ಬೂಡಿಯಾರ್ ಫಾರ್ಮ್ಸ್ ನಲ್ಲಿ ʼಅಂಬರ ಮರ್ಲೆರ್’‌ | ಸುದ್ದಿ ಮೀಡಿಯಾ ಪ್ರಾಯೋಜಕತ್ವದ ಹಾಸ್ಯ ಧಾರಾವಾಹಿಗೆ ಭರದ ಚಿತ್ರೀಕರಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುದ್ದಿ ಮೀಡಿಯಾ ಮುಖ್ಯ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬರ ಮರ್ಲೆರ್ ಹಾಸ್ಯ ಧಾರಾವಾಹಿಗೆ ಕುಂಬ್ರ, ಪುತ್ತೂರು, ಕಾವು, ಬಾಲವನ ಇತ್ಯಾದಿ ಕಡೆಗಳಲ್ಲಿ ಭರದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ನಟ, ನಿರ್ದೇಶಕ ಸುಂದರ್ ರೈ ಮಂದಾರ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಹಾಸ್ಯ ಧಾರಾವಾಹಿ ಸುದ್ದಿ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ. ದಿನಕ್ಕೊಂದು ಎಪಿಸೋಡ್‌ನಂತೆ ಧಾರಾವಾಹಿ ಪ್ರಸಾರಗೊಳ್ಳಲಿದ್ದು ಇದೊಂದು ಸಂಪೂರ್ಣ ಹಾಸ್ಯ ಧಾರಾವಾಹಿ ಆಗಿದೆ.

ಇತ್ತೀಚೆಗೆ ಕುರಿಯದಲ್ಲಿರುವ ಬೂಡಿಯಾರ್ ಫಾರ್ಮ್ಸ್‌ನಲ್ಲಿ ಧಾರಾವಾಹಿ ಚಿತ್ರೀಕರಣ ನಡೆಯಿತು. ಬೂಡಿಯಾರ್ ಫಾರ್ಮ್ಸ್‌ನ ಬೂಡಿಯಾರ್ ರಾಧಾಕೃಷ್ಣ ರೈಯವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ದೃಶ್ಯವನ್ನು ಛಾಯಾಗ್ರಾಹಕ ಹರೀಶ್ ಶೆಟ್ಟಿಮಜಲು ಚಿತ್ರೀಕರಿಸಿಕೊಂಡರು. ಉಳಿದಂತೆ ಕಲಾವಿದರಾದ ದೀಪಕ್ ರೈ ಪಾಣಾಜೆ, ಸುಂದರ್ ರೈ ಮಂದಾರ,ಪಿಂಕಿರಾಣಿ, ಪವಿತ್ರ ಹೆಗ್ಡೆ ಪುತ್ತೂರು, ವಿಜಯಹರಿ ರೈ ಬಳ್ಳಮಜಲು, ಚಂದ್ರಹಾಸ ಶೆಟ್ಟಿ ಮಾಣಿ ಅಭಿನಯಿಸಿದರು.

ಸುದ್ದಿ ಮೀಡಿಯಾ ಪ್ರಮುಖ ಪ್ರಾಯೋಜಕತ್ವ ಗಿರೀಶ್ ಕುಮಾರ್ ಕಡಬ ಸಹ ನಿರ್ಮಾಪಕತ್ವದಲ್ಲಿ ಮೂಡಿಬರಲಿರುವ ಅಂಬರ ಮರ್ಲೆರ್ ತುಳು ಹಾಸ್ಯ ಧಾರಾವಾಹಿಗೆ ರಾಜೇಶ್ ಬಂದ್ಯೋಡು ಮತ್ತು ಚಂದ್ರಹಾಸ ಶೆಟ್ಟಿ ಮಾಣಿ ಸಹ ನಿರ್ದೇಶನ ಇದೆ. ಪ್ರಸಾದ್ ಕೊಯಿಲ ಮೇಕಪ್, ಹರೀಶ್ ಕುಡ್ತಮುಗೇರು ಕ್ಯಾಮರ ಸಹಾಯಕ, ರಾದೇಶ್ ರೈ ಸಂಕಲನ ಇದೆ. ಸುದ್ದಿ ಮೀಡಿಯಾ ಪಾರ್ಟನರ್ ಸುಧಾಕರ ಪಡೀಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.