HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ನೀತಿ ಆಯೋಗದ ಸಮೀಕ್ಷೆ ಡಿ.ವಿ.ಎಸ್‌ರವರ ರಸಗೊಬ್ಬರ, ಔಷಧ ಇಲಾಖೆಗಳಿಗೆ ದೇಶದಲ್ಲಿ 2, 3ನೇ ಸ್ಥಾನ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ, ಕೇಂದ್ರದ 65 ಸಚಿವಾಲಯ/ಇಲಾಖೆಗಳನ್ನು ತಮ್ಮ ಆಡಳಿತದಲ್ಲಿ ಸಮರ್ಥವಾಗಿ ಅಳವಡಿಸಿಕೊಂಡ ಆಧುನಿಕ ತಂತ್ರಜ್ಞಾನ, ಗುಣಮಟ್ಟದ ಸರಳ ಹಾಗೂ ಸುರಕ್ಷಿತ ದತ್ತಾಂಶಗಳ ಬಳಕೆ, ಮಾನವ ಸಂಪನ್ಮೂಲ ನಿಯೋಜನೆ ಹಾಗೂ ಆರ್ಥಿಕ ಕ್ಷಮತೆ ಇವೇ ಮುಂತಾದ ವಿಷಯವಾಗಿ ನೀತಿ ಆಯೋಗವು ನಡೆಸಿದ ಸಮೀಕ್ಷೆಯಲ್ಲಿ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ನಿರ್ವಹಿಸುವ ರಸಗೊಬ್ಬರ ಹಾಗೂ ಔಷಧ ಇಲಾಖೆಗಳು ಎರಡು ಹಾಗೂ ಮೂರನೇ ಸ್ಥಾನಗಳನ್ನು ಪಡೆದಿವೆ. ಕರ್ನಾಟಕದ ಮಖ್ಯಮಂತ್ರಿಯಾಗಿದ್ದಾಗ ಪಾರದರ್ಶಕ ಆಡಳಿತ ನಡೆಸಿ ತಮ್ಮದೇ ಛಾಪು ಮೂಡಿಸಿದ್ದ ಸದಾನಂದ ಗೌಡರು ಪ್ರಧಾನಿ ನರೇಂದ್ರ ಮೋದಿಯವರು ತಮಗೆ ನೀಡಿದ್ದ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿ ತಾನೊಬ್ಬ ದಕ್ಷ ಆಡಳಿತಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.ಕೊರೋನಾದಂತಹ ಸಂಕಷ್ಟದ ಸಮಯದಲ್ಲಿಯೂ, ದೇಶಾದ್ಯಂತ ದಾಖಲೆ ಪ್ರಮಾಣದಲ್ಲಿ ರಸಗೊಬ್ಬರ ಹಾಗೂ ಔಷಧಗಳನ್ನು ಪೂರೈಸಿ, ರೈತಾಪಿ ವರ್ಗ ಸಹಿತ ದೇಶದ ಜನರ ಪ್ರೀತಿ-ಗೌರವಕ್ಕೆ ಪಾತ್ರರಾಗುವುದರ ಜೊತೆಗೆ ತಾವು ಪ್ರತಿನಿಧಿಸುವ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂಬ ಪ್ರಶಂಸೆಯ ಮಾತುಗಳು ನಾಗರಿಕರಿಂದ ಕೇಳಿ ಬರುತ್ತಿವೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.