HomePage_Banner
HomePage_Banner
HomePage_Banner
HomePage_Banner
HomePage_Banner

ಜೆಸಿಐ ಆಲಂಕಾರು ಘಟಕಕ್ಕೆ ಜೆಸಿಐ ವಲಯ 15ರ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಭೇಟಿ

Puttur_Advt_NewsUnder_1
Puttur_Advt_NewsUnder_1

ಕಡಬ: ಜೆಸಿಐ ಆಲಂಕಾರು ಘಟಕಕ್ಕೆ ಜೆಸಿಐ ವಲಯ ೧೫ರ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥರು ಅಧಿಕೃತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಆಲಂಕಾರಿನ ನೆಕ್ಕರೆಯಲ್ಲಿ ಜೆಸಿಐ ವತಿಯಿಂದ ನಿರ್ಮಾಣಗೊಂಡ ಸ್ವಾಗತ ಫಲಕದ ಅನಾವರಣ ಮಾಡಿದರು.
ಬಳಿಕ ಘಟಕದ ಪೂರ್ವಾಧ್ಯಕ್ಷ ಪ್ರದೀಪ್ ರೈ ಮನವಳಿಕೆಯವರ ಮನೆಯಲ್ಲಿ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಕಾರ್ತಿಕೇಯ ಮಧ್ಯಸ್ಥರವರು, ಆಲಂಕಾರು ಘಟಕವು ಸದಾ ಕ್ರಿಯಾಶೀಲವಾಗಿದ್ದು ಅನೇಕ ನೂತನ ಸಮಾಜಮುಖೀ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತಿದೆ. ಈ ಲೋಕ ಹಿತದ ಕೆಲಸವು ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಹೇಳಿ ಶುಭ ಹಾರೈಸಿದರು. ಜೆಸಿಐ ಆಲಂಕಾರಿನ ಅಧ್ಯಕ್ಷ ಸತೀಶ್ ಜಿ.ಆರ್.ರವರು ಅಧ್ಯಕ್ಷತೆ ವಹಿಸಿದ್ದರು. ಘಟಕದ ಪೂರ್ವಾಧ್ಯಕ್ಷ, ವಲಯ ಉಪಾಧ್ಯಕ್ಷರೂ ಆದ ಪ್ರದೀಪ್ ಬಾಕಿಲರವರು ಘಟಕದ ಸದಸ್ಯರನ್ನು ಪರಿಚಯಿಸಿದರು. ವಲಯದ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥರನ್ನು ಆಲಂಕಾರು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಘಟಕದ ಬೆಳವಣಿಗೆಗೆ ಸಹಕರಿಸುತ್ತಿರುವ, ಸಮಾರಂಭದ ಆತಿಥ್ಯವನ್ನು ವಹಿಸಿಕೊಂಡಿದ್ದ ಪ್ರದೀಪ್ ರೈ ಮನವಳಿಕೆಯವರನ್ನು ಸನ್ಮಾನಿಸಲಾಯಿತು.

ಘಟಕದ ನಿಕಟಪೂರ್ವ ಅಧ್ಯಕ್ಷೆ ಹೇಮಲತಾ ಪ್ರದೀಪ್, ಜೆಜೆಸಿ ಅಧ್ಯಕ್ಷೆ ಸ್ಪೂರ್ತಿ, ಜೆಸಿರೆಟ್ ಅಧ್ಯಕ್ಷೆ ಪ್ರತಿಮಾ ರೈ, ವಲಯ ೧೫ರ ನಿಕಟಪೂರ್ವ ಅಧ್ಯಕ್ಷ ಅಶೋಕ್ ಚೂಂತಾರು, ಘಟಕದ ಸ್ಥಾಪಕಾಧ್ಯಕ್ಷ ಬಿ.ಎಲ್.ಜನಾರ್ದನ್, ಪೂರ್ವಾಧ್ಯಕ್ಷರುಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಬಾಲಕೃಷ್ಣ ಕೇಪುಳು ಅತಿಥಿಗಳನ್ನು ವೇದಿಕೆಗೆ ಸ್ವಾಗತಿಸಿದರು. ರುದ್ರನಾಕ್ ಜೆಸಿವಾಣಿ ವಾಚಿಸಿದರು. ಕಾರ್ಯಕ್ರಮದ ನಿರ್ದೇಶಕ ಪ್ರದೀಪ್ ರೈ ಮನವಳಿಕೆ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.