HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪಾಣಾಜೆ: `ನಮ್ಮ ರಸ್ತೆ ನಮ್ಮ ಹಕ್ಕು’ ಹೋರಾಟ ಸಮಿತಿ ಸಭೆಯಲ್ಲಿ ರಸ್ತೆಗಾಗಿ ನಡೆಯುವ ಹೋರಾಟದಲ್ಲಿ ಏನೇ ಅಡೆತೆಗಳು ಬಂದರೂ ಎದುರಿಸಲು ಸಿದ್ಧ-ಗುರುವ ಬಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಾಣಾಜೆ ಗ್ರಾಮದ ಆರ್ಲಪದವು-ಕಡಂದೇಲು ಮೂಲಕ ಮುಳ್ಳೇರಿಯ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿ `ನಮ್ಮ ರಸ್ತೆ ನಮ್ಮ ಹಕ್ಕು’ ಹೋರಾಟ ಸಮಿತಿಯ ಸಭೆ ಮಹಾಬಲೇಶ್ವರ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು.

ಅಭ್ಯಾಗತರಾಗಿದ್ದ ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುವ ಬಿ ಬ್ರಹ್ಮರಗುಂಡ ಮಾತನಾಡಿ ಮೂಲಭೂತ ಸೌಕರ್ಯವನ್ನು ಪಡೆಯುವುದು ನಮ್ಮ ಹಕ್ಕಾಗಿದ್ದು ಅದಕ್ಕಾಗಿ ಹೋರಾಟ ನಡೆಸುವ ಸಂದರ್ಭ ಬಂದಿರುವುದು ನಮ್ಮ ದುರ್ದೈವವೇ ಆಗಿದೆ.

ಇಲ್ಲಿ ಬಡವರು ಮತ್ತು ದಲಿತ ವರ್ಗದ ಕುಟುಂಬ ಹೆಚ್ಚು ಇರುವುದರಿಂದ ಈ ರಸ್ತೆಗಾಗಿ ನಡೆಯುವ ಹೋರಾಟಗಳಿಗೆ ನಮ್ಮ ದಲಿತ ಸಂಘಟನೆಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು. ರಸ್ತೆಗಾಗಿ ನಡೆಯುವ ಹೋರಾಟದಲ್ಲಿ ಏನೇ ಅಡೆ ತಡೆಗಳು ಬಂದರೂ ಅದನ್ನು ಎದುರಿಸಲು ನಾವು ಸಿದ್ದರಿದ್ದೇವೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಚಂದ್ರಶೇಖರ ಬೇರಿಕೆ, ಖಜಾಂಜಿ ಸುರೇಶ್ ಭಟ್ ಕಡಂದೇಲು ಉಪಸ್ಥಿತರಿದ್ದರು. ಕಾರ್ಯದರ್ಶಿ ಮೋಹನ್ ಕುಮಾರ್, ಜತೆ ಕಾರ್ಯದರ್ಶಿ ಗೋಪಾಲ ಮಣಿಯಾಣಿ ದೇವಸ್ಯ ಸಭೆಯಲ್ಲಿ ಉಪಸ್ಥಿತರಿದ್ದರು. ಗಿರೀಶ್ ಭಟ್ ಕಡಂದೇಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಬೆಂಬಲ ನೀಡಲು ಮನವಿ:
ಸಮಿತಿಯ ಅದ್ಯಕ್ಷ ಮಹಾಬಲೇಶ್ವರ ಭಟ್ ದೇವಸ್ಯ ಮತ್ತು ಪಾಣಾಜೆ ದಲಿತ ಸಂಘರ್ಷ ಸಮಿತಿ ಸಂಚಾಲಕ ಚಂದ್ರಶೇಖರ ಬೇರಿಕೆ ಮತ್ತಿತರರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕರಿಗೆ ತಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಲಿಖಿತವಾಗಿ ಮನವಿ ಸಲ್ಲಿಸಲಾಯಿತು.

ಈ ರಸ್ತೆಯು ಸರಿಸುಮಾರು ೨೦ ವರ್ಷಗಳಿಂದ ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ. ಹಲವು ಬಾರಿ ಇಲ್ಲಿನ ಜನತೆ ಮನವಿ ಕೊಟ್ಟರೂ ಜನಪ್ರತಿನಿಧಿಗಳು ಸ್ಪಂದನೆ ನೀಡಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಆಶ್ವಾಸನೆ ಕೊಟ್ಟು ಹೋಗುತ್ತಾರೆ. ಈ ಪ್ರದೇಶದಲ್ಲಿ ಅತೀ ಹೆಚ್ಚು ತೀರಾ ಬಡತನ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಟುಂಬವೇ ಹೆಚ್ಚಿರುವ ಈ ಪರಿಸರಕ್ಕೆ ರಸ್ತೆಯ ಅಭಿವೃದ್ಧಿ ಆಗಲೇಬೇಕಾಗಿದೆ ಗುರುವ ಬ್ರಹ್ಮರಗುಂಡ, ದ.ಸಂ.ಸ ಸಂಚಾಲಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.