ಮುತ್ತಪ್ಪ ರೈ ಮಗನಿಗೆ ಡ್ರಗ್ ಮಾಫಿಯಾ ಲಿಂಕ್ ?! ದಿ. ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಸಿಸಿಬಿ ವಶಕ್ಕೆ

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿರುವ ಸಂಶಯದ ಮೇರೆಗೆ ಜಯಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ದಿ. ಮುತ್ತಪ್ಪ ರೈಯವರ ಎರಡನೇ ಪುತ್ರ ರಿಕ್ಕಿ ರೈಯವರನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸುತ್ತಿದ್ದಾರೆ.
ಈಗಾಗಲೇ ಬಂಧನಕ್ಕೊಳಗಾಗಿರುವ ಡ್ರಗ್ಸ್ ಪೆಡ್ಲರ್ ಗಳು ನೀಡಿದ ಮಾಹಿತಿ ಆಧಾರದಲ್ಲಿ ರಿಕ್ಕಿ ರೈ ವಾಸವಿರುವ ಬೆಂಗಳೂರಿನ ಸದಾಶಿವ ನಗರದ ಫ್ಲ್ಯಾಟ್ ಗೆ ದಾಳಿ ನಡೆಸಲಾಗಿದ್ದು ಮಾಹಿತಿ ಕಲೆ ಹಾಕಲಾಗುತ್ತಿದೆ. ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ಪೊಲೀಸ್ ತಂಡ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿ ರಿಕ್ಕಿ ರೈಯವರನ್ನು ವಶಕ್ಕೆ ಪಡೆದು ಅವರ ಮತ್ತು ಅವರೊಂದಿಗೆ ಇರುವವರ ಮೊಬೈಲ್ ಫೋನ್ ಗಳನ್ನು ಸೀಝ್ ಮಾಡಿದ್ದು ಕಾರುಗಳನ್ನು ಪರಿಶೀಲನೆಗೆ ಒಳಪಡಿಸಿದೆ. ಬಿಡದಿಯಲ್ಲಿರುವ ಮುತ್ತಪ್ಪ ರೈ ಮನೆಯತ್ತವೂ ಚಿತ್ತ ಹರಿಸಿರುವ ಪೊಲೀಸ್ ಅಧಿಕಾರಿಗಳು ರಿಕ್ಕಿ ರೈ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಡ್ರಗ್ಸ್ ಪೆಡ್ಲರ್ ಗಳಿಗೆ ಆಶ್ರಯ ನೀಡಿರುವ ಆರೋಪ ರಿಕ್ಕಿ ರೈಯವರ ಮೇಲಿದೆ ಎನ್ನಲಾಗುತ್ತಿದ್ದು ಸ್ವತಃ ಅವರು ಡ್ರಗ್ಸ್ ಪೆಡ್ಲರ್ ಆಗಿದ್ದಾರೆಯೇ, ಡ್ರಗ್ಸ್ ವ್ಯಸನಿಯಾಗಿದ್ದಾರೆಯೇ, ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಸಿಸಿಬಿ ತನಿಖೆ ನಡೆಯಲಿದೆ. ಈಗಾಗಲೇ ಡ್ರಗ್ಸ್ ಕೇಸಲ್ಲಿ ಬಂಧಿತರಾಗಿರುವ ಚಿತ್ರ ನಟಿಗಳಾದ ರಾಗಿಣಿ ದ್ವಿವೇದಿ, ಸಂಜನಾ ಗಿಲ್ರಾನಿಯವರೊಂದಿಗೆ ಆ ಕೇಸ್ ನಲ್ಲಿ ಆರೋಪಿಯಾಗಿದ್ದು ತಲೆ ಮರೆಸಿಕೊಂಡಿರುವ ಕರಾವಳಿ ಮೂಲದವರೇ ಆಗಿರುವ ರಾಜ್ಯದ ಮಾಜಿ ಸಚಿವ, ಕಲರ್ ಫುಲ್ ರಾಜಕಾರಣಿಯಾಗಿದ್ದ ದಿ. ಜೀವರಾಜ್ ಆಳ್ವರವರ ಪುತ್ರ ಆದಿತ್ಯ ಆಳ್ವ ಜತೆ ರಿಕ್ಕಿ ರೈ ನಿಕಟ ಸಂಪರ್ಕ ಹೊಂದಿದ್ದಾರೆಯೇ ಎಂಬುದರ ಕುರಿತು ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರು ಕೆಯ್ಯೂರು ಮೂಲದವರಾದ ಎನ್. ಮುತ್ತಪ್ಪ ರೈಯವರು ಕೆಲವು ತಿಂಗಳ ಹಿಂದೆ ನಿಧನರಾದ ನಂತರ ಅವರ ಪುತ್ರ ರಿಕ್ಕಿ ರೈಯವರು ಉದ್ಯಮದ ಮೇಲುಸ್ತುವಾರಿ ವಹಿಸುತ್ತಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಸಿನಿಮಾ ರಂಗದವರೂ ಇರುವುದು ಖಚಿತವಾದ ಬಳಿಕ ಈ ದಂಧೆಯಲ್ಲಿ ರಾಜಕಾರಣಿಗಳು ಮತ್ತು ಪ್ರತಿಷ್ಠಿತ ಉದ್ಯಮಿಗಳ ಮಕ್ಕಳು ಭಾಗಿಯಾಗಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ವಿಶೇಷ ತಂಡ ರಚಿಸಿ ತನಿಖೆ ಮುಂದುವರಿಸುತ್ತಿದೆ. ತನಿಖೆ ವೇಳೆ ರಿಕ್ಕಿ ರೈಯವರು ಡ್ರಗ್ಸ್ ದಂಧೆಯಲ್ಲಿರುವುದು ಮೇಲ್ನೋಟಕ್ಕೆ ಸಾಬೀತಾದರೆ ಅವರನ್ನು ಬಂಧಿಸಲು ಸಿಸಿಬಿ ಸಿದ್ಧತೆ ನಡೆಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.