HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಡ್ರಗ್ಸ್ ಕೇಸ್: 3ನೇ ದಿನಕ್ಕೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿಚಾರಣೆ| ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಚಿತ್ರನಟಿಯೊಂದಿಗೆ ನಂಟಿನ ಶಂಕೆ- ‘ಮಾಲ್’ ವ್ಯವಹಾರದ ತನಿಖೆಗೆ ಸಿದ್ಧತೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಡ್ರಗ್ಸ್ ದಂಧೆಗೆ ಸಂಬಂಧಪಟ್ಟಂತೆ ಜಯ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ, ಮಾಜಿ ಭೂಗತ ಡಾನ್ ಎನ್. ಮುತ್ತಪ್ಪ ರೈಯವರ ಎರಡನೇ ಪುತ್ರ ರಿಕ್ಕಿ ರೈಯವರ ವಿಚಾರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಅ. 6ರಂದು ಬೆಂಗಳೂರಿನ ಸದಾಶಿವ ನಗರದಲ್ಲಿರುವ ರಿಕ್ಕಿ ರೈಯವರ ಫ್ಲ್ಯಾಟ್ ಮತ್ತು ಬಿಡದಿ ನಿವಾಸಕ್ಕೆ ದಾಳಿ ನಡೆಸಿ ರಿಕ್ಕಿ ರೈಯವರನ್ನು ವಿಚಾರಣೆಗೆ ಒಳಪಡಿಸಿದ್ದ ಸಿಸಿಬಿಯ ಎಸಿಪಿ ಹನುಮಂತರಾಯ ಮತ್ತು ಇನ್ಸ್ಪೆಕ್ಟರ್ ಮಹಾನಂದರವರು ಮಹತ್ವದ ಮಾಹಿತಿ ಕಲೆ ಹಾಕಿದ್ದರು. ಅ. 7ರಂದು ಮತ್ತೆ ಸಿಸಿಬಿ ಅಧಿಕಾರಿಗಳು ಸಿಸಿಬಿ ಕಛೇರಿಯಲ್ಲಿ ರಿಕ್ಕಿಯವರ ವಿಚಾರಣೆ ನಡೆಸಿದ್ದರು.

ಡ್ರಗ್ ಪ್ರಕರಣದಲ್ಲಿ ಆರೋಪಿಯಾಗಿದ್ದು ತಲೆ ಮರೆಸಿಕೊಂಡಿರುವ ತನ್ನ ಬಾಲ್ಯ ಸ್ನೇಹಿತ ಆದಿತ್ಯಾ ಆಳ್ವಾಗೆ ಆಶ್ರಯ ನೀಡಿದ್ದ ಅನುಮಾನದ ಮೇಲೆ ಹೆಚ್ಚಿನ ವಿಚಾರಣೆ ನಡೆದಿತ್ತು. ಸಿಸಿಬಿ ಇನ್ಸ್ಪೆಕ್ಟರ್ ಪುನಿತ್ ನೇತೃತ್ವದ ತಂಡದಿಂದ ರಿಕ್ಕಿರೈ ವಿಚಾರಣೆ ಆಗಿತ್ತು. ಅ. 8ರಂದೂ ವಿಚಾರಣೆಗೆ ಬರಲು ರಿಕ್ಕಿ ರೈಗೆ ಸಿಸಿಬಿ ಸೂಚಿಸಿದೆ. ವಿಚಾರಣೆಯ ವೇಳೆ ರಿಕ್ಕಿ ರೈಯವರ ಮೊಬೈಲ್ ಫೋನ್ ವಶ ಪಡಿಸಿಕೊಂಡಿದ್ದ ಸಿಸಿಬಿ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಲಭಿಸಿದೆ. ಚಿತ್ರರಂಗದ ಹಲವಾರು ನಟ-ನಟಿಯರ ಜತೆ ರಿಕ್ಕಿ ನಂಟು ಹೊಂದಿರುವುದು ಕಂಡು ಬಂದಿದೆ.‌ ಇವೆಲ್ಲವೂ ವ್ಯಾವಹಾರಿಕ ನಂಟೇ, ಗೆಳೆತನದ ನಂಟೇ ಅಥವಾ ಡ್ರಗ್ಸ್ ಪ್ರಕರಣಕ್ಕೆ ನಂಟು ಉಂಟೇ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಮಧ್ಯೆ ಡ್ರಗ್ಸ್ ಕೇಸಲ್ಲಿರುವ ಪ್ರಖ್ಯಾತ ನಟಿಯೊಬ್ಬರಿಗೆ ಅಂಡರ್ ವರ್ಲ್ಡ್ ಲಿಂಕ್ ಇರುವ ಸಂಶಯ ಉಂಟಾಗಿದೆ. ಇದರೊಂದಿಗೆ ರಿಕ್ಕಿ ರೈ ಜತೆ ಚಿತ್ರ ನಟಿಯೊಬ್ಬರು ಮಾದಕ ನಶೆಯ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದ ಮೇಲೆಯೂ ತನಿಖೆ ಮುಂದುವರಿದಿದೆ. ಚತುರ್ಭಾಷ ನಟಿಯಾಗಿದ್ದು ಚಿತ್ರರಂಗದ ಘಟಾನುಘಟಿ ನಾಯಕರೊಂದಿಗೆ ಬಣ್ಣ ಹಚ್ಚಿರುವ, ಪಡ್ಡೆ ಹುಡುಗರ ನಿದ್ದೆಗೆಡಿಸಿರುವ, ಚೆಂದುಳ್ಳಿ ಚೆಲುವೆಯಾಗಿರುವ, ಚಿತ್ರ ರಸಿಕರ ಮನ ಗೆದ್ದಿರುವ, ಮನ ಕದ್ದಿರುವ ಚಿತ್ರನಟಿಯೋರ್ವರು ರಿಕ್ಕಿ ರೈ ಜತೆ ಆತ್ಮೀಯ ಒಡನಾಟ ಹೊಂದಿರುವ ಬಗ್ಗೆ ತನಿಖೆ ಮುಂದುವರಿದಿದೆ. ಆ ನಟಿಯ ಮನೆ ಮೇಲೂ ಕಣ್ಣಿಟ್ಟಿರುವ ಬೆಂಗಳೂರು ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಕರಾ’ಮತ್ತು’ ಮತ್ತು ಆಕೆಯ ವ್ಯವಹಾರದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಈಗಾಗಲೇ ಮೇಲ್ನೋಟಕ್ಕೆ ಅವರ ಚಲನ ವಲನದ ಮೇಲೆ ನಿಗಾ ಇಟ್ಟಿರುವ ಕೇಂದ್ರ ಅಪರಾಧ ವಿಭಾಗದ ತಂಡ ‘ಮಾಲ್’ ವಿಚಾರದಲ್ಲಿ ತಮ್ಮ ಚಿತ್ತ ಹರಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.