HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸ್ವಾತಂತ್ರ್ಯ ಹೋರಾಟಗಾರ ಇಬ್ರಾಹಿಂ ಹಾಜಿ ಬೊಳ್ಳಾಡಿಯವರಿಗೆ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ ನುಡಿ ನಮನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಪುತ್ತೂರಿಗೆ ಆಗಮಿಸಿದ್ದ ಮಹಾತ್ಮ ಗಾಂಧೀಜಿಯವರೊಂದಿಗೆ ಹೆಜ್ಜೆ ಹಾಕಿ ಸ್ವಾತಂತ್ರ್ಯ ಚಳುವಳಿಗಳಲ್ಲಿ ಭಾಗವಹಿಸಿದ್ದ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಥಮ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕುಂಬ್ರದ ಇಬ್ರಾಹಿಂ ಹಾಜಿ ಬೊಳ್ಳಾಡಿಯವರಿಗೆ ಸಂಘದ ವತಿಯಿಂದ ನುಡಿನಮನ ಸಲ್ಲಿಸಲಾಯಿತು. ಒಂದು ಗಂಟೆಗಳ ಕಾಲ ಕಛೇರಿ ವ್ಯವಹಾರ ಸ್ಥಗಿತಗೊಳಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಲಾಯಿತು. ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೀವಿ ಎಸ್.ರೈಯವರುಗಳು ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ, ರಘರಾಮ ಪಾಟಾಳಿ ಬಡಗನ್ನೂರು ಉಪಸ್ಥಿತರಿದ್ದರು.

ಮರಣ ಸಾಂತ್ವನ ನಿಧಿ ವಿತರಣೆ
ಸಂಘದ ವತಿಯಿಂದ ನೀಡಲಾಗುವ ಮರಣ ಸಾಂತ್ವನ ನಿಧಿಯಿಂದ ರೂ.10ಸಾವಿರವನ್ನು ಇಬ್ರಾಹಿಂ ಹಾಜಿ ಬೊಳ್ಳಾಡಿಯವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಇದಲ್ಲದೆ ಸಂಘದ ಸದಸ್ಯರಾಗಿದ್ದು ಇತ್ತೀಚೆಗೆ ಮರಣ ಹೊಂದಿದ ಬಾಬು ಮಣಿಯಾಣಿ ಮಾವಿಲಕೊಚ್ಚಿ, ಲಾರೆನ್ಸ್ ಡಿ’ಸೋಜಾ ಬಡಗನ್ನೂರು, ಇಬ್ರಾಹಿಂ ಪಿ.ಬಿ ಕೊಲ ಮತ್ತು ಗಣಪತಿ ಭಟ್ ಕೆಳಂದೂರು ಪಡುವನ್ನೂರುರವರುಗಳಿಗೆ ತಲಾ ರೂ.5ಸಾವಿರದಂತೆ ಪರಿಹಾರದ ಚೆಕ್ ವಿತರಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.