HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬ್ಲ್ಯಾಕ್ ಡೈಮಂಡ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗಿಫ್ಟ್, ಫಾನ್ಸಿ ಸಾಮಾಗ್ರಿಗಳನ್ನೊಳಗೊಂಡ ಬ್ಲ್ಯಾಕ್ ಡೈಮಂಡ್ ಸಂಸ್ಥೆಯು ಅ.5ರಂದು ಇಲ್ಲಿನ ಮುಖ್ಯರಸ್ತೆಯಲ್ಲಿರುವ ಚರ್ಚ್ ಬಿಲ್ಡಿಂಗ್‌ನಲ್ಲಿ ಉದ್ಘಾಟನೆಗೊಂಡಿತು.ನೂತನ ಸಂಸ್ಥೆಯನ್ನು ಜುಮ್ಮಾ ಮಸೀದಿಯ ಖತೀಬ್ ಸೈಯದ್ ಅಹ್ಮದ್ ಪೂಕೋಯಾ ತಂಙಳ್ ದುವಾ ಆಶೀರ್ವಚನಗೈದರು.

 

ಮೈದ ದೇವುಸ್ ಚರ್ಚು ದರ್ಮ ಗುರುಗಳಾದ ರೇ ಫಾ ಲಾರೆನ್ಸ್ ಮಸ್ಕರೆನ್ಸ್ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಬೆಳೆಯುತ್ತಿರುವ ಪುತ್ತೂರಿನಲ್ಲಿ ಒಂದು‌ ಒಳ್ಳೆಯ ಉದ್ಧೇಶ ಇಟ್ಟುಕೊಂಡು ಹೊಸ ವ್ಯವಹರವನ್ನು ಆರಂಭಿಸಿದಿರಿ ಇಲ್ಲಿಗೆ ಬರುವ ಗ್ರಾಹಕರಿಗೆ ಮತ್ತು ವ್ಯವಹಾರ ನಡೆಸುವ ನಿಮಗೊ ದೇವರ ಆರ್ಶೀವಾದ ಇರಲಿ‌ ಎಂದು ಹೇಳಿ ಶುಭ ಹಾರೈಸಿದರು.

ಅನ್ಸಾರ್ ವುದ್ದೀನ್ ಜಮಾತ್ ಕಮಿಟಿಯ ಅಧ್ಯಕ್ಷ ಎಲ್ ಟಿ ರಜಾಕ್ ಹಾಜಿ ಮಾತನಾಡಿ ವ್ಯವಾಹರಕ್ಕೆ ಬರುವ ಗ್ರಾಹಕರ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡು ಗ್ರಾಹಕರ ಪ್ರೀತಿ,ವಿಶ್ವಾಸಗಳಿಸುವಂತೆ ಆಗಲಿ ಎಂದು ಹೇಳಿ ಶುಭಾ ಹಾರೈಸಿದರು. ಪುರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಮಾತನಾಡಿ ಪುತ್ತೂರು ತಾಲೂಕು ಸದ್ಯದಲ್ಲಿ ಜಿಲ್ಲಾ ಕೇಂದ್ರ ವಾಗಲಿದೆ ವ್ಯವಹಾರ ದಲ್ಲಿ ಲಾಭಕ್ಕಿಂತ ಮುಖ್ಯವಾಗಿ ಉತ್ತಮ ಸೇವೆ ನೀಡಿ ಗ್ರಾಹಕರಲ್ಲಿ ಪ್ರೀತಿ ಗಳಿಸಲಿ ಎಂದು ಹೇಳಿ‌ ಶುಭ ಹಾರೈಸಿದರು.

ಮೈದ ದೇವುಸ್ ಚರ್ಚ್ ನ ಉಪಾಧ್ಯಕ್ಷ ಮೌರಿಸ್ ಮಸ್ಕರನೆಸ್,ಸರಕಾರಿ ಆಸ್ಪತ್ರೆಯ ಅರೋಗ್ಯ ರಕ್ಷ ಸಮಿತಿಯ ಸದಸ್ಯ ರಪೀಕ್ ದರ್ಬೆ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಹಂಝಾ ಮದನಿ ಮಿತ್ತೂರು, ಹನೀಫ್ ಸಖಾಫಿ ಕಬಕ, ಬ್ರಿಯನ್ ಬಟನ್ ಮಾಲಕ ಪ್ರವೀಣ್ ಮಾರ್ಟಿಸ್, ಟೆಕ್ಸ್ಟೈಲ್ ಮಾಲಕ ಸಮೀರ್, ಸ್ಟೈಲ್ ಪಾರ್ಕ್ ಮಾಲಕ ಶರೀಫ್, ಪ್ರಕಾಶ್ ಫುಟ್ ವೇರ್ ಮಾಲಕ ಶಮೀರ್ ನೈಸ್ ಪ್ಯಾನ್ಸಿ ಮಾಲಕ ಅಬ್ಬಾಸ್ ಸಾಮ್ರಾಟ್, ಅಬ್ಬು ಜಿ ಜ್ಯುವೆಲರ್ಸ್ ಮಾಲಕ ಅಬೂಬಕ್ಕರ್, ಇಸಾಕ್ ಮಿತ್ತೂರ್ ಮೊದಲಾದವರು ಬಂದು ನೂತನ ಸಂಸ್ಥೆಗೆ ಶುಭಹಾರೈಸಿದರು.

ಪಾಲುದಾರರಾದ ಪಿ ಎ ಇಲ್ಯಾಸ್ ಮಾತನಾಡಿ ಸಂಸ್ಥೆಯಲ್ಲಿ ಗಿಫ್ಟ್ ಐಟಂ, ಫ್ಯಾನ್ಸಿ ಐಟಂ ಎಲ್ಲಾ ತರಹದ ಬ್ಯಾಗ್ಸ್, ಪರ್ಫ್ಯೂಮ್, ೧ ಗ್ರಾಂ ಗೋಲ್ಡ್ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ದೊರೆಯಲಿದೆ ಎಂದು ಎಲ್ಲಾರ ಸಹಕಾರ ಕೋರಿದರು.

ಇನ್ನೋರ್ವ ಪಾಲುದಾರ ಹನೀಫ್ ಸಖಾಪಿ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.