HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅ.10-18: ಪರ್ಪುಂಜ ಸೌಗಂಧಿಕಾದಲ್ಲಿ ನಾಡಿಗ್ ಕಾರ್ಟೂನ್ಸ್,ನಾಡಿಗ್ ರವಿ ಕಾರ್ಟೂನ್ಸ್ ವ್ಯಂಗ್ಯ ಚಿತ್ರಗಳ ಪ್ರದರ್ಶನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಖ್ಯಾತ ವ್ಯಂಗ್ಯ ಚಿತ್ರಕಾರರಾದ ಎಸ್.ನಾಡಿಗ್ ಮತ್ತು ಇವರ ಮಗ ರವೀಂದ್ರ ನಾಡಿಗ್‌ರವರ ನಾಡಿಗ್ ಕಾರ್ಟೂನ್ಸ್ (ನಿತ್ಯ ನೂತನ ) ಮತ್ತು ನಾಡಿಗ್ ರವಿ ಕಾರ್ಟೂನ್ಸ್ (ನ್ಯೂ(ಸ್)ಸೆನ್ಸ್) ವ್ಯಂಗ್ಯಚಿತ್ರಗಳ ಪ್ರದರ್ಶನ ಅ.10ರಿಂದ 18ರವರೇಗೆ ಪರ್ಪುಂಜದಲ್ಲಿರುವ ಸೌಂಗಂಧಿಕಾದಲ್ಲಿ ನಡೆಯಲಿದೆ.

ಎಸ್‌ ಕೆ ನಾಡಿಗ
ರವೀಂದ್ರ ನಾಡಿಗ

ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6ರವರೇಗೆ ಪ್ರದರ್ಶನ ಏರ್ಪಡಿಸಲಾಗಿದೆ. ಎರಡು ಸಾವಿರದ ಎಂಟರಲ್ಲಿ ನಾಡಿಗರ ನಿಧನದ ನಂತರ ಉದಯವಾಣಿಯಲ್ಲಿ ನಾಡಿಗರ ‘ಏನಂತೀರಿ ?’ ಕಾಲಂ ಅನ್ನು ಮುಂದುವರಿಸಿ ಸುಮಾರು ಹತ್ತು ವರ್ಷಗಳ ಕಾಲ ಸಹಸ್ರಾರು ವ್ಯಂಗ್ಯ ಚಿತ್ರಗಳನ್ನು ರಚಿಸಿ ಓದುಗರ ಹೃದಯ ಗೆದ್ದವರು. ಹವ್ಯಾಸಿ ಚಿತ್ರಕಾರನಾಗಿ ಹಲವು ಪತ್ರಿಕೆಗಳ ಓದುಗರಿಗೆ ಚಿರಪರಿಚಿತ ಹೆಸರು ರವೀಂದ್ರ ನಾಡಿಗರು. ಅಪ್ಪ ಮತ್ತು ಮಗನ ಬಾಂಧವ್ಯದ ಬದುಕಿನ ಕಾಲಘಟ್ಟದ ವ್ಯಂಗ್ಯಚಿತ್ರಗಳ ಪ್ರದರ್ಶನ “ಸೌಗಂಧಿಕಾ”ದಲ್ಲಿ ನಡೆಯಲಿದೆ. ನಾಡಿಗ್ ಕಾರ್ಟೂನ್ ನಿತ್ಯನೂತನ. ಕರೋನಾದ ನಿಯಮಗಳನ್ನು ಪಾಲಿಸಿ ಈ ವ್ಯಂಗ್ಯ ಚಿತ್ರಗಳನ್ನು ವೀಕ್ಷಿಸಬಹುದು. ಅ. 10 ರಂದು ಸಂಜೆ ಹಿರಿಯ ನಿವೃತ್ತ ಕಲಾ ಶಿಕ್ಷಕ ಎಂ . ಎಸ್. ಪುರುಷೋತ್ತಮರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಚಂದ್ರ ಸೌಂಗಂಧಿಕಾ ಮೊ. 9900409380 ಅನ್ನು ಸಂಪರ್ಕಿಸಬಹುದು ಎಂದು ಸೌಂಗಂಧಿಕಾದ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.