HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅ.12: ಪುತ್ತೂರಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನಾ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಿಜೆಪಿ ಹಾಗೂ ಉತ್ತರ ಪ್ರದೇಶ ಸರಕಾರಗಳು ಕೈಗೊಳ್ಳುತ್ತಿರುವ ಜನಧ್ವನಿ ಧಮನದ ವಿರುದ್ಧ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರ ಮೇಲೆ ರಾಜಕೀಯ ಪ್ರೇರಿತ ಸಿಬಿಐ ದಾಳಿಯ ವಿರುದ್ಧ ಅ.12ರಂದು ಪುತ್ತೂರು ಗಾಂಧಿಕಟ್ಟೆ ಬಳಿ ಶಾಂತಿಯುತ ಪ್ರತಿಭಟನೆ ನಡೆಯಲಿದೆ. ಈ ಬಗ್ಗೆ ಅ.7ರಂದು ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಯವರು ಸಮಾಲೋಚನೆ ಸಭೆಯಲ್ಲಿ ಮಾತಾಡುತ್ತ ಉತ್ತರ ಪ್ರದೇಶ ಹತ್ರಾಸ್‌ನಲ್ಲಿ ನಡೆದ ದಲಿತ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ಇನ್ನಿತರ ಪ್ರಕರಣಗಳನ್ನು ಖಂಡಿಸಿ ದಲಿತ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳೊವಂತೆ ವಿನಂತಿಸಿದ ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ಮಟ್ಟದ ಕಾಂಗ್ರೆಸ್ ಪಕ್ಷದ ಎಸ್.ಸಿ ಘಟಕದ ನೇತೃತ್ವದಲ್ಲಿ ಈ ಪ್ರತಿಭಟನಾ ಸಭೆ ನಡೆಸಲಾಗುವುದು. ಯಾವುದೇ ಮಹಿಳೆ ಆಗಲಿ ಅಂತಹ ಮಹಿಳೆ ಮೇಲೆ ಅತ್ಯಾಚಾರ ನಡೆಸುವವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ಪ್ರತಿಭನೆಯಲ್ಲಿ ಎಲ್ಲಾ ವರ್ಗದ ಜನರು ಪಾಲ್ಗೋಂಡು ಅತ್ಯಾಚಾರಕ್ಕೋಳಾಗದ ಮಹಿಳೆಗೆ ನ್ಯಾಯ ಒದಗಿಸಿ ಕೊಡಬೇಕೆಂದು ಎಂದು ಅವರು ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ದಲಿತ ಹುಡುಗಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಕೇಂದ್ರ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸರಕಾರಗಳು ಪ್ರಕರಣಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸಿದೆ. ಹಾಗೂ ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಗಳಾದ ಪ್ರಿಯಾಂಕಾ ಗಾಂಧಿ ಯವರು ಸಂತ್ರಸ್ತರ ಕುಟುಂಬದ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲು ಹೋದಾಗ ಅವರನ್ನು ತಡೆದದ್ದು ಮಾತ್ರವಲ್ಲದೇ ಅವರ ಮೇಲೆ ಪೋಲಿಸ್ ದೌರ್ಜನ್ಯ ಎಸಗಿದರು. ಕರ್ನಾಟಕದಲ್ಲಿ ನಡೆಯಲಿರುವ ಬೈ ಎಲೆಕ್ಷನ್ ನಲ್ಲಿ ಸೋಲುವ ಭಯದಿಂದ ಬಿಜೆಪಿ ಸರಕಾರವು ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರ ಮೇಲೆ ರಾಜಕೀಯ ಪ್ರೇರಿತ ಸಿಬಿಐ ದಾಳಿಯನ್ನು ನಡೆಸಿದೆ. ಈ ಹಿನ್ನಲೆಯಲ್ಲಿ ಅ.೧೨ರಂದು ಪುತ್ತೂರು ಬಸ್ ಸ್ಟ್ಯಾಂಡ್‌ನ ಗಾಂಧಿ ಕಟ್ಟೆ ಬಳಿ ಮೌನ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೇ ಸ್ಥಳೀಯ ಕಾಂಗ್ರೆಸಿನ ಎಸ್.ಸಿ ಎಸ್.ಟಿ ಘಟಕಗಳನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ ಹಿನ್ನಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗುದು, ಇದಕ್ಕೆ ಎಲ್ಲಾರ ಸಹಕರ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ನ ಸದಸ್ಯ ಐತ್ತಪ್ಪ ಪೆರಡ್ಕ ಮಾತನಾಡಿ ಇಂದು ದಲಿತರಿಗೆ ಏನಾದರೂ ಸ್ಥಾನಮಾನ ನೀಡಿದ್ದರೆ ಕಾಂಗ್ರೆಸ್ ಪಕ್ಷವಾಗಿದೆ. ದಲಿತರಿಗೆ ಭೂಮಿ ನೀಡಿ ಅವರ ವಾಸಕ್ಕೆ ಜಾಗವನ್ನು ನೀಡಿದೆ. ಮೀಸಲಾತಿ ನೀಡುವ ಮೂಲಕ ರಾಜಕೀಯದಲ್ಲಿ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಮೇಲಕ್ಕೆ ಬರಲು ಸಹಕಾರಿಯಾಗಿದೆ. ದಲಿತ ವರ್ಗವು ಇದನ್ನು ಗಮನಿಸಿಬೇಕಾಗಿದೆ. ಬಿಜೆಪಿಗರು ಇಂದು ತಮ್ಮ ರಾಜಕೀಯಕ್ಕಾಗಿ ನಮ್ಮನ್ನು ಬಳಸಿಕೊಂಡು ಕೈಚೆಲ್ಲುತ್ತಿದ್ದಾರೆ. ಇಂದು ದಲಿತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ, ಇದನೆಲ್ಲಾ ಪ್ರತಿಭಟಿಸಲೇಬೇಕು. ಇದಕ್ಕಾಗಿ ನಾವೂ ಬಂಧನಕ್ಕೆ ಒಳಗಾದರೂ ಚಿಂತೆಯಿಲ್ಲ ಎಂದು ಹೇಳಿದರು.

ತಾ.ಪಂ ಸದಸ್ಯ ರಾಮ ಪಾಂಬಾರು ಮಾತನಾಡಿ ಇಂದು ದಲಿತರಿಗೆ ಸೂಕ್ತ ಸ್ಥಾನವಿಲ್ಲದೇ ಕಾಂಗ್ರೆಸ್‌ನಲ್ಲಿ ವಿರಳವಾಗುತ್ತಿದ್ದಾರೆ, ನಾಯಕತ್ವ ಹಾಗೂ ದಲಿತರ ಸಂಘಟನೆಗಳಿಲ್ಲದೇ ಇಂದು ಅವರು ಇತರ ಪಕ್ಷಗಳತ್ತ ಹೋಗುವಂತಾಗಿದೆ. ದಲಿತರನ್ನೆಲ್ಲಾ ಒಗ್ಗೂಡಿಸಿಕೊಂಡು ಅಲ್ಲೆಲ್ಲಿ ಎಸ್.ಟಿ. ಎಸ್.ಸಿ ಘಟಕಗಳನ್ನು ಸ್ಥಾಪಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡಿದ್ದಲ್ಲಿ ದಲಿತ ವರ್ಗವು ಯಾವತ್ತು ಕಾಂಗ್ರೆಸ್ ಪಕ್ಷವನ್ನು ಕೈಬಿಡಲ್ಲ ಎಂದು ಅವರು ಹೇಳಿದರು.

ಉಪ್ಪಿನಂಗಡಿ- ವಿಟ್ಲ ಎಸ್.ಸಿ. ಎಸ್.ಟಿ ಘಟಕದ ಅಧ್ಯಕ್ಷ ರಾಮಣ್ಣ ಕೆಲಿಂಜ ರವರು ಮಾತನಾಡಿ ಕಾಂಗ್ರೆಸಿನ ದಲಿತ ಸಂಘಟನಾ ನಾಯಕರುಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು ಮತ್ತು ಅವರಿಗೆ ಉತ್ತಮ ಅವಕಾಶ ನೀಡಬೇಕು, ದಲಿತ ನಾಯಕರುಗಳನ್ನು ತಿರಸ್ಕಾರ ಮನೋಭಾವದಿಮದ ನೋಡಲಾಗುತ್ತಿದ್ದು ಈ ಹಿನ್ನಲೆಯಲ್ಲಿ ಎಸ್.ಸಿ ಎಸ್.ಟಿಯವರನ್ನು ಒಗ್ಗೂಡಿಸಿಕೊಂಡು ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಅವರು ಹೇಳಿದರು.

ಶೇಷಪ್ಪ ನೆಕ್ಕಿಲು ಮಾತನಾಡಿ ಎಲ್ಲಾರನ್ನು ಒಗ್ಗೂಡಿಸಿಕೊಂಡು ಕಾಂಗ್ರೆಸ್‌ನ ದಲಿತ ಸಂಘಟನೆಗಳನ್ನು ಒಟ್ಟೋಟ್ಟಿಗೆ ಕರೆದುಕೊಂಡು ಹೋಗುವ ಮೂಲಕ ಹಾಗೂ ಕಾಂಗ್ರೆಸ್‌ನ ದಲಿತ ಸಂಘಟನೆಯ ಮುಂಖಡರನ್ನು ಪ್ರತಿಯೊಂದು ವಿಷಯದಲ್ಲಿ ಗಣನೆಗೆ ತೆಗೆದುಕೊಂಡು ಮುಂದೆ ಸಾಗುವುದರಿಂದ ಕಾಂಗ್ರೆಸ್ ಪಕ್ಷ ಬೆಳೆಯಲು ಸಹಕಾರಿಯಾಗಲಿದೆ ಎಂದ ಅವರು ಪ್ರತಿ ಗ್ರಾಮ- ಗ್ರಾಮದಲ್ಲಿ ಘಟಕಗಳನ್ನು ಸ್ಥಾಪಿಸುವಂತೆ ಹೇಳಿದರು.

ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಕೆಪಿಸಿಸಿ ಸದಸ್ಯ ಎಂ. ಬಿ. ವಿಶ್ವನಾಥ್ ರೈ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಮತ್ತು ಯಾಕೂಬ್ ಹಾಜಿ ದರ್ಬೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ, ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಇಸಾಕ್ ಸಾಲ್ಮರ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ಗೋಸ್ವಾಲ್ವಿಸ್, ನಗರಸಭಾ ಸದಸ್ಯ ಯೂಸೂಫ್ ಡ್ರೀಮ್ ಉಪಸ್ಥಿತರಿದ್ದರು. ಪುತ್ತೂರು ಎಸ್ಸಿ ಅಧ್ಯಕ್ಷ ಮುಕೇಶ್ ಕೆಮ್ಮಿಂಜೆ, ಸುಂದರ್, ಪ್ರಹ್ಲಾದ್ ಕೆಮ್ಮಿಂಜೆ, ಪುತ್ತೂರು ನಗರ ಹಿಂದುಳಿದ ವರ್ಗಗಳ ಅಧ್ಯಕ್ಷ ರೊಷನ್ ಪುತ್ತೂರು, ರೋಷನ್ ರೈ ಬನ್ನೂರು, ಮಹೇಶ್ ಕೆಮ್ಮಿಂಜೆ, ವಿಜಯ ಲಕ್ಷ್ಮೀ , ತನಿಯಪ್ಪ ಶಾಂತಿನಗರ, ಬೆಳಿಯಪ್ಪ ಶಾಂತಿನಗರ, ದಿನೇಶ್ ಪಿ.ವಿ., ಬಾಳಪ್ಪ ಶಾಂತಿನಗರ, ಜುನೈದ್ ಬಡಗನ್ನೂರು, ಇಸ್ಮಾಯಿಲ್, ಮನಮೋಹನ್ ರೈ, ಗಂಗಾಧರ ಶೆಟ್ಟಿ, ಹಮೀದ್ ಕಾವಂಜ, ಬಾಬು ಮರಿಕೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಪುತ್ತೂರು ಅಧ್ಯಕ್ಷ ಚಿನ್ಮತ್ತಾರು ಸಂತೋಷ್ ಭಂಡಾರಿ ಮತ್ತಿತರರು ಮಾತನಾಡಿ ವಿವಿಧ ಸಲಹೆ ಸೂಚನೆ ನೀಡಿದರು.

ಕಾಂಗ್ರೆಸ್ ಸೇರ್ಪಡೆ:
ನಿವೃತ್ತ ವಲಯ ಅರಣ್ಯಾಧಿಕಾರಿ ಕೆ. ನಾರಾಯಣ, ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಪಿ. ಮುದ್ದಣ್ಣ, ಕೆ.ಎಫ್.ಡಿ.ಸಿ ಅಧಿಕಾರಿ ಮಣಿಯವರು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮಾಜಿ ಶಾಸಕಿ ಶಂಕುತಳಾ ರವರು ಕಾಂಗ್ರೆಸ್‌ನ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.

ಪ್ರತಿಭಟನೆಗೆ ಸಮಿತಿ ರಚನೆ:
ಇದೇ ಸಂದರ್ಭದಲ್ಲಿ ಐತ್ತಪ್ಪ ಪೆರಲ್ತಾಡ್ಕ, ರಾಮ ಪಾಂಬಾರು, ಶೇಷಪ್ಪ ನೆಕ್ಕಿಲು, ಪ್ರಹ್ಲಾದ್ ಬೆಳಿಪ್ಪಾಡಿ, ಬಾಬು ಮರಿಕೆ, ಅಭಿಷೇಕ್, ವಿಜಯ ಲಕ್ಷ್ಮೀ ಕೆಮ್ಮಿಮಜೆ, ಕೇಶವ ಪಡೀಲ್, ರಾಮಣ್ಣ ಪಿಲಿಂಜರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುದೆಂದು ತೀರ್ಮಾನಿಸಲಾಯಿತು. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮ ಮೇನಾಲ ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.