HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸುಳ್ಳು ಸುದ್ದಿ ಪ್ರಕಟಿಸಿದ ‘ನಿಖರ ನ್ಯೂಸ್’ ವಿರುದ್ಧ ಸಿಡಿದೆದ್ದ ಮಿತ್ತಡ್ಕ ನಿವಾಸಿಗಳು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ‘ಅನುಚಿತ ವರ್ತನೆ, ಖಾಸಗಿತನಕ್ಕೆ ಧಕ್ಕೆ ಆರೋಪ ಪುತ್ತೂರಿನ ಲೋಕಲ್ ಪತ್ರಿಕೆಯ, ‘ಅಂಬರೆ ಮರ್ಲೆರ್’ ಖ್ಯಾತಿಯ ಯೂಟ್ಯೂಬ್ ಸಂಪಾದಕನಿಗೆ ನಡು ಬೀದಿಯಲ್ಲಿ ಸಾರ್ವಜನಿಕರ ಸಮ್ಮುಖವೇ ಅಟ್ಟಾಡಿಸಿ ಎಗಾದಿಗಾ ಹೊಡೆತ..!’ ಈ ತಲೆಬರಹದಲ್ಲಿ ‘ನಿಖರ ನ್ಯೂಸ್’ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿರುವ ಮೆಸೇಜ್‌ನಲ್ಲಿ ‘ಬೆಟ್ಟಂಪಾಡಿಯ ಮಿತ್ತಡ್ಕದ ನಿವಾಸಿ ಹಲ್ಲೆಗೊಳಗಾದ ವ್ಯಕ್ತಿ’ ಎಂದು ಬರೆಯಲಾಗಿದ್ದು, ಇದರ ವಿರುದ್ದ ಬೆಟ್ಟಂಪಾಡಿ ಗ್ರಾಮಸ್ಥರು ಸಾಮೂಹಿಕವಾಗಿ ತಿರುಗಿಬಿದ್ದಿದ್ದಾರೆ. ಊರಿನಲ್ಲಿ ನಮಗೆ ತಿಳಿದಿರುವಂತೆ ಯಾವುದೇ ವ್ಯಕ್ತಿ ಅಂತಹ ಘಟನೆಯಲ್ಲಿ ಭಾಗಿಯಾಗದೇ ವಿನಾಕಾರಣ ಊರಿನ ಹೆಸರನ್ನು ತೇಜೋವಧೆ ಮಾಡುವ ಹುನ್ನಾರದಿಂದ ಆ ರೀತಿ ಬರೆಯಲಾಗಿದೆ ಎಂದು ಆರೋಪಿಸಿರುವ ಊರವರು ಇದರ ವಿರುದ್ದ ಸೂಕ್ತ ಕ್ರಮಕ್ಕಾಗಿ ಆಗ್ರಹ ವ್ಯಕ್ತಪಡಿಸಿ ಊರವರ ಸಭೆ ಅ. ೮ರಂದು ಕೇಸರಿನಗರದಲ್ಲಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡರವರ ಸಮ್ಮುಖದಲ್ಲಿ ನಡೆಯಿತು.

ಸಭೆಯಲ್ಲಿ ತಾಲೂಕು ಕೆಡಿಪಿ ಸದಸ್ಯೆ ಪಾರ್ವತಿ ಲಿಂಗಪ್ಪ ಗೌಡ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಯತೀಶ್ ಗೌಡ, ಕಾರ್ಯದರ್ಶಿಗಳಾದ ಬಾಳಪ್ಪ ಪೂಜಾರಿ, ಕಿಟ್ಟಣ್ಣ ಕುಲಾಲ್ ಸೇರಿದಂತೆ ಸುಮಾರು 150 ಕ್ಕೂ ಮಿಕ್ಕಿ ಊರವರು ಪಾಲ್ಗೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.