HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೋನಡ್ಕದ ಪರಿಶಿಷ್ಟ ಪಂಗಡದ ಹನ್ನೆರಡು ಕುಟುಂಬಗಳಿಗೆ ರಸ್ತೆ ಒದಗಿಸಿಕೊಟ್ಟ ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್

Puttur_Advt_NewsUnder_1
Puttur_Advt_NewsUnder_1


ಪುತ್ತೂರು:  ಸುಮಾರು ಹನ್ನೆರಡು ವರ್ಷಗಳಿಂದ ಮನೆಗೆ ಹೋಗುವುದಕ್ಕೆ ರಸ್ತೆ ಇಲ್ಲದೆ ಕಷ್ಟ ಅನುಭವಿಸುತ್ತಿದ್ದ ಕುಟುಂಬಗಳಿಗೆ ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ವತಿಯಿಂದ ರಸ್ತೆ ಮಾಡಿಕೊಡಲಾಯಿತು.

ನಿಡ್ಪಳ್ಳಿ ಕೋನಡ್ಕ ಎಂಬಲ್ಲಿ ಪರಿಶಿಷ್ಟ ಪಂಗಡದ ಸುಮಾರು ಹನ್ನೆರಡು ಕುಟುಂಬಗಳು ವಾಸವಿದ್ದು ಈ ಮನೆಗಳಿಗೆ ತೆರಳಲು ಯಾವುದೇ ರಸ್ತೆಗಳಿಲ್ಲದೆ ಬಹಳಷ್ಟು ಕಷ್ಟ ಅನುಭವಿಸುತ್ತಿದ್ದರು. ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕೆಂದ ಕೆಲವು ವರ್ಷಗಳಿಂದ ಸಂಬಂಧ ಪಟ್ಟ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದರು ಪ್ರಯೋಜವಾಗಿರಲಿಲ್ಲ.

ರಾಜಕೀಯ ನಾಯಕರಿಗ ಮನವಿ ಸಲ್ಲಿಸಿದರು ಯಾರೋಬ್ಬರು ಈ ಕುಟುಂಬಗಳ ಮನವಿಗೆ ಸ್ಪಂದಿಸಿರಲಿಲ್ಲ, ಹಾಗಾಗಿ ನೊಂದ ಕುಟುಂಬಗಳು ಅಂಬೇಡ್ಕರ್ ಆಪತ್ಬಾಮಧದವ ಟ್ರಸ್ಟ್ ನ ಕಛೇರಿಗೆ ಭೇಟಿ ನೀಡಿ‌ ನಮಗೆ ರಸ್ತೆ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದರು.
ಕೂಡಲೇ ಟ್ರಸ್ಟಿನ ಜಿಲ್ಲಾಧ್ಯಕ್ಷರು ಮತ್ತು ತಾಲೂಕುಧ್ಯಕ್ಷರು ಕೋನಡ್ಕದ ಪರಿಶಿಷ್ಟ ಕುಟುಂಬಗಳ ಮನೆಗಳಿಗೆ ಬೇಟಿ ನೀಡಿ ಪರಿಶೀಲಿಸಿದ್ದರು.

ನಂತರ ಮನವಿಗೆ ಸ್ಪಂದಿಸಿದ ಟ್ರಸ್ಟ್ ಕೇವಲ ಒಂದು ತಿಂಗಳ ಒಳಗಡೆ ರಸ್ತೆ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ಸುಮಾರು 1,5 ಕಿಲೋ ಮೀಟರ್ ಉದ್ದದ ರಸ್ತೆಯನ್ನು ಜೆಸಿಬಿ ಯಂತ್ರದ ಮೂಲಕ ಮಾಡಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಜಿಲ್ಲಾಧ್ಯಕ್ಷರಾದ ರಾಜು ಹೊಸ್ಮಠ, ತಾಲೂಕು ಅಧ್ಯಕ್ಷರಾದ ಹೇಮಂತ್ ಆರ್ಲಪದವು, ಗೌರವಾಧ್ಯಕ್ಷರಾದ ಸುರೇಶ್ ನಿಡ್ಪಳ್ಳಿ, ಪದಾಧಿಕಾರಿಗಳಾದ ರವಿ ಕಾರೆಕ್ಕಾಡು, ಹರೀಶ್ ಒಳತ್ತಡ್ಕ, ವಸಂತ ಪಟ್ಟೆ ನಿಡ್ಪಳ್ಳಿ, ಮೋಹನ್ ನಿಡ್ಪಳ್ಳಿ, ಅಶೋಕ ನಿಡ್ಪಳ್ಳಿ, ಆನಂದ ಕೌಡಿಚ್ಚಾರು, ಸಂಕಪ್ಪ ನಿಡ್ಪಳ್ಳಿ, ಕೃಷ್ಣ ಬೆಟ್ಟಂಪಾಡಿ, ಪ್ರದೀಪ್ ನಿಡ್ಪಳ್ಳಿ, ಯತೀಶ್ ಬೆಟ್ಟಂಪಾಡಿ, ಯಶೋಧರ ರೆಂಜ, ಉಮೇಶ್ ನಿಡ್ಪಳ್ಳಿ, ಶೀನ ನಿಡ್ಪಳ್ಳಿ, ಕೇಶವ್ ಪಡೀಲ್, ವಿಶ್ವನಾಥ ನಿಡ್ಪಳ್ಳಿ, ಅಶೋಕ ನಿಡ್ಪಳ್ಳಿ, ಕಾರ್ತಿಕ್ ನಿಡ್ಪಳ್ಳಿ, ಟ್ರಸ್ಟಿನ ಜಿಲ್ಲಾ ವರದಿಗಾರ ಹರೀಶ್ ಪುತ್ತೂರು ಹಾಗೂ ಇನ್ನಿತರು ಉಪಸ್ಥಿತರಿದ್ದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.