HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ವಿಟ್ಲ: ಗಾಂಜಾ ಸಹಿತ ವಿದ್ಯಾಪುರ ನಿವಾಸಿ ಮಹಮ್ಮದ್ ಆಸೀಫ್ ಬಂಧನ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಬಂಧಿಸಿ ಆತನ ಬಳಿ ಇದ್ದ, ಸುಮಾರು 450 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದ ಘಟನೆ ಅ.5ರಂದು ವಿಟ್ಲ ಸಮೀಪದ ಬದನಾಜೆ ಬಸ್ಸು ನಿಲ್ದಾಣದ ಬಳಿ ನಡೆದಿದೆ. ಕಬಕ ಗ್ರಾಮದ ವಿದ್ಯಾಪುರ ದಿ. ಅಬ್ದುಲ್ ಖಾದರ್ ರವರ ಪುತ್ರ ಮಹಮ್ಮದ್ ಆಸೀಫ್ ಯಾನೆ ಆಚಿ (30 ವ.) ಬಂಧಿತ ಆರೋಪಿ.

ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರು ಸಿಬ್ಬಂದಿಗಳಾದ ಪ್ರಸನ್ನ ಕುಮಾರ್, ವಿನಾಯಕ, ಪ್ರತಾಪ್ ರವರೊಂದಿಗೆ ಗಸ್ತಿನಲ್ಲಿ ನಿರತರಾಗಿದ್ದ ವೇಳೆ ಬಂದ ಖಚಿತ ಮಾಹಿತಿಯಂತೆ ಆ ದಾರಿಯಾಗಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಆಚಿ ಯಾನೆ ಆಸೀಫ್ ನನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಕಂಬಳಬೆಟ್ಟು ನಿವಾಸಿ ಹೌಲಾ ಹ್ಯಾರೀಸ್ ಮನೆಯ ಬಳಿ ಗಾಂಜಾ ಇಟ್ಟಿರುವ ಬಗ್ಗೆ ಆತ ನೀಡಿದ ಮಾಹಿತಿಯಂತೆ ಕಂಬಳಬೆಟ್ಟುವಿನಲ್ಲಿರುವ ಹೌಲಾ ಹ್ಯಾರೀಸ್ ನ ಮನೆಯಲ್ಲಿ ತಪಾಸಣೆ ನಡೆಸಿದ ಸಂದರ್ಭ ಸುಮಾರು 450 ಗ್ರಾಂ ಗಾಂಜಾ ಪತ್ತೆಯಾಗಿದೆ. ಮೋಟಾರ್ ಸೈಕಲ್ ಸಹಿತ ಸುಮಾರು 59ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಂಬಳಬೆಟ್ಟು ನಿವಾಸಿ ಹ್ಯಾರೀಸ್ ಯಾನೆ ಹೌಲಾ ಹ್ಯಾರೀಸ್ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೂ ಬಲೆ ಬೀಸಲಾಗಿದೆ ಎಂದು ತನಿಖಾ ತಂಡ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.