HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕಳಗಿ ಹತ್ಯೆ ಆರೋಪಿ ಸಂಪತ್ ಮರ್ಡರ್ | ಬೆಳ್ಳಂಬೆಳಗ್ಗೆ ಕಾರು ತಡೆದು ಅಟ್ಟಾಡಿಸಿ ಹೊಡೆದು ಗುಂಡಿಕ್ಕಿ ಕೊಂದರು

Puttur_Advt_NewsUnder_1
Puttur_Advt_NewsUnder_1

ಸಂಪಾಜೆಯ ಜನನಾಯಕ ಕಳಗಿ ಬಾಲಚಂದ್ರರನ್ನು ಅಪಘಾತ ನಡೆಸಿ ಕೊಲೆ ಮಾಡಿದ ಆರೋಪಿಗಳಲ್ಲಿ ಒಬ್ಬನಾಗಿದ್ದ ಸಂಪಾಜೆ ಕಲ್ಲುಗುಂಡಿಯ ಸಂಪತ್ ಎಂಬಾತನನ್ನು ಸುಳ್ಯದ ಶಾಂತಿ ನಗರದಲ್ಲಿ ಇಂದು ಮುಂಜಾನೆ ಮುಸುಕುಧಾರಿಗಳು ಗುಂಡಿಟ್ಟು ಕೊಲೆಗೈದಿದ್ದಾರೆ.

ಕಳಗಿ ಬಾಲಚಂದ್ರ ಹತ್ಯೆಯ ಆರೋಪಿ ಸಂಪತ್ ಕೆಲ ತಿಂಗಳ ಹಿಂದಕ್ಕೆ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಹೊರ ಬಂದಿದ್ದ. ಕಲ್ಲು ಮತ್ತು ಮರಳು ವ್ಯಾಪಾರಸ್ಥರಾಗಿದ್ದ ಆತ ಎಂದಿನಂತೆ ತನ್ನ ವ್ಯವಹಾರದಲ್ಲಿ ತೊಡಗಿಕೊಂಡಿದ್ದ. ಕೆಲವೊಮ್ಮೆ ಆತ ಸುಳ್ಯದ ಶಾಂತಿ ನಗರದಲ್ಲಿರುವ ರಾಮಕೃಷ್ಣ ಎಂಬವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ ಎನ್ನಲಾಗಿದೆ. ನಿನ್ನೆಯೂ ಆತ ಶಾಂತಿನಗರದಲ್ಲಿ ಉಳಿದುಕೊಂಡಿದ್ದ. ಅ.8ರಂದು ಮುಂಜಾನೆ 6.30 ಕ್ಕೆ ಆತ ತನ್ನ ಕಾರಲ್ಲಿ ಹೊರಟು ಹೋಗುತ್ತಿದ್ದಾಗ ಐದಾರು ಮಂದಿ ಮುಸುಕುಧಾರಿಗಳು ಆತನ ಕಾರನ್ನು ಅಡ್ಡಗಟ್ಟಿ ಕನ್ನಡಿಗೆ ಹೊಡೆದು ನಿಲ್ಲಿಸಿದರು. ಅಪಾಯವನ್ನು ಅರಿತ ಸಂಪತ್ ಕಾರಿನಿಂದಿಳಿದು ತನ್ನ ಮನೆ ಕಡೆಗೆ ಓಡಿದ.ಆ ವೇಳೆಗೆ ಮುಸುಕುಧಾರಿಗಳು ಕೋವಿಯಿಂದ ಆತನ ಬೆನ್ನಿಗೆ ಗುಂಡಿಕ್ಕಿದ್ದರೆಂದು ಹೇಳಲಾಗಿದೆ.

ಗುಂಡೇಟು ತಿಂದ ಆತ ತಾನಿರುವ ಮನೆಗೆ ಹೋಗದೆ ಪಕ್ಕದಲ್ಲಿರುವ ಇನ್ನೊಂದು ಮನೆಗೆ ಹೊಕ್ಕಿದನು. ಅಲ್ಲಿಗೂ ಅಟ್ಟಾಡಿಸಿಕೊಂಡು ಬಂದ ಮುಸುಕುಧಾರಿಗಳು ಮನೆಯೊಳಗೆ ಹೊಕ್ಕು ಮತ್ತೆ ಗುಂಡಿಕ್ಕಿದರಲ್ಲದೆ ಕೋವಿಯಿಂದ ಆತನ ತಲೆಗೆ ಹೊಡೆದರೆಂದು ತಿಳಿದು ಬಂದಿದೆ.

ಈ ಘಟನೆ ನಡೆಯುವಾಗ ಮನೆಯವರು ಬೆದರಿ ಹೊರಗೋಡಿ ಬಂದರು. ಮನೆಯಲ್ಲಿದ್ದ ತಿಮ್ಮಪ್ಪ ಎಂಬುವರು ಮುಸುಕುಧಾರಿಗಳನ್ನು ತಡೆಯಲು ಯತ್ನಿಸಿದಾಗ ಅವರು ತಿಮ್ಮಪ್ಪರ ಕೈಗೆ ಕಡಿದಿದ್ದಾರೆ.

ಗುಂಡೇಟಿನಿಂದ ತೀವ್ರ ಜಖಂಗೊಂಡ ಸಂಪತ್ ಮನೆಯೊಳಗಡೆ ಬಿದ್ದು ಮೃತಪಟ್ಟರು. ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನ್ಚಂದ್ರ ಜೋಗಿ, ಎಸ್.ಐ. ಹರೀಶ್ ಎಂ.ಆರ್. ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಬಂದೋಬಸ್ತ್ ಏರ್ಪಡಿಸಿದ್ದಾರೆ. ನೂರಾರು ಮಂದಿ ಕುತೂಹಲಿಗರು ಘಟನಾ ಸ್ಥಳದಲ್ಲಿ ಸೇರಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.