HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ 153.1ಕಿ.ಮೀ ಗ್ರಾಮೀಣ ರಸ್ತೆ ಮೇಲ್ದರ್ಜೆಗೆ

Puttur_Advt_NewsUnder_1
Puttur_Advt_NewsUnder_1
  • ಪಿಡಬ್ಲ್ಯುಡಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಕಡಬ ಹೊರತುಪಡಿಸಿದ ಪುತ್ತೂರು ತಾಲೂಕು ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬಂಟ್ವಾಳ ತಾಲೂಕಿನ ೧೨ ಗ್ರಾಮಗಳು ಸೇರಿದಂತೆ ಒಟ್ಟು ೧೫೩.೧ ಕಿಲೋ ಮೀಟರ್ ಗ್ರಾಮೀಣ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ದರ್ಬೆಯಲ್ಲಿರುವ ನಿರೀಕ್ಷಣಾ ಮಂದಿರದಲ್ಲಿ ಅ.೬ರಂದು ನಡೆದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದರು. ಒಂದಷ್ಟು ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯ ದೃಷ್ಟಿಯಿಂದ ಈ ಕುರಿತು ಪ್ರಸ್ತಾವನೆ ಕಳುಹಿಸಲಾಗಿತ್ತು. ಇದೀಗ ಗ್ರಾಮೀಣ ರಸ್ತೆಗಳು ಮೇಲ್ದದರ್ಜೆಗೆ ಏರಿಸಲಾಗಿದೆ. ಇದರಲ್ಲಿ ಜಿಲ್ಲಾ ಮುಖ್ಯರಸ್ತೆ ಮತ್ತು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ರಸ್ತೆಗಳಿವೆ ಎಂದರು.

ಪುತ್ತೂರು ಉಪ್ಪಿನಂಗಡಿ ರಸ್ತೆ ರಾಜ್ಯ ಹೆದ್ದಾರಿಯಾಗಿ ಏರಿಕೆ:
ಪುತ್ತೂರು ಮತ್ತು ಉಪ್ಪಿನಂಗಡಿಯನ್ನು ಸಂಪರ್ಕಿಸುವ ೧೦.೨ ಕಿ.ಮೀ ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಿ ಅನುಷ್ಠಾನಗೊಳಿಸಲಾಗಿದೆ. ಗುರುವಾಯನಕೆರೆ- ಉಪ್ಪಿನಂಗಡಿ ಸಂಪರ್ಕಿಸುವ ೨೬ ಕಿ.ಮೀ. ರಸ್ತೆ ಈಗಾಗಲೇ ರಾಜ್ಯ ಹೆದ್ದಾರಿ (೧೧೮)ಯಾಗಿದ್ದು, ಇದೇ ಹೆದ್ದಾರಿಯನ್ನು ಇದೀಗ ಪುತ್ತೂರುವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ೩೬ ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ರಚನೆಯಾದಂತಾಗಿದೆ. ಪುತ್ತೂರು- ಉಪ್ಪಿನಂಗಡಿ ನಡುವೆ ೧೨ ಕೋಟಿ ರೂ. ವೆಚ್ಚದಲ್ಲಿ ನಡೆಯುವ ಅಗಲೀಕರಣ ಕಾಮಗಾರಿ ಜನವರಿ ಹೊತ್ತಿಗೆ ಸಂಪೂರ್ಣಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಜೀವಂಧರ ಜೈನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ. ರಾಜಾರಾಂ, ಸಹಾಯಕ ಎಂಜಿನಿಯರ್ ಕನಿಷ್ಕ ಚಂದ್ರ, ಕಿರಿಯ ಎಂಜಿನಿಯರ್‌ಗಳಾದ ಎಲ್.ಸಿ. ಸಿಕ್ವೆರಾ, ಬಾಲಕೃಷ್ಣ, ರವಿಚಂದ್ರ ಉಪಸ್ಥಿತರಿದ್ದರು.

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಗೆ
ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರಮೇಶ್ ಬಾಬು ಅವರ ಜತೆ ಪ್ರಗತಿ ಪರಿಶೀಲನೆ ಮಾಡಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಾಗಲೇ ಮಡಿಕೇರಿಯಿಂದ – ಮೈಸೂರುವರೆಗೆ ಚತುಷ್ಪಥ ಮಾಡಲು ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮಾಣಿಯಿಂದ ಮಡಿಕೇರಿವರೆಗೆ ಚತುಷ್ಪಥ ಮಾಡಲು ಇನ್ನಷ್ಟೇ ಡಿಪಿಆರ್ ಮಾಡಬೇಕಿದೆ. ಇದೇ ಹೆದ್ದಾರಿಯಲ್ಲಿ ಮೈಸೂರಿನಿಂದ ಬೆಂಗಳೂವರೆಗೆ ಅಷ್ಟಪಥ ರಸ್ತೆ ನಿರ್ಮಾಣವಾಗಲಿದ್ದು, ೪ ಪಥಗಳ ಸರ್ವಿಸ್ ರಸ್ತೆ ಪ್ರತ್ಯೇಕ ನಿರ್ಮಾಣಗೊಳ್ಳಲಿದೆ. ಅದೇ ರೀತಿ ಮಂಗಳೂರು- ಬೆಂಗಳೂರು ರಾ.ಹೆ. ೭೫ರಲ್ಲಿ ಹಾಸನದಿಂದ ಮಾರ್ನಹಳ್ಳಿಯವರೆಗಿನ ಮೇಲ್ದರ್ಜೆ ಕಾಮಗಾರಿಯನ್ನು ಗುತ್ತಿಗೆದಾರರಾದ ಐಸೋಲೆಕ್ಸ್ ಕಂಪೆನಿ ನಿಲ್ಲಿಸಿದ್ದಾರೆ. ಈಗ ಮಧ್ಯಪ್ರದೇಶ ಮೂಲದ ರಾಜ್‌ಕಮಲ್ ಕಂಪನಿ ಈ ಕಾಮಗಾರಿ ನಡೆಸಲಿದೆ. ಭವಿಷ್ಯದಲ್ಲಿ ಶಿರಾಡಿ ಘಾಟಿಯಲ್ಲಿ ಪ್ರತ್ಯೇಕ ಸುರಂಗ ಮಾರ್ಗ ನಿರ್ಮಿಸುವ ಯೋಜನೆಯೂ ಇದೆ. ಇದು ಈಗಿರುವ ಹೆದ್ದಾರಿಗೆ ಪರ್ಯಾಯವಾಗಿ ನಿರ್ಮಾಣಗೊಳ್ಳುವ ಉದ್ದೇಶ ಹೊಂದಿದೆ ಎಂದರು.

ಬಂಟ್ವಾಳ- ಅಡ್ಡಹೊಳೆ ಕಾಮಗಾರಿ
ಸ್ಥಗಿತಗೊಂಡಿರುವ ಬಂಟ್ವಾಳ -ಅಡ್ಡಹೊಳೆ ನಡುವಿನ ಚತುಷ್ಪಥ ಕಾಮಗಾರಿ ಮತ್ತೆ ಆರಂಭಿಸಲು ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದರು. ಹಿಂದೆ ನೀಡಲಾಗಿದ್ದ ಗುತ್ತಿಗೆಯನ್ನು ಅವಧಿಗೆ ಮೊದಲೇ ಮುಕ್ತಾಯಗೊಳಿಸಲಾಗಿದೆ. ಪ್ರಸ್ತುತ ಕಾಮಗಾರಿಯನ್ನು ಎರಡು ವಿಭಾಗ ಮಾಡಲಾಗಿದೆ. ಬಂಟ್ವಾಳದಿಂದ ಪೆರಿಯಶಾಂತಿವರೆಗೆ ರೂ. ೧೬೦೦ ಕೋಟಿ ವೆಚ್ಚದ ಚತುಷ್ಪಥ ಯೋಜನೆ ಸಿದ್ಧಪಡಿಸಲಾಗಿದೆ.

ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಬರುವ ವಿವಿಧ ಅಭಿವೃದ್ಧಿಗಳು:
* ಉಪ್ಪಿನಂಗಡಿಯಲ್ಲಿ ಹೆದ್ದಾರಿ ಪಕ್ಕದಲ್ಲಿರುವ ಹಳೆಯ ನಿರೀಕ್ಷಣಾ ಮಂದಿರದ ಕಟ್ಟಡ ಮತ್ತು ೧ ಎಕರೆ ಜಾಗವನ್ನು ಪುತ್ತೂರು ತಾಪಂ ವ್ಯಾಪ್ತಿಯಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದ್ದು, ಅಲ್ಲಿ ನೂತನ ಪ್ರವಾಸಿ ಮಂದಿರ ನಿರ್ಮಾಣ.
* ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ನೂತನ ಕಟ್ಟಡ ನಿರ್ಮಿಸಲು ಬನ್ನೂರು ಅನೆಮಜಲಿನಲ್ಲಿ ಸುಮಾರು ೪ ಎಕರೆ ಜಾಗ ಮಂಜೂರು ಮಾಡಿ ೩ ವರ್ಷ ಕಳೆದಿದ್ದು, ಕಾಲೇಜು ಕಟ್ಟಡ ನಿರ್ಮಿಸಲು ಖಾಸಗಿ ದಾವೆಯೊಂದು ಅಡ್ಡಿಯಾಗಿದೆ. ಕಾಲೇಜು ಕಟ್ಟಡ ನಿರ್ಮಿಸಲು ೪.೫ ಕೋಟಿ ರೂ. ಮಂಜೂರಾಗಿದ್ದರೂ, ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣ ಕಾಮಗಾರಿ ಆರಂಭಗೊಂಡಿಲ್ಲ.
* ಬನ್ನೂರಿನ ಆನೆಮಜಲಿನಲ್ಲಿ ನಿರ್ಮಾಣವಾಗಲಿರುವ ನ್ಯಾಯಾಲಯ ಸಂಕೀರ್ಣದ ನೀಲನಕಾಶೆಯ ವಿನ್ಯಾಸ ಮಂಗಳೂರು ಎನ್‌ಐಟಿಕೆಯಲ್ಲಿ ಅಂತಿಮಗೊಳ್ಳುತ್ತಿದೆ. ಶೀಘ್ರದಲ್ಲೇ ವಿನ್ಯಾಸ ಸಿಗಲಿದ್ದು, ನಂತರ ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ.
* ನ್ಯಾಯಾಲಯ ಸಂಕೀರ್ಣದ ಬಳಿ ಯ ಪ್ರದೇಶದಲ್ಲಿರುವ ನಾಗ ಮತ್ತು ದೈವ ಸಾನಿಧ್ಯಕ್ಕೆ ತೊಂದರೆ ಉಂಟು ಮಾಡುವುದಿಲ್ಲ. ಇಲ್ಲಿದ್ದ ಅಂಗನವಾಡಿ ಕಟ್ಟಡವನ್ನು ಪ್ರತ್ಯೇಕವಾಗಿ ನಿರ್ಮಿಸಿ ಕೊಡಲಾಗುವುದು. ಕೋರ್ಟ್ ಸಂಕೀರ್ಣಕ್ಕೆ ಸಂಪರ್ಕ ರಸ್ತೆ ಅಗಲ ಕಿರಿದಾಗಿರುವ ಕಾರಣ ಅಗಲೀಕರಣಕ್ಕೆ ಹೊಸದಾಗಿ ಯೋಜನೆ ರೂಪಿಸಲಾಗುವುದು.
* ಪುತ್ತೂರು ಕ್ಷೇತ್ರದಲ್ಲಿ ಶಾಲಾ ಸಂಪರ್ಕ ಸೇತುಗಳ ನಿರ್ಮಾಣಕ್ಕೆ ೨.೪೩ ಕೋಟಿ ರೂ. ಮಂಜೂರಾಗಿದ್ದು, ೩೯ ಸೇತುವೆ ನಿರ್ಮಾಣಗೊಳ್ಳಲಿದೆ. ಇದರಲ್ಲಿ ೨೨ ಪೂರ್ಣಗೊಂಡಿದ್ದು, ೫ ಪ್ರಗತಿಯಲ್ಲಿದೆ. ೧೨ ಟೆಂಡರ್ ಹಂತದಲ್ಲಿದೆ.
* ಬಿಳಿಯೂರು ಕಟ್ಟೆ ಸರಕಾರಿ ಕಾಲೇಜಿನ ೩ ಕೊಠಡಿ ನಿರ್ಮಾಣ ರೂ. ೯೬ ಲಕ್ಷ ವೆಚ್ಚದಲ್ಲಿ ನಡೆದಿದೆ. ಮುಕ್ರಂಪಾಡಿಯ ಸರಕಾರಿ ಮಹಿಳಾ ಪಿಯು ಕಾಲೇಜಿನ ಮೇಲಂತಸ್ತು ನಿರ್ಮಾಣ ಕಾಮಗಾರಿ ರೂ.೫೬ ಲಕ್ಷ ವೆಚ್ಚದಲ್ಲಿ ನಡೆದಿದೆ. ಕುಂಬ್ರ ಕರ್ನಾಟಕ ಪಬ್ಲಿಕ್ ಶಾಲೆಯ ೩ ಕೊಠಡಿಗಳ ನಿರ್ಮಾಣ ರೂ.೯೬ ಲಕ್ಷ ವೆಚ್ಚದಲ್ಲಿ ನಡೆದಿದೆ.
* ಪುತ್ತೂರು ನಗರಸಭೆಯ ನೂತನ ಆಡಳಿತ ಕಟ್ಟಡಕ್ಕೆ ರೂ.೧೦ ಕೋಟಿ ಬಜೆಟ್ ನಿಗದಿಪಡಿಸಲಾಗಿದೆ. ಈಗಾಗಲೇ ರೂ. ೪ ಕೋಟಿ ನಿಧಿ ಲಭ್ಯವಿದ್ದು, ಅದರಲ್ಲಿ ಮೊದಲ ಹಂತದ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.
* ಪುತ್ತೂರು ಮಹಾಲಿಂಗೇಶ್ವರ ದೇವರು ಅವಭೃತ ಸವಾರಿ ಹೋಗುವ ಹಾದಿಯಲ್ಲಿ ಬೀರಂಗಿಲ ಸಮೀಪದ ಕುಕ್ಕುದಡಿ- ಅರಿಪ್ಪೆಕಟ್ಟೆ ಎಂಬಲ್ಲಿನ ತೋಡಿಗೆ ಸೇತುವೆ ನಿರ್ಮಿಸಲು ರೂ.೩೦ ಲಕ್ಷ ಮಂಜೂರು ಮಾಡಲಾಗಿದೆ.

ಮುಖ್ಯಮಂತ್ರಿಗಳ ಅನುಮೋದನೆಯಿಂದ ಹೊಸ ರಾಜ್ಯ ಹೆದ್ದಾರಿಯು ಜಿಲ್ಲೆಯ ಪ್ರಮುಖ ರಸ್ತೆಯಾಗಿದ್ದು, ಪುತ್ತೂರಿನಲ್ಲಿ ೩ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ, ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಧಿಸುವ ಕಾರಣ ಮಹತ್ವದ ಹೆದ್ದಾರಿಯಾಗಲಿದೆ – ಸಂಜೀವ ಮಠಂದೂರು ಶಾಸಕರು ಪುತ್ತೂರು
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.