HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ದಶಕಗಳ ಬೇಡಿಕೆ ಈಡೇರಿಸಿದ ತಾಪಂ ಅಧ್ಯಕ್ಷರು | ಮಗಿರೆಗೆ ಬಂತು ಮೊದಲ ಸೋಲಾರ್ ದಾರಿದೀಪ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇದು ಒಳಮೊಗ್ರು ಗ್ರಾಮದ ಒಂದನೇ ವಾರ್ಡಿನ ರಸ್ತೆ. ಇದು ಅಲ್ಪಸಂಖ್ಯಾತರ ಮನೆಗಳೇ ಹೆಚ್ಚಾಗಿರುವ ರಸ್ತೆ. ಈ ರಸ್ತೆಗೆ ಕಾಂಕ್ರೀಟ್ ಮಾಡಿ ಎಂದು ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಮನವಿ ಮಾಡುತ್ತಲೇ ಬಂದಿದ್ದರು. ಆದರೆ ಕೊಟ್ಟ ಮನವಿಗೆ ಇದುವರೆಗೂ ಯಾವುದೇ ಸ್ಪಂದನೆ ಇರಲಿಲ್ಲ. ಕಳೆದ ಬಾರಿಯ ಜಿಪಂ ಚುನಾವಣೆಯ ವೇಳೆ ನಮ್ಮ ರಸ್ತೆಯ ಬೇಡಿಕೆಯನ್ನು ಜನಪ್ರತಿನಿಧಿಗಳ ಬಳಿ ಹೇಳಿಕೊಂಡಿದ್ದರು. ಭರವಸೆ ಎಲ್ಲರಿಂದಲೂ ಸಿಕ್ಕಿತ್ತು. ಈ ಹಿಂದೆ ಭರವಸೆ ಕೊಟ್ಟವರೂ ಮತ್ತೆ ಅದೇ ಭರವಸೆಯನ್ನು ನೀಡಿದ್ದರು. ಜಿಪಂ ಅಧ್ಯಕ್ಷೆಯಾಗಿರುವ ಮೀನಾಕ್ಷಿ ಶಾಂತಿಗೋಡು ರವರು ಗೆದ್ದರೆ ಖಂಡಿತವಾಗಿಯೂ ಕಾಂಕ್ರೀಟ್ ಮಾಡಿಕೊಡುವ ಎಂದು ಹೇಳಿದ್ದರು. ಅವರು ಗೆದ್ದರು ಈ ಪರಿಸರದ ನಿವಾಸಿಗಳ ಬೇಡಿಕೆಯನ್ನು ಈಡೇರಿಸಿದ್ದಾರೆ. ರಸ್ತೆ ಕಾಂಕ್ರಿಟೀಕರಣಕ್ಕೆ 3.25 ಲಕ್ಷ ಅನುದಾನವನ್ನು ನೀಡಿದ್ದರು.

ರಸ್ತೆ ಕಾಂಕ್ರೀಟ್ ಆದ ಬಳಿಕ ಇದೇ ರಸ್ತೆಗೆ ಸೋಲಾರ್ ದಾರದೀಪವನ್ನು ಹಾಕಲಾಗಿದೆ. ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ರವರು ರಸ್ತೆ ಕಾಮಗಾರಿಯಾದ ಮಾಹಿತಿಯನ್ನು ತಿಳಿದು ಇಲ್ಲಿನ ದಶಕಗಳ ಬೇಡಿಕೆಯಾದ ದಾರಿದೀಪವನ್ನು ನೀಡಿದ್ದಾರೆ. ಸೋಲಾರ್ ದೀಪ ಕೊಡಿ ಎಂದು ಇಲ್ಲಿನ ನಿವಾಸಿಗಳು ತಾಪಂ ಅಧ್ಯಕ್ಷರ ಬಳಿ ಯವುದೇ ಮನವಿಯನ್ನು ನೀಡಿಲ್ಲ ಆದರೆ ಇಲ್ಲಿನ ನಿವಾಸಿಗಳ ದರಿ ದೀಪದ ಬೇಡಿಕೆಯ ಬಗ್ಗೆ ಅವರಿಗೆ ಮಾಹಿತಿ ಇದ್ದ ಕಾರಣ ಸೋಲಾರ್ ದೀಪವನ್ನು ಅಳವಡಿಸಿದ್ದಾರೆ. ಇದು ಮಗಿರೆಯ ಮೊದಲ ಸೋಲಾರ್ ದಾರಿ ದೀಪವಾಗಿದ್ದು ಮಾತ್ರವಲ್ಲದೆ ದಶಕಗಳ ಬೇಡಿಕೆ ಈಡೇರಿದ ಮರೆಯಲಾರದ ಒಂದು ವ್ಯವಸ್ಥೆಯಾಗಿ ಪರಿಣಮಿಸಿದೆ. ಇದೇ ವಾರ್ಡಿನ ಇನ್ನೊಂದು ರಸ್ತೆ ಸಿಮೆಂಟ್ ಕಂಡಿಲ್ಲ, ದಾರಿದೀಪವೂ ಇಲ್ಲ. ಮುಂದಿನ ದಿನಗಳಲ್ಲಿ ಮಗಿರೆಯ ಎಲ್ಲಾ ಒಳರಸ್ತೆಗಳೂ ದಾರಿದೀಪಗಳಿಂದ ಕಂಗೊಳಿಸಲಿದೆ ಎಂಬುದು ಸದ್ಯದ ಭರವಸೆ.

ಒಳಮೊಗ್ರು ಗ್ರಾಮದ ಒಂದನೇ ವಾರ್ಡಿನ ಸಮಸ್ಯೆಯ ಬಗ್ಗೆ ನನ್ನ ಅರಿವಿಗೆ ಬಂದಿತ್ತು.ಈ ಕಾರಣಕ್ಕೆ ನಾನು ಸ್ವ ಇಚ್ಚೆಯಿಂದ ದಾರಿದೀಪದ ವ್ಯವಸ್ಥೆಯನ್ನು ಮಾಡಿದ್ದೇನೆ. ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ಮಾಡಬಾರದು, ಯಾವ ಕಾಲನಿ ಎಂಬುದನ್ನು ನೋಡಬರದು, ಜನರ ಬೇಡಿಕೆಯೇ ನಮ್ಮ ಲಕ್ಷ್ಯವಾಗಿರಬೇಕು. ಜನರ ಬೇಡಿಕೆ ಈಡೇರಿಸಿದ ಸಂತೃಪ್ತಿ ನನಗಿದೆ – ರಾಧಾಕೃಷ್ಣ ಬೋರ್ಕರ್ , ತಾಪಂ ಅಧ್ಯಕ್ಷರು, ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.