HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಮುತ್ತಪ್ಪ ರೈ ಪುತ್ರ? ರಿಕ್ಕಿ ರೈ ಮೇಲಿರುವ ಸಂಶಯಗಳೇನು – ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಹೇಳಿದ್ದೇನು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿರುವ ಸಂಶಯದ ಮೇರೆಗೆ ಮಾಜಿ ಭೂಗತ ಡಾನ್, ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದಿ. ಎನ್. ಮುತ್ತಪ್ಪ ರೈಯವರ ಎರಡನೇ ಪುತ್ರ ರಿಕ್ಕಿ ರೈಯವರನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸುತ್ತಿದ್ದಾರೆ.

ಈಗಾಗಲೇ ಬಂಧನಕ್ಕೊಳಗಾಗಿರುವ ಡ್ರಗ್ಸ್ ಪೆಡ್ಲರ್ ಗಳು ನೀಡಿದ ಮಾಹಿತಿ ಆಧಾರದಲ್ಲಿ ರಿಕ್ಕಿ ರೈ ವಾಸವಿರುವ ಬೆಂಗಳೂರಿನ ಸದಾಶಿವ ನಗರದ ಫ್ಲ್ಯಾಟ್ ಮತ್ತು ಬಿಡದಿಯಲ್ಲಿರುವ ಅವರ ನಿವಾಸಕ್ಕೆ ದಾಳಿ ನಡೆಸಲಾಗಿದ್ದು ಮಾಹಿತಿ ಕಲೆ ಹಾಕಲಾಗುತ್ತಿದೆ. ಸಿಸಿಬಿಯ ಎಸಿಪಿ ನೇತೃತ್ವದಲ್ಲಿ ಪೊಲೀಸ್ ತಂಡ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿ ರಿಕ್ಕಿ ರೈಯವರನ್ನು ವಶಕ್ಕೆ ಪಡೆದು ಅವರ ಮತ್ತು ಅವರೊಂದಿಗೆ ಇರುವವರ ಮೊಬೈಲ್ ಫೋನ್ ಗಳನ್ನು ಸೀಝ್ ಮಾಡಿದ್ದು ಮೂರು ಕಾರುಗಳನ್ನು ಪರಿಶೀಲನೆಗೆ ಒಳಪಡಿಸಿದೆ. ಸದಾಶಿವ ನಗರದ ಫ್ಲ್ಯಾಟ್ ನಲ್ಲಿ ರಿಕ್ಕಿ ರೈಯವರನ್ನು ಸುದೀರ್ಘ ವಿಚಾರಣೆ ನಡೆಸಿದ ಸಿಸಿಬಿ ತಂಡ ಬಳಿಕ ಬಿಡದಿಯಲ್ಲಿರುವ ಮನೆಗೆ ರಿಕ್ಕಿ ರೈಯವರನ್ನು ಕೊಂಡೊಯ್ದಿದೆ. ರಿಕ್ಕಿಯವರನ್ನು ತನಿಖೆಗೆ ಒಳಪಡಿಸಿದ ವೇಳೆ ಮಹತ್ವದ ವಸ್ತುವೊಂದು ಪತ್ತೆಯಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿದೆ.

ಡ್ರಗ್ಸ್ ಪೆಡ್ಲರ್ ಗಳಿಗೆ ಆಶ್ರಯ ನೀಡಿರುವ, ಡ್ರಗ್ಸ್ ದಂಧೆಗೆ ಫಂಡಿಂಗ್ ಮಾಡಿರುವ, ಡ್ರಗ್ಸ್ ಪೆಡ್ಲರ್ ವಿರೇಶ್ ಖನ್ನಾನನ್ನು ಪ್ರಕರಣದಲ್ಲಿ ರಕ್ಷಿಸಲು ಪ್ರಯತ್ನಿಸಿರುವ, ಈಗಾಗಲೇ ಡ್ರಗ್ಸ್ ದಂಧೆಯ ಆರೋಪಿಗಳೊಂದಿಗೆ ಶಾಮೀಲಾದ ಆರೋಪದಡಿ ಅಮಾನತುಗೊಂಡಿರುವ ಸಿಸಿಬಿ ಎಸಿಪಿ ಮುಧವಿಯವರ ಜತೆ ವ್ಯವಹಾರ ಕುದುರಿಸಿರುವ ವಿಚಾರಗಳಿಗೆ ಸಂಬಂಧಿಸಿ ರಿಕ್ಕಿ ರೈಯವರ ವಿಚಾರಣೆ ನಡೆಯಲಿದೆ. ಅಲ್ಲದೆ, ಸ್ವತಃ ರಿಕ್ಕಿಯವರು ಡ್ರಗ್ಸ್ ಪೆಡ್ಲರ್ ಆಗಿದ್ದಾರೆಯೇ, ಡ್ರಗ್ಸ್ ವ್ಯಸನಿಯಾಗಿದ್ದಾರೆಯೇ, ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಸಿಸಿಬಿಯಿಂದ ವಿಸ್ತೃತ ತನಿಖೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಖ್ಯಾತ ಚಿತ್ರ ನಟ ಸುಶಾಂತ್ ಸಿಂಗ್ ರವರ ಸಂಶಯಾಸ್ಪದ ಸಾವಿನ ಬಳಿಕ ಸಿನಿಮಾ ರಂಗದಲ್ಲಿರುವ ಡ್ರಗ್ಸ್ ಮಾಯಾ ಜಾಲ ಬೆಳಕಿಗೆ ಬಂದ ನಂತರ ಕನ್ನಡ ಚಿತ್ರರಂಗದಲ್ಲೂ ಇರುವ ಮಾದಕ ನಶೆ ಲೋಕದ ತನಿಖೆ ನಡೆದು ಚಿತ್ರ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಿಲ್ರಾನಿಯ ಬಂಧನ ಆಗಿದೆ. ಇವರಿಗೆ ಇನ್ನೂ ಜಾಮೀನು ದೊರೆಯದೆ ಜೈಲಿನಲ್ಲಿದ್ದಾರೆ. ಆ ಕೇಸ್ ನಲ್ಲಿ 6ನೇ ಆರೋಪಿಯಾಗಿದ್ದು ತಲೆ ಮರೆಸಿಕೊಂಡಿರುವ ಕರ್ನಾಟಕದ ಕರಾವಳಿ ಮೂಲದವರೇ ಆಗಿರುವ, ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿದ್ದ, ಕಲರ್ ಫುಲ್ ರಾಜಕಾರಣಿ ಎಂದೇ ಕರೆಸಿಕೊಳ್ಳುತ್ತಿದ್ದ ದಿ. ಜೀವರಾಜ್ ಆಳ್ವರವರ ಪುತ್ರ ಆದಿತ್ಯ ಆಳ್ವ ಜತೆ ರಿಕ್ಕಿ ರೈ ನಿಕಟ ಸಂಪರ್ಕ ಹೊಂದಿರುವ ಮತ್ತು ಆದಿತ್ಯ ಆಳ್ವ ಭೂಗತರಾಗಲು ರಿಕ್ಕಿ ರೈ ಸಹಕರಿಸಿರುವ ಕುರಿತು ತನಿಖೆ ನಡೆಯಲಿದೆ. ರಿಕ್ಕಿ ರೈಯವರು ಡ್ರಗ್ಸ್ ದಂಧೆಯಲ್ಲಿರುವ ಬಗ್ಗೆ ಅವರ ಆಪ್ತನೇ ಆಗಿದ್ದು ಕಸ್ಟಡಿಯಲ್ಲಿರುವ ಸಂಗೀತ್ ದಂತಕುಡಿ ಎಂಬಾತ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಸರ್ಚ್ ವಾರೆಂಟ್ ಪಡೆದು ಸಿಸಿಬಿ ಅಧಿಕಾರಿಗಳು ಫ್ಲ್ಯಾಟ್ ಮತ್ತು ಮನೆಗೆ ದಾಳಿ ನಡೆಸಿ ರಿಕ್ಕಿ ರೈಯವರನ್ನು ವಶಕ್ಕೆ ಪಡೆದಿದ್ದಾರೆ.

ಪುತ್ತೂರು ಕೆಯ್ಯೂರು ಮೂಲದವರಾದ ಎನ್. ಮುತ್ತಪ್ಪ ರೈಯವರು ಕೆಲವು ತಿಂಗಳ ಹಿಂದೆ ನಿಧನರಾದ ನಂತರ ಅವರ ಪುತ್ರ ರಿಕ್ಕಿ ರೈಯವರು ಉದ್ಯಮದ ಮೇಲುಸ್ತುವಾರಿ ವಹಿಸುತ್ತಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಸಿನಿಮಾ ರಂಗದವರೂ ಇರುವುದು ಖಚಿತವಾದ ಬಳಿಕ ಈ ದಂಧೆಯಲ್ಲಿ ರಾಜಕಾರಣಿಗಳು ಮತ್ತು ಪ್ರತಿಷ್ಠಿತ ಉದ್ಯಮಿಗಳ ಮಕ್ಕಳು ಭಾಗಿಯಾಗಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸ್ ಅಧಿಕಾರಿಗಳ ವಿಶೇಷ ತಂಡ ರಚಿಸಿ ತನಿಖೆ ಮುಂದುವರಿಸುತ್ತಿದೆ. ತನಿಖೆ ವೇಳೆ ರಿಕ್ಕಿ ರೈಯವರು ಡ್ರಗ್ಸ್ ದಂಧೆಯಲ್ಲಿರುವುದು ಮೇಲ್ನೋಟಕ್ಕೆ ಸಾಬೀತಾದರೆ ಅವರನ್ನು ಬಂಧಿಸಲು ಸಿಸಿಬಿ ಸಿದ್ಧತೆ ನಡೆಸಿದೆ. ಈಗಾಗಲೇ ಸಿಸಿಬಿ ತಂಡ ರಿಕ್ಕಿ ರೈಯವರ ಕಾಲ್ ಡಿಟೇಲ್ಸ್ ಸಹಿತ ಟೆಕ್ನಿಕಲ್ ಎವಿಡೆನ್ಸ್ ಸಿಧ್ಧ ಪಡಿಸಿದೆ.ರೈ ಜತೆ ಆಪ್ತ ನಂಟು ಹೊಂದಿರುವ ಖ್ಯಾತ ಬಹುಭಾಷಾ ನಟಿಯೋರ್ವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಸಂದೀಪ್‌ ಪಾಟೀಲ್

ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ…
ಈ ಹಿಂದೆ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಬೆಂಗಳೂರು ಸಿಸಿಬಿಯ ಜಂಟಿ ಆಯುಕ್ತರಾಗಿರುವ ಸಂದೀಪ್ ಪಾಟೀಲ್ ರವರ ಹೇಳಿಕೆ ಹೀಗಿದೆ: ಕಾಟನ್ ಪೇಟೆ ಎಫ್ಐಆರ್ ಸಂಬಂಧ ಸಿಸಿಬಿ ತನಿಖೆ ನಡೆಯುತ್ತಿದೆ. ಕೆಲ ವಸ್ತುಗಳು ಸಿಕ್ಕಿದೆ ಪರಿಶೀಲನೆ ನಡೆಸುತ್ತಿದ್ದೇವೆ. ಆರೋಪಿಗಳ ಹೇಳಿಕೆ ಮೇರೆಗೆ ರಿಕ್ಕಿ ರೈ ಮನೆ ಮೇಲೆ ರೇಡ್ ಮಾಡಲಾಗಿದೆ. ನಾಪತ್ತೆಯಾದ ಆರೋಪಿಗಳಿಗೆ ಆಶ್ರಯ ನೀಡಿದ್ದ. ಪ್ರಕರಣದಲ್ಲಿ ಭಾಗಿಯಾಗಿರಬಹುದು ಅನ್ನುವ ಅನುಮಾನದ ಮೇರೆಗೆ ರೇಡ್ ಮಾಡಲಾಗಿದೆ. ಸದಾಶಿವನಗರ ಮನೆ, ಬಿಡದಿ ಮನೆ ಮೇಲೆ ದಾಳಿ ಮಾಡಿದ್ದೇವೆ.ತಲೆಮೆರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ. ರಿಕ್ಕಿಯನ್ನ ಇನ್ನೂ ನಾವು ಕಸ್ಟಡಿಗೆ ಪಡೆದಿಲ್ಲ. ಆದಿತ್ಯ ಆಳ್ವಾ ಹಾಗೂ ವಿರೇನ್ ಖನ್ನಾಗೇ ಕ್ಲೋಸ್ ಆಗಿದ್ದ ರಿಕ್ಕಿ. ಇನ್ನೂ ದಾಳಿ ಮುಂದುವರೆದಿದೆ. ಪರಿಶೀಲನೆ ನಡೆಸುತ್ತಿದ್ದೇವೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.