ:
ಕೋವಿಡ್ ಸಂದರ್ಭದಲ್ಲೂ ಅನಾರೋಗ್ಯಕ್ಕೀಡಾದವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕಾರ ನೀಡುತ್ತಿದ್ದ ಆಟೋ ಚಾಲಕರನ್ನು ಗೌರವಿಸಲಾಯಿತು. ಬಿಎಮ್‌ಎಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಗೌಡ, ಕರ್ನಾಟಕ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಜಯರಾಮ ಕುಲಾಲ್ ಸೇರಿದಂತೆ ಹಲವಾರು ಮಂದಿ ರಿಕ್ಷಾ ಚಾಲಕರು ಮತ್ತು ಅವರ ಕುಟುಂಬದವರು ಶಿಬಿರದ ಪ್ರಯೋಜನ ಪಡೆದರು. ತಜ್ಞ ವೈದ್ಯರುಗಳಾದ ಹೃದ್ರೋಗ ತಜ್ಞ ಡಾ.ವಿಶು ಕುಮಾರ್, ಪಾದರ್ ಮುಲ್ಲಾರ್ ಆಸ್ಪತ್ರೆಯ ಮಧುಮೇಹ ತಜ್ಞ ಡಾ.ಗಣೇಶ್ ನಾಯಕ್, ಎನಪೋಯ ಆಸ್ಪತ್ರೆಯ ಜನರಲ್ ಪಿಜಿಷಿಯನ್ ಡಾ.ಶ್ರತಿ ಭಟ್, ಪ್ರಸೂತಿ ತಜ್ಞೆ ಡಾ.ಶ್ರೀಲತಾ ಭಟ್‌ರವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಸಂಘಟಕರಾದ ಧನ್ವಂತರಿ ಕ್ಲಿನಿಕ್ ಲ್ಯಾಬೊರೇಟರಿಯ ಮಾಲಕ ಚೇತನ್ ಪ್ರಕಾಶ್ ಕಜೆ, ಉಷಾ ಪಾಲಿ ಕ್ಲಿನಿಕ್‌ನ ಮಾಲಕ ಗಣೇಶ್ ಭಟ್, ರೋಟರಿ ಯುವದ ಕೋಶಾಧಿಕಾರಿ ಕುಸುಮ್ ರಾಜ್, ಜೊತೆ ಕಾರ್ಯದರ್ಶಿ ದೀಕ್ಷಿತ್ ಹೆಗ್ಡೆ, ರಾಜೇಶ್ವರಿ, ರೋಟರಿ ಯುವದ ಪೂರ್ವಾಧ್ಯಕ್ಷ ನರಸಿಂಹ ಪೈ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಯುವ ನಿಯೋಜಿತ ಅಧ್ಯಕ್ಷ ಭರತ್ ಪೈ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.