HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು ಕಾಂಗ್ರೆಸ್ ಕಛೇರಿಯಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಆಭಿಯಾನ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಯುವ ಕಾಂಗ್ರೆಸ್ ಸದಸ್ಯತ್ವದ ಬಗ್ಗೆ ಮಾಹಿತಿ ಕಾರ್ಯಕ್ರಮವು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಅ.೪ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆಪಿಸಿಸಿ ಸದಸ್ಯ ಎಂ.ಬಿ ವಿಶ್ವನಾಥ ರೈ ಮಾತನಾಡಿ ಯುವಕರು ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದು ಯುವಜನಾಂಗವನ್ನು ಪಕ್ಷದಲ್ಲಿ ತೊಡಗಿಸಿಕೊಂಡು ಆ ಮೂಲಕ ದೇಶದ ಭವಿಷ್ಯವನ್ನು ನಿರೂಪಿಸಲು ಮುಂದೆ ಬರಬೇಕು ಎಂದು ಅವರು ಹೇಳಿದರು. ಇಂದು ಯುವಜನಾಂಗವು ಕಾಂಗ್ರೆಸ್‌ನಿಂದ ದೂರವಾಗುತ್ತಿದ್ದು ಅವರಿಗೆ ಪಕ್ಷದ ತತ್ವ ಆದರ್ಶಗಳನ್ನು ತಿಳಿಯಪಡಿಸಿ ಒಗ್ಗೂಡಿಸುವ ಮೂಲಕ ಕಾಂಗ್ರೆಸ್‌ನಲ್ಲಿಯೇ ಮುಂದುವರಿಯುವಂತೆ ಮನವರಿಕೆ ಮಾಡುವ ಕೆಲಸ ಪ್ರತಿಯೊಬ್ಬರಿಂದ ನಡೆಯಬೇಕೆಂದರು.

ಮೋದಿ ಸರಕಾರವು ದೇಶವನ್ನು ನಾಶಗೊಳಿಸುತ್ತ ಬಂದಿದ್ದು, ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಕೆಲಸವನ್ನು ತಾವೇ ಮಾಡಿಸಿದಾಗಿ ಪ್ರಚಾರ ನಡೆಸುತ್ತಾ ಬರುತ್ತಿದ್ದಾರೆ ಎಂದರು. ಪ್ರತಿ ಗ್ರಾಮ ಮಟ್ಟದಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಡಿಯಲ್ಲಿ ಪಕ್ಷದ ನೀತಿ, ಸಿದ್ಧಾಂತವನ್ನು ಮನವರಿಕೆ ಮಾಡಿ ಯುವಕರನ್ನು ಕಾಂಗ್ರೆಸ್ ಸೇರಿಸಿಕೊಳ್ಳಬೇಕೆಂದು ಅವರು ಹೇಳಿದರು.

ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ ಭಾರತದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರು ೧೮ ವರುಷಕ್ಕೆ ಯುವಕರಿಗೆ ಮತದಾನದ ಅವಕಾಶ ನೀಡುವ ಮೂಲಕ ಈ ದೇಶದಲ್ಲಿ ಯುವಕರಿಗೆ ಶಕ್ತಿಯ ತುಂಬುವ ಕೆಲಸ ಮಾಡಿ ಕೊಟ್ಟರು. ಮುಂದೇ ರಾಹುಲ್ ಗಾಂಧಿಯವರು ಯುವ ಸಮುದಾಯವು ಶಕ್ತಿಯುತವಾಗಿ ಮುಂದೆ ಬರಬೇಕೆಂಬ ಉzಶದಿಂದ ಅವಕಾಶ ಒದಗಿಸಿಕೊಟ್ಟರು. ಮೋದಿ ಸರಕಾರವು ಕಳೆದ ಆರು ವರುಷಗಳಿಂದ ದೇಶವನ್ನು ಹಾಳು ಮಾಡುವ ಕೆಲಸವನ್ನು ಹಮ್ಮಿಕೊಂಡು ಬಂದಿದ್ದು, ಕೇಂದ್ರ ಸರಕಾರವು ಎಲ್ಲಾ ಇಲಾಖೆಯನ್ನು ಖಾಸಗೀಕರಣಗೊಳಿಸಿದ್ದು, ಇದೀಗ ರೈಲ್ವೇ ಇಲಾಖೆಯನ್ನೂ ಕೂಡ ಖಾಸಗಿಕರಣ ಮಾಡುವ ಮೂಲಕ ಈ ದೇಶದ ಭವಿಷ್ಯವನ್ನು ನಿರ್ನಾಮ ಮಾಡಲು ಹೊರಟಿದೆ ಎಂದು ಅವರು ಹೇಳಿದರು. ಯುವಕರು ಮುಂದೆ ಬಂದು ದೇಶವನ್ನು ಕಾಪಾಡುವಂತ ಕೆಲಸ ಆಗಬೇಕು ಎಂದು ಅವರು ಹೇಳಿದರು.

ಪುತ್ತೂರು ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಮ್ ಡಿ’ಸೋಜಾ ರವರು ಮಾತನಾಡಿ ಯುವ ಕಾಂಗ್ರೆಸಿಗರು ಪ್ರಾಮಾಣಿಕತೆಯಿಂದ ಪಕ್ಷನಿಷ್ಠೆಯಿಂದ ಕೆಲಸ ಮಾಡಿದಾಗ ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಭವಿಷ್ಯವಿದೆ, ಹೆಚ್ಚಿನ ಮಂದಿ ಯುವ ಕಾಂಗ್ರೆಸ್ ಸದಸ್ಯತ್ವ ಪಡೆದು ದೊಡ್ಡ ದೊಡ್ಡ ಹುದ್ದೆಗೇರಿದವರಾಗಿದ್ದಾರೆ. ಯುವಕರು ಉತ್ತಮ ಗುಣ ನಡತೆಯ ಮೂಲಕ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂದೆ ಬರಬೇಕೆಂದು ಕರೆ ನೀಡಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಮಾತನಾಡಿ ಯುವ ಕಾಂಗ್ರೆಸ್ ಸದಸ್ಯತ್ವರಾಗಿ ಮುಂದೆ ಬರುವ ಮೂಲಕ ಯುವಕರು ತಮ್ಮ ಭವಿಷ್ಯ ನಿರೂಪಿಸಿಕೊಳ್ಳಲು ಸಾಧ್ಯವಿದೆ. ಸಮಾಜದಲ್ಲಿ ಜಾತ್ಯಾತೀತ ಮನೋಭಾವನೆಯಿಂದ ಜೀವಿಸಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಅ.೫ರಂದು ಕಾಂಗ್ರೆಸ್ ಕಛೇರಿಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ ಎಂದು ಅವರು ಹೇಳಿದರು.


ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹರ್ಷದ್ ದರ್ಬೆ ಮಾತನಾಡಿ ಕಾಂಗ್ರೆಸ್ ಪಕ್ಷ ಅದೊಂದು ಜಾತ್ಯಾತೀತ ತತ್ವದಡಿಯಲ್ಲಿ ಎಲ್ಲರನ್ನು ಒಂದುಗೂಡಿಸುವ ಪಕ್ಷವಾಗಿದೆ. ಧರ್ಮ, ಜಾತಿ, ಮತ, ಭೇಧ, ಭಾವ, ಇಲ್ಲದೇ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಕಾರ್ಯಗಳನ್ನು ಮಾಡುವ ಉತ್ತಮ ಪಕ್ಷವಾಗಿದೆ. ಇಂತಹ ಪಕ್ಷದ ಸದಸ್ಯತ್ವ ಪಡೆಯಲು ಯುವಜನಾಂಗ ಮುಂದೆ ಬರಬೇಕು ಎಂದು ಅವರು ಹೇಳಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಯವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನವು ಯಶಸ್ವಿಯಿಂದ ಸಾಗುತ್ತಿದೆ. ಯುವಕರು ಕಾಂಗ್ರೆಸ್ ಸದಸ್ಯತ್ವ ಪಡೆದು ಸೇವೆ ಮಾಡುತ್ತಾ ಬಂದಲ್ಲಿ ಉತ್ತಮ ಅವಕಾಶ ದೊರೆಯಲಿದೆ ಎಂದು ಅವರು ಹೇಳಿದರು.

ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಇಸಾಕ್ ಸಾಲ್ಮರ ಮಾತನಾಡಿ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಪ್ರಶ್ನಿಸುವವರಿಗೆ ಸ್ವಾತಂತ್ರ್ಯದ ಬಳಿಕ ಈ ದೇಶವನ್ನು ಜಾತ್ಯಾತೀತ ತತ್ವದಡಿಯಲ್ಲಿ ಒಂದುಗೂಡಿಸಿ ನಡೆಸುಕೊಂಡು ಬರುವ ಮೂಲಕ ದೇಶದ ಸಾರ್ವಭೌಮತೆಯನ್ನು ಕಾಂಗ್ರೆಸ್ ಪಕ್ಷ ಎತ್ತಿ ಹಿಡಿದಿದೆ ಎಂದರು. ಯುವಕರು ಈ ದೇಶದ ಆಸ್ತಿಗಳಾಗಿದ್ದು ಕಾಂಗ್ರೆಸ್ ತತ್ವ ಸಿದ್ಧಾಂತ ನಂಬಿ ಪಕ್ಷ ಸಂಗಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಜಾಲತಾಣದ ಪೂರ್ಣೇಶ್ ಭಂಡಾರಿ ಮಾತನಾಡಿ ಯುವ ಕಾಂಗ್ರೆಸ್ ಸದಸ್ಯತ್ವ ಪಡೆಯುವವರು ಅನುಸರಿಸಬೇಕಾದ ನಿಬಂಧನೆಗಳ ಬಗ್ಗೆ ವಿವರಿಸಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಅಭಿಯಾನ ಅ.೨೨ರವರೆಗೆ ನಡೆಯಲಿದೆ.
ರಾಜೀವ್ ಗಾಂಧಿ, ಪಂಚಾಯತ್ ರಾಜ್ ಸಂಘಟನೆ ಪುತ್ತುರು ಕ್ಷೇತ್ರದ ಅಧ್ಯಕ್ಷ ಸಂತೋಷ್ ಭಂಢಾರಿ ಚಿನ್ಮಾತ್ತಾರು ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ಅಮರನಾಥ ಬಪ್ಪಳಿಗೆ, ಬಾಲಕೃಷ್ಣ ಗೌಡ ಕೆಮ್ಮಾರ, ಸಿಯಾನ್ ದರ್ಬೆ, ಗಂಗಾಧರ್ ಶೆಟ್ಟಿ ಎಲಿಕ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.