HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬಸ್ ಟಿಕೇಟ್ ಖರೀದಿಸಿದ್ದರೂ ಟಿಕೇಟ್ ಪರೀಕ್ಷಿಕರು ಆಗಮಿಸಿದ ವೇಳೆ ಟಿಕೇಟ್ ಕಾಣದಾಗಿ ದಂಡ ಪಾವತಿಸಿದ ವೃದ್ಧ ದಂಪತಿ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಬಸ್ ಟಿಕೇಟ್ ಖರೀದಿಸಿದ್ದರೂ ಟಿಕೇಟ್ ಪರೀಕ್ಷಿಕರು ಆಗಮಿಸಿದ ವೇಳೆ ಟಿಕೇಟ್ ಕಾಣದಾಗಿ ವೃದ್ದ ದಂಪತಿಗಳು ದಂಡಪಾವತಿಸಬೇಕಾಗಿ ಬಂದ ಘಟನೆ ಮಂಗಳವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.

ಪುತ್ತೂರಿನಿಂದ ಉಪ್ಪಿನಂಗಡಿಗೆ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಒಟ್ಟು 16 ಮಂದಿ ಪ್ರಯಾಣಿಕರಿದ್ದರು. ಬಸ್ ಕಂಡೆಕ್ಟರ್‌ನ ಲಾಗ್ ಲೀಸ್ಟ್‌ನಲ್ಲಿಯೂ 16 ಮಂದಿಗೆ ಟಿಕೇಟ್ ನೀಡಿದ ದಾಖಲೆ ಇತ್ತೆನ್ನಲಾಗಿದೆ. ಆದರೆ ಬಸ್ಸನ್ನೇರಿದ ಟಿಕೇಟ್ ಪರೀಕ್ಷಕರು ಎಲ್ಲಾ ಪ್ರಯಾಣಿಕರಿಂದ ಟಿಕೇಟ್ ಪರಿಶೀಲನೆಗಾಗಿ ಟಿಕೇಟ್ ಕೇಳಿದಾಗ ಕೊಡಿಂಬಾಳದ ನಿವಾಸಿಗರೆನ್ನಲ್ಲಾದ ದಂಪತಿಯ ಕೈಯಲ್ಲಿ ಟಿಕೇಟ್ ಕಳೆದುಹೋಗಿತ್ತು. ಟಿಕೇಟ್ ಖರೀದಿಸಿದ್ದೇವೆ ಎಂದು ದಂಪತಿಗಳು ಹೇಳಿದರೂ, ಟಿಕೇಟ್ ನೀಡಿದ್ದೇನೆಂದೂ ಕಂಡೆಕ್ಟರ್ ತಿಳಿಸಿದರೂ ಪರೀಕ್ಷಕರಿಗೆ ಟಿಕೇಟ್ ಲಭಿಸದ ಕಾರಣ ದಂಡ ಶುಲ್ಕ ಪಾವತಿಸಬೇಕೆಂದು ಅವರಿಗೆ ಸೂಚಿಸಲಾಯಿತು.

ಕೈಯಲ್ಲಿದ್ದ 350 ರೂಪಾಯಿ ಹಣವನ್ನು ದಂಡವಾಗಿ ಪಾವತಿಸಿದ ದಂಪತಿಯು ಉಪ್ಪಿನಂಗಡಿಯಿಂದ ಕೋಡಿಂಬಾಳಕ್ಕೆ ಹೋಗಲು ಹಣವಿಲ್ಲದೆ ಕಂಗಾಲಾಗಿದ್ದರು. ಈ ವೇಳೆ ಅವರ ಸಂಕಷ್ಟವನ್ನು ಕಂಡ ಕಡಬ ಪರಿಸರದ ವ್ಯಕ್ತಿಯೊಬ್ಬರು ಅವರನ್ನು ಊರಿಗೆ ಕಳುಹಿಸಲು ನೆರವಾದರು.

ದಂಡವಾಗಿ ಸ್ವೀಕರಿಸಿದ ಮೊತ್ತಕ್ಕೆ ಪರೀಕ್ಷಕರು ಯಾವುದೇ ರಶೀದಿ ನೀಡದೇ ಹೋಗಿದ್ದಾರೆಂದು ಪ್ರಕರಣದ ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದ್ದು, ಇಲಾಖಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.