HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅಭಿಷೇಕ ಪ್ರಿಯನಾದ ಶ್ರೀ ಮಹಾಲಿಂಗೇಶ್ವರನಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಸೀಯಾಳಾಭಿಷೇಕ

Puttur_Advt_NewsUnder_1
Puttur_Advt_NewsUnder_1
  • ಭಾರತ ಆರೋಗ್ಯವಂತ, ಆರ್ಥಿಕ ಸ್ಥಿತಿವಂತವಾಗಬೇಕು – ಡಾ.ಎಮ್.ಕೆ.ಪ್ರಸಾದ್

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಅ.5ರಂದು ಸಂಕಷ್ಟಿ ಚತುರ್ಥಿಯ ದಿನ ಕೊರೋನಾ ಮುಕ್ತ ಮತ್ತು ಸಮರನೆರಳು ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಸೀಯಾಳಾಭಿಷೇಕವನ್ನು ನೆರವೇರಿಸಲಾಯಿತು.

ಭಾರತ ಆರೋಗ್ಯವಂತ, ಆರ್ಥಿಕ ಸ್ಥಿತಿವಂತವಾಗಬೇಕು :
ಜಗತ್ತನ್ನೇ ಕಾಡುತ್ತಿರುವ ಕೊರೋನಾ ಸೋಂಕಿನಿಂದ ಭಾರತ ಮುಕ್ತಿ ಪಡೆಯಬೇಕು ಅಲ್ಲದೇ, ದೇಶದ ಮೇಲೆ ಆವರಿಸಿರುವ ಸಮರದ ಕರಿ ನೆರಳು ದೂರವಾಗಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಆರೋಗ್ಯವಂತ-ಆರ್ಥಿಕ ಸ್ಥಿತಿವಂತ-ವಿಶ್ವದ ಸೂಪರ್ ಪವರ್ ರಾಷ್ಟ್ರವಾಗಿ ಹೊರ ಹೊಮ್ಮಬೇಕು ಎಂದು ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಎಂ.ಕೆ. ಪ್ರಸಾದ್ ನೇತೃತ್ವದಲ್ಲಿ ಸಂಕಲ್ಪ ಪ್ರಾರ್ಥನೆ ನಡೆಸಲಾಯಿತು.

ಬೆಳಿಗ್ಗೆ ಗಂಟೆ 7.30 ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಸಂಕಲ್ಪ ಪ್ರಾರ್ಥನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಸಂದರ್ಭ ದೇವಳದಿಂದ ಪ್ರಸಾದ ವಿತರಣೆ ನಡೆಯಿತು. ಸೀಯಾಳಾಭಿಷೇಕದ ತೀರ್ಥವನ್ನು ಭಕ್ತರಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭ ಸಮಿತಿಯ ಅಧ್ಯಕ್ಷ ಶಶಾಂಕ್ ಜೆ. ಕೊಟೇಚಾ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕೋಶಾಧಿಕಾರಿ ಶ್ರೀನಿವಾಸ್, ನೀಲಂತ ಕುಮಾರ್, ಉದಯ ಕುಮಾರ್ ಎಚ್., ಮಲ್ಲೇಶ್, ಬಿಜೆಪಿ ನಗರಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಯುವ ಮೋರ್ಚಾದ ಅಧ್ಯಕ್ಷ ನವೀನ್ ಪಡ್ನೂರು, ಚಂದ್ರಶೇಖರ್, ನಾರಾಯಣ, ಉದಯ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.