HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸುಳ್ಯದಲ್ಲಿ ಕಮ್ಮಾಡಿ ಇಬ್ರಾಹಿಂ ಹಾಜಿಯವರ ಅನುಸ್ಮರಣೆ, ಪ್ರಾರ್ಥನಾ ಸಂಗಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಹ್ಯುದ್ದೀನ್ ಜುಮ್ಮಾ ಮಸೀದಿ ( ತರ್ಬಿಯತ್ತುಲ್ ಇಸ್ಲಾಂ ಜಮಾಅತ್ ಕಮಿಟಿ) ಗಾಂಧಿನಗರ, ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಷನ್, ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ಸುಳ್ಯ, ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಹಾಗೂ ಸುಳ್ಯ ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷರು, ಕೊಡುಗೈ ದಾನಿಗಳು, ಕಮ್ಮಾಡಿ ಸಮೂಹ ಸಂಸ್ಥೆಗಳ ಮ್ಹಾಲಕರು ಆಗಿದ್ದು ಇತ್ತೀಚೇಗೆ ನಿಧನರಾದ ಅನುಸ್ಮರಣೆ, ಪ್ರಾರ್ಥನಾ ಸಂಗಮ ಕಾರ್ಯಕ್ರಮವು ಸುಳ್ಯ ಗಾಂಧಿನಗರದ ಎಂ.ಐ ಮದರಸ ವಠಾರದಲ್ಲಿ ನಡೆಯಿತು. ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಕೆ.ಎಂ ಮುಸ್ತಫಾ ಸುಳ್ಯರವರು ಮಾತನಾಡಿ ಜಿಲ್ಲೆಯ ಕೈಗಾರಿಕೋದ್ಯಮಿಗಳು ವಿವಿಧ ಸಾಮಾಜಿಕ, ಧಾರ್ಮಿಕ ದೀನಿ ಸೇವೆಗಳಲ್ಲಿ ತೊಡಗಿಸಿಕೊಂಡಿದ ಹಾಜಿ ಇಬ್ರಾಹಿಂ ಕಮ್ಮಾಡಿಯವರು ನಮ್ಮನ್ನಗಲಿದ್ದು ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು. ಕಮ್ಮಾಡಿ ಇಬ್ರಾಹಿಂ ಹಾಜಿಯವರು ನೂರಾರು ಮಸೀದಿ, ಮದರಸಗಳ ನಿರ್ಮಾಣಕ್ಕೆ ಸಹಕಾರಿಸಿದ್ದು ಭೂಮಿನಲ್ಲಿ ಅಲ್ಲಾಹನ ಭವನವಾದ ಮಸೀದಿಯನ್ನು ನಿರ್ಮಿಸಿದವರಿಗೆ ಸ್ವರ್ಗದಲ್ಲಿ ಅಲ್ಲಾಹು ಭವನ ನಿರ್ಮಿಸಿಕೊಡಲಿದ್ದು ಇಬ್ರಾಹಿಂ ಕಮ್ಮಾಡಿ ಹಾಜಿಯವರು ಇದಕ್ಕೆ ಅರ್ಹರು ಎಂದು ಅವರು ಹೇಳಿದರು. ಅಲ್ಲದೇ ವಿವಿಧ ಸಂಘಟನೆ, ಶಿಕ್ಷಣ ಸಂಸ್ಥೆಗಳಿಗೆ, ಜಾತಿ, ಮತ, ಭೇಧವಿಲ್ಲದೇ ಧನ ಸಹಾಯ ಮಾಡುವ ಮೂಲಕ ಕೊಡುಗೈ ದಾನಿಯಾಗಿದ್ದರು ಎಂದು ಅವರು ಹೇಳಿದರು.

ಗಾಂಧಿನಗರ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಗೂ ಕಮ್ಮಾಡಿ ಬೈತುಲ್ ರ್ರಹ್ಮಮಾನ್ ಮಸೀದಿ ಅಧ್ಯಕ್ಷ ಹಾಜಿ ಎಸ್. ಕುಂಞಿ ಕಮ್ಮಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಳ್ಯ ತಾಲೂಕು ಜಂಮೀಯ್ಯತುಲ್ ಉಲಮಾ ಅಧ್ಯಕ್ಷರಾದ ಅಸ್ಸಯ್ಯದ್ ಕುಂಞಿ ಕೋಯ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ನಮ್ಮನ್ನಗಲಿದ ಉಲಮಾ ನೇತಾರ ತಾಜುಲ್ ಫುಖಾಹ್ ಬೇಕಲ ಉಸ್ತಾದ್, ಸುಳ್ಯದ ಹಿರಿಯ ಉದ್ಯಮಿಗಳಾದ ಹಾಜಿ ಎಸ್. ಅಬ್ದುಲ್ಲಾ ಮಲ್ನಾಡ್, ಹಾಗೂ ಸುಳ್ಯದ ಮಮ್ಮುಂಞಿ ಹಾಜಿ ಯವರ
ಅಬ್ದುಲ್ ರಹಿಮಾನ್ ಹಾಜಿ ಬೈತಡ್ಕ, ಮುಹಮ್ಮದ್ ಅಲಿ ಕೂರ್ನಡ್ಕ, ಅರ್ತಿಕರೆ ಖತೀಜಮ್ಮ ಮೊದಲಾದವರ ಸ್ಮರಣೆಯನ್ನು ಗಾಂಧಿನಗರ ಮಸೀದಿ ಖತೀಬ್‌ರಾದ ಅಲ್‌ಹಾಜ್ ಆಶ್ರಫ್ ಕಾಮಿಲ್ ಸಖಾಫಿಯವರು ನೆರೆವೇರಸಿದರು. ಯಾಸಿನ್ ಪಾರಾಯಣಾ, ತಹ್ಲೀಲ್ ಸಮರ್ಪಣೆ, ಕೂಟು ಪ್ರಾರ್ಥನೆ ನಡೆಸಲಾಯಿತು. ವೇದಿಕೆಯಲ್ಲಿ ದ.ಕ ಜಿಲ್ಲಾ ಮದರಸ ಸಂಘಟನೆಯ ಅಧ್ಯಕ್ಷ ಇಬ್ರಾಹಿಂ ಸಖಾಫಿ, ಜಮಾಅತ್ ಉಪಾಧ್ಯಕ್ಷರಾದ ಹಾಜಿ ಹಮೀದ್ ಜನತಾ, ಪ್ರಧಾನ ಕಾರ್ಯದಶಿ ಹಾಜಿ ಇಸ್ಮಾಯಿಲ್, ಅನ್ಸಾರಿಯಾ ಯತೀಮ್ ಖಾನಾದ ಅಧ್ಯಕ್ಷ ಮಜೀದ್ ಹಾಜಿ ಜನತಾ, ಪ್ರಧಾನ ಕಾರ್ಯದರ್ಶಿ ಲತೀಫ್ ಹರಕ, ನಗರ ಪಂಚಾಯತ್ ಸದಸ್ಯ ಕೆ.ಎಸ್ ಉಮ್ಮರ್, ಅನ್ಸಾರುಲ್ ಮುಸ್ಲೀಮೀನ್ ಎಸೋಸಿಯೇಷನ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರು, ಅನ್ಸಾರಿಯಾ ಮುದರ್ರೀಸ್ ಅಬೂಬಕರ್ ಹಿಮಮಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.