HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು ಎಪಿಎಂಸಿ ಸಾರಥಿಗಳ ಪುನರ್ ಆಯ್ಕೆ | ಮೂರನೇ ಅವಧಿಗೆ ಅಧ್ಯಕ್ಷರಾಗಿ ದಿನೇಶ್ ಮೆದು, ಉಪಾಧ್ಯಕ್ಷರಾಗಿ ಎನ್.ಎಸ್ ಮಂಜುನಾಥ ಅವರು ಪುನರಾಯ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪುತ್ತೂರು ಇದರ ಮೂರನೇ ಅವಧಿಗೆ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ದಿನೇಶ್ ಮೆದು ಮತ್ತು ಹಾಲಿ ಉಪಾಧ್ಯಕ್ಷ ಎನ್.ಎಸ್. ಮಂಜುನಾಥ ಅವರು ಅವಿರೋಧವಾಗಿ ಪುನರಾಯ್ಕೆ ಗೊಂಡಿದ್ದಾರೆ.

ಆಡಳಿತ ಮಂಡಳಿಯ 20 ತಿಂಗಳ ಅವಧಿಯ ಅಧಿಕಾರ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅ.6ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಎಪಿಎಂಸಿ ಪ್ರಥಮ 20 ತಿಂಗಳ ಆಡಳಿತ ಅವಧಿಯಲ್ಲಿ ಅಧ್ಯಕ್ಷರಾಗಿ ಬೂಡಿಯಾರ್ ರಾಧಾಕೃಷ್ಣ ರೈ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಬಾಣಜಾಲು ಅವಿರೋಧವಾಗಿ ಆಯ್ಕೆಗೊಂಡಿದ್ದರು. ಅವರ 20 ತಿಂಗಳ ಅವಧಿಯ ಬಳಿಕ 2ನೇ ಅವಧಿಯಲ್ಲಿ ಅಧ್ಯಕ್ಷರಾಗಿ ದಿನೇಶ್ ಮೆದು ಮತ್ತು ಉಪಾಧ್ಯಕ್ಷರಾಗಿ ಎನ್.ಎಸ್ ಮಂಜುನಾಥ ಅವರು ಆಯ್ಕೆಗೊಂಡಿದ್ದರು. ಇದೀಗ ಮೂರನೇ ಅವಧಿಯಲ್ಲಿ ಅಧ್ಯಕ್ಷರಾಗಿ ದಿನೇಶ್ ಮೆದು ಮತ್ತು ಉಪಾಧ್ಯಕ್ಷರಾಗಿ ಎನ್.ಎಸ್ ಮಂಜುನಾಥ್ ಅವರು ಪುನರ್ ಆಯ್ಕೆಗೊಂಡಿದ್ದಾರೆ. ಅ.6ರಂದು ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ್ ರಮೇಶ್ ಬಾಬು ಅವರ ನೇತೃತ್ವದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸವಣೂರು ಕ್ಷೇತ್ರದ ಸದಸ್ಯ ದಿನೇಶ್ ಮೆದು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಎಸ್ ಮಂಜುನಾಥ ಅವರು ಅವರು ನಾಮಪತ್ರ ಸಲ್ಲಿಸಿದ್ದರು. ಬಳಿಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಲ್ಲಿಕೆಯಾದ ನಾಮಪತ್ರಗಳು ಕ್ರಮಬದ್ದವಾಗಿದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

11 ಕೃಷಿಕ ಕ್ಷೇತ್ರ, 1 ಸಹಕಾರಿ ಹಾಗೂ 1 ವರ್ತಕ ಕ್ಷೇತ್ರಗಳನ್ನು ಹೊಂದಿರುವ ಪುತ್ತೂರು ಎಪಿಎಂಸಿಯ ಒಟ್ಟು 13 ಸ್ಥಾನಗಳ ನೂತನ ನಿರ್ದೇಶಕರ ಆಯ್ಕೆಗೆ 2017 ರ ಏ.25ರಂದು ಚುನಾವಣೆ ನಡೆದಿತ್ತು. 13 ಸ್ಥಾನಗಳಲ್ಲಿ 10 ಕೃಷಿಕ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಉಪ್ಪಿನಂಗಡಿ ಕ್ಷೇತ್ರದಿಂದ ಕುಶಾಲಪ್ಪ ಗೌಡ ಅನಿಲ, ನೆಲ್ಯಾಡಿ ಕ್ಷೇತ್ರದಿಂದ ಬಾಲಕೃಷ್ಣ ಬಾಣಜಾಲು, ಮರ್ದಾಳ ಕ್ಷೇತ್ರದಿಂದ ಮೇದಪ್ಪ ಗೌಡ, ಕಡಬ ಕ್ಷೇತ್ರದಿಂದ ಪುಲಸ್ತ್ಯ ರೈ, ಆಲಂಕಾರು ಕ್ಷೇತ್ರದಿಂದ ಕೊರಗು, ಸವಣೂರು ಕ್ಷೇತ್ರದಿಂದ ದಿನೇಶ್ ಮೆದು, ಪುತ್ತೂರು ಕ್ಷೇತ್ರದಿಂದ ರಾಧಾಕೃಷ್ಣ ರೈ ಬೂಡಿಯಾರ್, ಕುಂಬ್ರ ಕ್ಷೇತ್ರದಿಂದ ಮಂಜುನಾಥ ಎನ್.ಎಸ್, ನರಿಮೊಗರು ಕ್ಷೇತ್ರದಿಂದ ತ್ರಿವೇಣಿ ಕರುಣಾಕರ ಪೆರ್‍ವೋಡಿ, ನೆಟ್ಟಣಿಗೆ ಮುಡ್ನೂರು ಕ್ಷೇತ್ರದಿಂದ ತೀರ್ಥಾನಂದ ದುಗ್ಗಳ, ಗೆಲುವು ಸಾಧಿಸಿರುತ್ತಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಕೋಡಿಂಬಾಡಿ ಕೃಷಿಕ ಕ್ಷೇತ್ರದಿಂದ ಕಾರ್ತಿಕ್ ರೈ ಬೆಳ್ಳಿಪ್ಪಾಡಿ ಮತ್ತು ವರ್ತಕ ಕ್ಷೇತ್ರದಿಂದ ಅಬ್ದುಲ್ ಶಕೂರ್‌ರವರು ಗೆಲುವು ಸಾಧಿಸಿರುತ್ತಾರೆ. ಸಹಕಾರಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಕೃಷ್ಣ ಕುಮಾರ್ ರೈಯವರು ಅವಿರೋಧವಾಗಿ ಆಯ್ಕೆಗೊಂಡಿದ್ದರು.

ತಹಶೀಲ್ದಾರ್ ರಮೇಶ್ ಬಾಬು ಆಯ್ಕೆ ಪ್ರಕ್ರೀಯೆ ನಡೆಸಿಕೊಟ್ಟರು. ತಾಲೂಕು ಕಛೇರಿ ಚುನಾವಣಾ ಶಾಖೆಯ ನಾಗೇಶ್, ಉಪತಹಸೀಲ್ದಾರ್ ಸುಲೋಚನಾ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ವಕ್ವಾಡಿ ಹಾಗೂ ಸಿಬಂದಿಗಳು ಸಹಕರಿಸಿದರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ದಿನೇಶ್ ಮೆದುರವರನ್ನು ಸದಸ್ಯ ಬಾಲಕ್ರಷ್ಣ ಬಾಣಜಾಲು ಅವರು ಸೂಚಕರಾಗಿ, ಸದಸ್ಯ ತೀರ್ಥಾನಂದ ದುಗ್ಗಳ ಅನುಮೋದಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮಂಜುನಾಥ್ ಎನ್.ಎಸ್ ಅವರನ್ನು ಸದಸ್ಯೆ ಪುಲಸ್ತ್ಯಾ ರೈ ಸೂಚಕರಾಗಿ ಸದಸ್ಯ ಕುಶಾಲಪ್ಪ ಅವರು ಅನುಮೋದಿಸಿದ್ದರು. ಈ ಸಂದರ್ಭದಲ್ಲಿ ಕುಶಾಲಪ್ಪ ಗೌಡ ಅನಿಲ, ಬಾಲಕೃಷ್ಣ ಬಾಣಜಾಲು, ಮೇದಪ್ಪ ಗೌಡ, ಕಡಬ ಕ್ಷೇತ್ರದಿಂದ ಪುಲಸ್ತ್ಯ ರೈ, ಕೊರಗಪ್ಪ, ರಾಧಾಕೃಷ್ಣ ರೈ ಬೂಡಿಯಾರ್, ಮಂಜುನಾಥ ಎನ್.ಎಸ್, ತ್ರಿವೇಣಿ ಕರುಣಾಕರ ಪೆರ್‍ವೋಡಿ, ತೀರ್ಥಾನಂದ ದುಗ್ಗಳ, ಗೆಲುವು ಸಾಧಿಸಿರುತ್ತಾರೆ. ಕೃಷಿಕ ಕ್ಷೇತ್ರದಿಂದ ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಕೃಷ್ಣ ಕುಮಾರ್ ರೈ, ನಾಮನಿರ್ದೇಶಿತ ಸದಸ್ಯರಾದ ಮೋಹನಾಂಗಿ, ಬಾಲಕೃಷ್ಣ ಜೋಯಿಸ ಬಾಬು ಮತ್ತಿತರರು ಉಪಸ್ಥಿತರಿದ್ದರು.

ಅಭಿನಂದನೆ:
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಶಾಸಕ ಸಂಜೀವ ಮಠಂದೂರು ಅವರು ಅಭಿನಂದಿಸಿದರು. ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಕ್ರಷ್ಣ ಬೋರ್ಕರ್, ಕೆಡಿಪಿ ನಾಮ ನಿರ್ದೇಶಕ ಶಂಭು ಭಟ್, ಅಡಿಕೆ ವರ್ತಕರ ಸಂಘದ ಗೌರವಾಧ್ಯಕ್ಷ ಶಶಾಂಕ ಕೊಟೇಚಾ, ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು, ತಾ.ಪಂ ಸದಸ್ಯ ಮೀನಾಕ್ಷಿ ಮಂಜುನಾಥ, ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್, ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.