HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅ.9: ನೆಟ್ಟಣಿಗೆ ಮುಡ್ನೂರು ಜಿಪಂ ಸದಸ್ಯರಿಂದ ಅರಿಯಡ್ಕ ಗ್ರಾಮದ ವಿವಿಧ ಕಾಮಗಾರಿಗಳ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
  • ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಈಡೇರಿಸಿದ ಜಿಪಂ ಸದಸ್ಯರು

ಪುತ್ತೂರು: ನೆಟ್ಟಣಿಗೆ ಮುಡ್ನೂರು ಜಿಲ್ಲಾಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಅರಿಯಡ್ಕ ಗ್ರಾಮದಲ್ಲಿ ಅ. 9ರಂದು ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಸಂಜೆ ಗಂಟೆ 4 ರಿಂದ ನಡೆಯಲಿದೆ. ಗ್ರಾಮದ ಐದು ಕಡೆಗಳಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ನಡೆಯಲಿದ್ದು ಜಿಪಂ ಸದಸ್ಯೆ ಅನಿತಾಹೇಮನಾಥ ಶೆಟ್ಟಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಲಿದ್ದಾರೆ.


ಅರಿಯಡ್ಕ ಗ್ರಾಮಪಂಚಯತ್ ಮಡ್ನೂರು ಗ್ರಾಮದ ಫಲನೀರು -ಸಸ್ಪೆಟ್ಟಿ ಎಂಬಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ 8 ಲಕ್ಷ ರೂ ವೆಚ್ಚದಲ್ಲಿ ನೀರಿನ ಓವರ್ ಟ್ಯಾಂಕ್ ನಿರ್ಮಾಣ ಕಾಮಗಾರಿ, ಮಾಡ್ನೂರು ಅಶ್ವತ್ತಡಿ ಎಂಬಲ್ಲಿರುವ ಅಂಗನವಾಡಿ ಕಟ್ಟಡದಲ್ಲಿ ಒಂದು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಅಂಗನವಾಡಿ ಹೊರ ಚಾವಡಿ ನಿರ್ಮಾಣ ಕಾಮಗಾರಿ, ಅಶ್ವತ್ತಡಿಯಲ್ಲಿ ಎರಡು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ನೂತನ ಕಾಂಕ್ರೀಟ್ ರಸ್ತೆ ಕಾಮಗಾರಿ,ಮಾಡ್ನೂರು ಮಾಣಿಯಡ್ಕ- ಬೊಮ್ಮಡ್ಕ ಎಂಬಲ್ಲಿ ಎರಡು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಕುಡಿಯುವ ನೀರಿನ ಟ್ಯಾಂಕ್. ತೋಟದಮೂಲೆ ಮಾರಿಯಮ್ಮ ದೇವಸ್ಥಾನದ ಶೌಚಾಲಯ ಹಾಗೂ ಇಂಟರ್ ಲಾಕ್ ಅಳವಡಿಕೆ ಸೇರಿದಂತೆ ಒಟ್ಟು ಏಳು ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವು ಅರಿಯಡ್ಕ ಗ್ರಾಮಪಂಚಾಯತ್ , ಪುತ್ತೂರು ಕಾವು ಲಯನ್ಸ್ ಕ್ಲಬ್ ಮತ್ತು ಜಿಪಂ ನೇತೃತ್ವದಲ್ಲಿ ನಡೆಯಲಿದೆ.


ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಅರಿಯಡ್ಕ ಗ್ರಾಪಂ ಪಿಡಿಒ ಪದ್ಮಕುಮಾರಿ, ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಕಾರ್ಯದರ್ಶಿ ಪವನ್‌ರಾಂ, ಕೋಶಾಧಿಕಾರಿ ಸಿ ಎಚ್ ಅಝೀಝ್, ಅರಿಯಡ್ಕ ಗ್ರಾಪಂ ಆಡಳಿತಾಧಿಕಾರಿ, ಗ್ರಾಪಂ ಸದಸ್ಯರುಗಳಾದ ರವೀಂದ್ರಪೂಜಾರಿ, ಸರೋಜಿನಿ, ಮಹಾಲಿಂಗ ನಯ್ಕಿ, ಚಿತ್ರಾವತಿ, ನಿರ್ಮಲ, ದಿವ್ಯನಾಥ ಶೆಟ್ಟಿ ಕಾವು, ಶಶಿಕಲಾ ಚೌಟ, ಸಲ್ಮಾ, ನಳಿನಾಕ್ಷಿ ಮತ್ತು ನವೀನ ಬಿ ಡಿ ಭಾಗವಹಿಸಲಿದ್ದಾರೆ. ಗ್ರಾಮದ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ವಿನಂತಿಸಿದ್ದಾರೆ.

ನೆಟ್ಟಣಿಗೆ ಮುಡ್ನೂರು ಜಿಪಂ ಕ್ಷೆತ್ರ ವ್ಯಾಪ್ತಿಯ ಅರಿಯಡ್ಕ , ಮಾಡ್ನೂರು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಾಗಿದ್ದ ಕುಡಿಯುವ ನೀರಿನ ಟ್ಯಾಂಕ್ , ರಸ್ತೆ ಹಾಗೂ ಇನ್ನಿತರ ಕಾಮಗಾರಿಗಳಿಗೆ ಜಿಪಂ ನಿಂದ ಅನುದಾನ ಬಿಡುಗಡೆಯಾಗಿದೆ. ಅದರಂತೆ ಕಾಮಗಾರಿಯೂ ನಡೆದಿದೆ. ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ಇದೆ. ಮುಂದಿನ ದಿನಗಳಲ್ಲಿ ಉಳಿದ ಬೇಡಿಕೆಗಳನ್ನು ಈಡೇರಿಸಲಾಗುವುದು.-ಅನಿತಾ ಹೇಮನಾಥ ಶೆಟ್ಟಿ ಜಿಪಂ ಸದಸ್ಯರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.