ವಿದ್ಯುತ್ ಖಾಸಗೀಕರಣ ಖಂಡಿಸಿ ಮೆಸ್ಕಾಂ ನೌಕರರಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಎಲ್ಲಾ ವಿದ್ಯುತ್ ವಿತರಣಾ ಕಂಪೆನಿಗಳ ವಿದ್ಯುತ್ ಖಾಸಗೀಕರಣ ಮತ್ತು 2020 ರ ವಿದ್ಯುತ್ ಕಾಯ್ದೆಯನ್ನು ಖಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘ ನೀಡಿದ ಕರೆಗೆ ಬೆಂಬಲವಾಗಿ ಪುತ್ತೂರು ವಿಭಾಗೀಯ ಕಚೇರಿ ಮುಂದೆ ನೌಕರರ ಸಂಘ (659) ವತಿಯಿಂದ ಖಂಡನಾ ಸಭೆಯನ್ನು ನಡೆಸಲಾಯಿತು. ಕೆಪಿಟಿಸಿಎಲ್ ನೌಕರರ ಸಂಘ (659) ಕೇಂದ್ರ ಸಮಿತಿ ಸದಸ್ಯ ಸುಂದರ್ ಕೆ. ಖಂಡನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸಮಿತಿಯ ಕರೆಯಂತೆ ಎಲ್ಲಾ ನೌಕರರು ಅ. 5ರಂದು ಕಪ್ಪುಪಟ್ಟಿ ಧರಿಸಿ ಸಾಂಕೇತಿಕವಾಗಿ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿದರು.

ಎಲ್ಲಾ ನೌಕರರು ಒಗ್ಗಟ್ಟಿನಿಂದ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲಿ 65 ಸಾವಿರ ನೌಕರರು ಸೇವೆ ಸಲ್ಲಿಸುತ್ತಿದ್ದು, ಅವರನ್ನು ಅವಲಂಬಿಸಿಕೊಂಡ 3-4 ಲಕ್ಷ ಕುಟುಂಬಿಕರು ಅವಲಂಬಿತರಾಗಿದ್ದಾರೆ. ಈ ಕಾರಣದಿಂದ ವಿದ್ಯುತ್ ಖಾಸಗೀಕರಣಕ್ಕೆ ನಮ್ಮ ವಿರೋಧವಿದೆ. – ಸುಂದರ ಕೆ. ಕೇಂದ್ರ ಸಮಿತಿ ಸದಸ್ಯ, ಕೆಪಿಟಿಸಿಎಲ್ ನೌಕರರ ಸಂಘ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.