HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಮಾಸ್ಕ್ ವಿಚಾರದಲ್ಲಿ ಡಿ.ಸಿ.ಯವರು ಪೋಲಿಸ್ ಇಲಾಖೆಗೆ ಕೊಟ್ಟಿರುವ ಟಾರ್ಗೆಟ್ ಏನು?- ಜನತೆಗೆ ಆಗುತ್ತಿರುವ ತೊಂದರೆ ತಪ್ಪಿಸಿ: ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತಸಂಘ, ನೀತಿತಂಡದಿಂದ ಮನವಿ

Puttur_Advt_NewsUnder_1
Puttur_Advt_NewsUnder_1

ಕಡಬ: ಒಬ್ಬಂಟಿಯಾಗಿ ಹೋಗುತ್ತಿರುವಾಗ ಮಾಸ್ಕ್ ಧರಿಸದಿದ್ದರೆ ಈಗ ದಂಡ ವಿಧಿಸುತ್ತಿರುವುದು ಈಗಾಗಲೇ ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ, ದಂಡ ವಿಧಿಸಲು ಪೋಲಿಸರಿಗೆ ಜಿಲ್ಲಾಧಿಕಾರಿಗಳು ಟಾರ್ಗೆಟ್ ನೀಡಿದ್ದಾರೆಯೇ ಎಂದು ಹೇಳಲಾಗುತ್ತಿದ್ದು, ದಿನಕ್ಕೆ ಇಂತಿಷ್ಟು ಕೇಸು ಆಗಲೇಬೇಕೆಂಬ ಹಠಕ್ಕೆ ಬಿದ್ದಿರುವ ಪೋಲಿಸರಿಂದ ಮಾಸ್ಕ್ ಸ್ವಲ್ಪ ಜಾರಿದ್ದರೂ ದಂಡ, ಒಬ್ಬಂಟಿ ಹೋಗುವಾಗ ಮಾಸ್ಕ್ ಧರಿಸದಿದ್ದರೂ ದಂಡ, ವಾಹನದಲ್ಲಿ ಹೋಗುವಾಗಲೂ ದಂಡ ಎಲ್ಲಿ ನೋಡಿದರೂ ದಂಡವೇ ದಂಡ, ಇದು ತಪ್ಪು ಕೂಡಲೇ ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಿ ಬಡ ಜನಜನತೆಗೆ ಪೋಲಿಸರಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಕಡಬ ತಾಲೂಕು ರೈತ ಸಂಘದ ಅಧ್ಯಕ್ಷ ವಿಕ್ಟರ್ ಮಾರ್ಟಿಸ್ ಆಗ್ರಹಿಸಿದ್ದಾರೆ.


ಅವರು ಕಡಬ ತಹಸೀಲ್ದಾರ್ ಕಛೇರಿಯ ಎದುರು ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ, ಮಾತನಾಡಿ, ಈಗಾಗಲೇ ಮಾಸ್ಕ್ ಧರಿಸದವರಿಗೆ ದಂಡ ಹಾಕುತ್ತಿರುವುದು ಕಂಡರೆ ಎಲ್ಲರಿಗೂ ನೋವಾಗುತ್ತಿದೆ. ಪೋಲಿಸ್ ಇಲಾಖೆಗೆ ಕಾನೂನಿನ ಅನುಭವವನ್ನು ತಿಳಿಸಬೇಕಿದೆ, ಒಬ್ಬಂಟಿಯಾಗಿರುವಾಗ ಮಾಸ್ಕ್ ಧರಿಸದಿದ್ದರೆ ಕೇಸು ಹಾಕುತ್ತಿರುವುದು ಖಂಡನಿಯ, ಸರಕಾರದಿಂದ ಜನಸಾಮಾನ್ಯರಿಗೆ ಉಚಿತ ಮಾಸ್ಕ್ ಕೊಡಿಸಿ, ಪೋಲಿಸ್ ಇಲಾಖೆಗೆ ಕಾನೂನಿನ ಮಾಹಿತಿಯ ಅನುಭವ ಅರಿವನ್ನು ಮೂಡಿಸಿ, ಧೀರ್ಘಕಾಲ ಮಾಸ್ಕ್ ಧರಿಸುವುದರಿಂದ ಆರೋಗ್ಯ ಬೇರೆ ಬೇರೆ ರೀತಿಗಳಲ್ಲಿ ಹದಗೆಡುವುದನ್ನು ತಪ್ಪಿಸಿ. ಡಿ.ಸಿ. ಯವರು ಪೋಲಿಸ್ ಇಲಾಖೆಗೆ ಕೊಟ್ಟಿರುವ ಟಾರ್ಗೆಟ್ ಏನಿದೆ? ಅದು ಬಹಳ ಅತಿರೇಕ. ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ಕಾನೂನಿನ ಅರಿವು ಡಿ.ಸಿ ಗಾಗಲಿ, ಪೋಲಿಸರಿಗಾಗಲಿ ಇಲ್ಲ.. ಅದೆನೆಂದರೆ ಯಾವುದೇ ವ್ಯಕ್ತಿ ಒಂಟಿಯಾಗಿ ಆತನ ಮನೆ ಮುಂದೆ ಅಥವಾ ವಾಹನದಲ್ಲಿಯಾಗಲಿ ಓಡಾಡುವಾಗ ಮಾಸ್ಕ್ ಧರಿಸಬೇಕಾಗಿಲ್ಲ, ಒಬ್ಬರಿಗಿಂತ ಹೆಚ್ಚು ಜನ ಗುಂಪಾಗಿ ಸೇರುವಾಗ ಅಥವಾ ಸಮಾರಂಭಗಳಿಗೆ ಸೇರುವಾಗ ಮಾಸ್ಕ್ ಕಡ್ಡಾಯ. ಆದರೆ ಕಡಬ ಹಾಗೂ ಸುತ್ತಾಮುತ್ತಾ ಪರಿಸರದಲ್ಲಿ ಒಬ್ಬನಿದ್ದರೂ ಪೋಲಿಸರು ದಂಡವಿಧಿಸುತ್ತಾರೆ. ತಾವುಗಳು ಕೂಡಲೇ ಪೋಲಿಸ್ ಇಲಾಖೆಗೆ ಅರಿವನ್ನು ಮೂಡಿಸಿ ಆರೋಗ್ಯ ಇಲಾಖೆಯಿಂದ ತಮಗೆ ಬಂದ ಕಾನೂನಿನ ಕ್ರಮದ ಸುತ್ತೋಲೆ ಅಥವಾ ಪ್ರಕಟಣೆ ಇದ್ರೆ ಡಿ.ಸಿಗೂ, ಇಲಾಖೆಗೂ, ನಮಗೂ ಕೊಡಿಸಿ ನಮ್ಮ ಜಿಲ್ಲೆಯ ಜನಸಾಮಾನ್ಯರಿಗೆ ಆಗುವ ಅನ್ಯಾಯವನ್ನು ತಪ್ಪಿಸಿ. ಪೋಲಿಸ್ ಇಲಾಖೆಯಿಂದ ಜನಸಾಮಾನ್ಯರ ಮೇಲೆ ಆಗುವ ಈ ಒಂದು ಅನೀತಿಯನ್ನು ರಾಜ್ಯ ರೈತ ಸಂಘ ಹಸಿರು ಸೇನೆ ಕಡಬ ತಾಲೂಕು ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು. ಮನವಿಯನ್ನು ಕಡಬ ಉಪ ತಹಸೀಲ್ದಾರ್ ಮನೋಹರ್ ಅವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ರೈತಸಂಘದ ಉಪಾಧ್ಯಕ್ಷ ವಸಂತ.ಕೆ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ, ಜೇಮ್ಸ್ ಪದವು, ವರ್ಗೀಸ್, ಜಾನ್ಸನ್ ಪದವು, ಕೃಷ್ಣಪ್ಪ ಪದವು, ಜೋನಿ ಕರ್ಮಾಯಿ, ವಸಂತ ಪೂಜಾರಿ ಕುಂತೂರು, ರಾಮಣ್ಣ ನಾಯ್ಕ ಕುಂಡಡ್ಕ,ಈಶ್ವರ ಗೌಡ ಕುಂತೂರು, ವಿಶ್ವನಾಥ ಪೂಜಾರಿ ಕುಂತೂರು ಹಾಗೂ ನೀತಿ ತಂಡದಿಂದ ರಂಜನ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.