HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಶಾಸಕರಿಗೆ ಅಭಿನಂದನೆ ಸಲ್ಲಿಸಿ ಅಳವಡಿಸಿದ್ದ ಕಟೌಟ್‌ಗೆ ಹಾನಿ ಪೊಲೀಸರಿಗೆ ದೂರು-ತಪ್ಪೊಪ್ಪಿಕೊಂಡ ಆರೋಪಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಸ್ತೆ ಕಾಂಕ್ರಿಟೀಕರಣ, ಚರಂಡಿ ಕಾಮಗಾರಿ ಮತ್ತು ದಾರಿ ದೀಪಗಳ ಅಳವಡಿಕೆಗೆ ಸಂಬಂಧಿಸಿ ಅನುದಾನ ಒದಗಿಸಿದ ಶಾಸಕರು, ಜಿ.ಪಂ. ಮತ್ತು ತಾ.ಪಂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಅಳವಡಿಸಿದ್ದ ಕಟೌಟ್‌ಗೆ ಹಾನಿ ಮಾಡಿದ ಕುರಿತು ಸಾರ್ವಜನಿಕರ ದೂರಿನ ಮೇರೆಗೆ ಪೊಲೀಸರು ಆಪಾದಿತ ವ್ಯಕ್ತಿಯನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ತಪ್ಪೊಪ್ಪಿಕೊಂಡು ಅದೇ ಸ್ಥಳದಲ್ಲಿ ಕಟೌಟ್ ಅಳವಡಿಸಿಕೊಡುವುದಾಗಿ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.

ಸೇಡಿಯಾಪು ದಾರಂದಕುಕ್ಕುವಿನ ಮಧ್ಯೆ ಅನಿಲಕೋಡಿ ಪಾಲ್ತಿಜಾಲು ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಸಂಜೀವ ಮಠಂದೂರು, ಜಿ.ಪಂ ಸದಸ್ಯೆ ಶಯನಾ ಜಯಾನಂದ ಮತ್ತು ತಾ.ಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಅವರ ೧೪ ಲಕ್ಷ ಮತ್ತು ಚರಂಡಿ ಮತ್ತು ದಾರಿದೀಪ ಅಳವಡಿಸಲು ಗ್ರಾ.ಪಂ.ನಿಂದ ರೂ.೩೦ ಸಾವಿರ ಹಾಗೂ ರೂ.೭೦ ಸಾವಿರ ಅನುದಾನದಿಂದ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ರಸ್ತೆ ಕಾಂಕ್ರಿಟೀಕರಣ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಸೇರಿ ಶಾಸಕ ಸಂಜೀವ ಮಠಂದೂರಿಗೆ ಅಭಿನಂದನೆ ಸಲ್ಲಿಸಿ ಅನಿಲಕೋಡಿ ಬಳಿ ಕಟೌಟ್ ಅಳವಡಿಸಿದ್ದರು.ಅ.೪ರಂದು ಸ್ಥಳೀಯ ನಿವಾಸಿ ಶಂಕರ್ ಎಂಬವರು ಬಂದು ಕಟೌಟ್‌ಗೆ ಹಾನಿ ಮಾಡಿದ್ದಾರೆ.ಅವರು ಕಟೌಟ್‌ಗೆ ಹಾನಿ ಮಾಡುತ್ತಿರುವುದನ್ನು ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡಿದ್ದು, ಬಳಿಕ ಇದೇ ವಿಚಾರವಾಗಿ ಬನ್ನೂರು ಗ್ರಾ.ಪಂ ಸದಸ್ಯ ರತ್ನಾಕರ ಪ್ರಭು, ತಾ.ಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಈಶ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ ಎಮ್ ಅವರು ಕಟೌಟ್‌ಗೆ ಹಾನಿ ಮಾಡಿದ್ದ ಶಂಕರ್ ಅವರನ್ನು ತರಾಟೆಗೆತ್ತಿಕೊಂಡು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಶಂಕರ್ ಅವರನ್ನು ಠಾಣೆಗೆ ಕರೆದೊಯ್ದಿದ್ದರು.ಶಂಕರ್ ಅವರು ತಾನು ಮಾಡಿದ ಕೃತ್ಯಕ್ಕೆ ಠಾಣೆಯಲ್ಲಿ ತಪ್ಪೊಪ್ಪಿಕೊಂಡದ್ದಲ್ಲದೆ, ತಾನೆ ಪುನಃ ಕಟೌಟ್ ಅಳವಡಿಸಿಕೊಡುತ್ತೇನೆ ಎಂದು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.ಸದ್ರಿ ಕಟೌಟನ್ನು ಸಂಬಂಧಿಸಿದ ಪಂಚಾಯತ್‌ನಿಂದ ಅನುಮತಿ ಪಡೆಯದೆ ಅಳವಡಿಸಲಾಗಿತ್ತು ಎಂದು ತಿಳಿದು ಬಂದಿದೆ.

FACEBOOK PAGE LINK

https://www.facebook.com/watch/?v=1034405233671935

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.