HomePage_Banner
HomePage_Banner
HomePage_Banner
HomePage_Banner
HomePage_Banner

ಲವ್ ಜಿಹಾದ್, ಅತ್ಯಾಚಾರ ಪ್ರಕರಣಗಳ ತನಿಖೆ ನಡೆಸಿ, ಸೂಕ್ತ ಶಿಕ್ಷೆ ನೀಡುವಂತೆ ಆಗ್ರಹಿಸಿ ಹಿಂಜಾವೇ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
  • ಪಾಕಿಸ್ತಾನದ ಸಂಸ್ಥಾಪಕ ಜಿನ್ನಾನ ಪರಂಪರೆ ಇಂದಿಗೂ ನಿರಂತರ-ಗಣರಾಜ ಭಟ್ ಕೆದಿಲ

ಪುತ್ತೂರು:ಸ್ವಾತಂತ್ರ ಪೂರ್ವದಲ್ಲಿ ದೇಶ ವಿಭಜನೆಯಾದಾಗ ಪಾಕಿಸ್ಥಾನದ ಸಂಸ್ಥಾಪಕ ಮುಹಮ್ಮದ್ ಆಲಿ ಜಿನ್ನಾ ಭಾರತ ದೇಶ ನಮ್ಮದಾಗಬೇಕು ಎಂಬ ಕಲ್ಪನೆಯ ಕೂಗು ಇಂದು ಹಲವು ರೀತಿಯ ಜಿಹಾದ್‌ಗಳ ಮೂಲಕ ಆತನ ಕನಸನ್ನು ನನಸು ಮಾಡುವ ದಂಧೆ ನಡೆಯುತ್ತಿದೆ ಎಂದು ಹಿಂದು ಜಾಗರಣಾ ವೇದಿಕೆ ಮಂಗಳೂರು ವಿಭಾಗ ಮಾತೃ ಸಂಯೋಜಕ ಗಣರಾಜ ಭಟ್ ಕೆದಿಲ ಆತಂಕ ವ್ಯಕ್ತಪಡಿಸಿದರು.

ತಾಲೂಕು ಹಿಂದು ಜಾಗರಣಾ ವೇದಿಕೆಯ ವತಿಯಿಂದ ಅ.8ರಂದು ಸಂಜೆ ದೇಶದಾದ್ಯಂತ ನಡೆಯುತ್ತಿರುವ ಲವ್ ಜಿಹಾದ್ ಮತ್ತು ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಸೂಕ್ತ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಲವ್ ಜಿಹಾದ್ ಧರ್ಮ ಯುದ್ದವಲ್ಲ. ಅದೊಂದು ಮತೀಯ ಆಕ್ರಮಣ. ಪ್ರೀತಿಯ ನಾಟಕ, ಶಿಕ್ಷಣ ಮೊದಲಾದ ಜಿಹಾದ್‌ಗಳ ಮೂಲಕ ಹಿಂದೂಗಳನ್ನು ಮತಾಂತರ ಮಾಡುವ ಸುಲಭ ವಿಧಾನವಾಗಿದೆ. ಇದು ಆಂದ್ರಪ್ರದೇಶದ ಪೊಲೀಸರಿಂದ ಬಂಧಿತನಾಗಿರುವ ಸಾಲ್ಮರ ರಾಜಕೀಯ ಮುಖಂಡನ ಪುತ್ರನ ಬಂಧನದಿಂದ ರೂಪದಲ್ಲಿ ನಮ್ಮ ಕಣ್ಣ ಮುಂದೆ ಕಾಣುತ್ತಿದೆ. ಇಂತಹ ಹಲವಾರು ಪ್ರಕರಣಗಳು ನಡೆದಿದ್ದು ಕೆಲವೊಂದು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿದೆ ಎಂದರು.

ಹಲವು ರೀತಿಯ ಜಿಹಾದ್‌ಗಳ ಮೂಲಕ ಇಂದು ಹಿಂದೂಗಳನ್ನು ನಾಶಗೊಳಿಸುವ ಜಿನ್ನಾ ಪರಂಪರೆ ಇಂದಿಗೂ ನಡೆಯುತ್ತಿದೆ. ಅವರಿಗೆ ಜಾತಿ ಮುಖ್ಯವಲ್ಲ. ಹಿಂದೂಗಳೇ ಪ್ರಮುಖ ಗುರಿಯಾಗಿದೆ. ಹಿಂದು ಯುವತಿಯರನ್ನು ಪ್ರೀತಿಯ ನಾಟಕವಾಡಿ ದಾರಿ ತಪ್ಪಿಸುವ ಅತೀ ದೊಡ್ಡ ಷಡ್ಯಂತ್ರವಾಗಿದೆ. ಬಲಾತ್ಕಾರವಾಗಿ ಮತಾಂತರ ನಡೆಸಿ ಮದುವೆಯಾದ ನಂತರ ಅವರನ್ನು ಹೆರವು ಯಂತ್ರಗಳಾಗಿ ಮಾರ್ಪಾಡು ಮಾಡುತ್ತಾರೆ. ಬಸ್ ಕಂಡೆಕ್ಟರ್, ರಿಕ್ಷಾ ಚಾಲಕ, ಮೊಬೈಲ್ ಅಂಗಡಿಗಳಲ್ಲಿ ನಾನಾ ರೀತಿಯಲ್ಲಿ ಯುವತಿಯನ್ನು ತಮ್ಮ ಬಲೆಗೆ ಬೀಳಿಸುವ ಕೆಲಸಗಳು ನಡೆಯುತ್ತಿದೆ. ಇದರ ಬಗ್ಗೆ ಜಾಗೃತಿ ಪ್ರತಿಯೊಬ್ಬರ ಮನೆ ಮನೆಗಳಲ್ಲಿಯೂ ಜಾಗೃತಿಯಾಗಬೇಕು ಎಂದು ಹೇಳಿದ ಅವರು ಹಿಂದು ಜಾಗರಣಾ ವೇದಿಕೆ ಸ್ವಾರ್ಥಕ್ಕಾಗಿ ದುಡಿಯುತ್ತಿಲ್ಲ. ಹಿಂದೂ ಸಮಾಜದ ಜಾಗೃತಿ, ರಕ್ಷಣೆಗಾಗಿ ಸದಾ ಸಿದ್ದವಾಗಿದೆ. ಕಾನೂನುಗಳಿಗೆ ಒಳಪಟ್ಟುಕೊಂಡು ಜಾಗರಣಾ ವೇದಿಕೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಉತ್ತರಪ್ರದೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಕಳೆದ ಕೆಲ ದಿನಗಳಿಂದ ಹೋರಾಟಗಳು ನಡೆಯುತ್ತಿದೆ. ಅವರು ಕೂಗು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಯವರ ವಿರುದ್ದ ಮಾತ್ರ. ಅಲ್ಲಿ ನಡೆದ ಕೃತ್ಯದ ಬಗ್ಗೆ ಕಣಿಕರ, ವಿರೋಧಗಳು ಸಾಕಷ್ಟು ವ್ಯಕ್ತವಾಗುತ್ತಿದೆ. ಆಂದ್ರಪ್ರದೇಶದಲ್ಲಿ ದಲಿತ ಯುವತಿ ಮೇಲೆ ದೌರ್ಜನ್ಯ ನಡೆಸಿ ತಲೆಮೆರೆಸಿಕೊಂಡು ಬಳಿಕ ಪುತ್ತೂರಿನಲ್ಲಿ ಬಂಧಿತನಾಗಿರುವ ಸಾಲ್ಮರದ ಮುಖಂಡ ಪುತ್ರನ ಅನ್ಯಾಯ, ದೌರ್ಜನ್ಯಗಳು ಅವರ ಕಣ್ಣಿಗೆ ಕಾಣುತ್ತಿಲ್ಲ. ಮಹಿಳೆಯರಿಗೆ ಅನ್ಯಾಯವಾದಾಗ ಅದರ ವಿರುದ್ಧ ಪ್ರಥಮವಾಗಿ ಧ್ವನಿ ಎತ್ತುವುದು ಹಿಂದೂಗಳೇ ಎಮದು ಗಣರಾಜ ಭಟ್ ಹೇಳಿದರು.

ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಉಪಾಧ್ಯಕ್ಷ ವೆಂಕಟ್ರಮಣ, ಜಿಲ್ಲಾ ಮಾತೃ ಸುರಕ್ಷಾ ಸಂಯೋಜಕ ರಾಕೇಶ್ ಪಂಚೋಡಿ, ಕಡಬ ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ, ಉಪಾಧ್ಯಕ್ಷ ಶಶಿಕಾಂತ ಕೋರ್ಟ್‌ರಸ್ತೆ, ಸಂಪರ್ಕ ಪ್ರಮುಖ್ ದಿನೇಶ್ ಪಂಜಿಗ, ನಗರ ಪ್ರಧಾನ ಕಾರ್ಯದರ್ಶಿ ರಾಕೇಶ್ , ಪ್ರಮುಖರಾದ ಪವಿತ್ರ ರೈ ಬಾಳಿಲ, ಸ್ವಸ್ತಿಕ್ ಮೇಗಿನಗುತ್ತು, ಗೀತೇಶ್, ಪುಷ್ಪರಾಜ್ ಸವಣೂರು, ಪ್ರವೀಣ್ ಬಂಬಿಲ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪುತ್ತೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ ರೈ ಸ್ವಾಗತಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರಕಟ್ಟೆ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.