HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಪುತ್ತೂರಿನಲ್ಲಿ ರೂ.1.50ಕೋಟಿ ವೆಚ್ಚದಲ್ಲಿ ರಾಜ್ಯದ ಪ್ರಥಮ ಗಾಯತ್ರಿ ಭವನ: ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್ ಸಚ್ಚಿದಾನಂದ ಮೂರ್ತಿ ಪತ್ರಿಕಾಗೋಷ್ಠಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ರೂ.೧.೫೦ಕೋಟಿ ವೆಚ್ಚದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಗಾಯತ್ರಿ ಭವನ(ಸಮುದಾಯ ಭವನ)ವು ಪುತ್ತೂರಿನಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಮಂಡಳಿಯ ಅಧ್ಯಕ್ಷ ಹೆಚ್.ಎಸ್ ಸಚ್ಚಿದಾನಂದ ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅ.9ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸಮುದಾಯ ಭವನ ನಿರ್ಮಾಣವು ಪುತ್ತೂರಿನಿಂದ ಪ್ರಾರಂಭವಾಗಬೇಕು ಎಂಬ ಶಾಸಕರ ಬೇಡಿಕೆಯಿಂತೆ ಇಲ್ಲಿಂದಲೇ ಪ್ರಾರಂಭವಾಗಲಿದೆ. ಶಾಸಕ ಸಂಜೀವ ಮಠಂದೂರು ಗಾಯತ್ರೀ ಭವನ ನಿರ್ಮಾಣಕ್ಕೆ ಸರಕಾರಿ ನಿವೇಶನವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಬ್ರಾಹ್ಮಣರ ಕ್ಷೇಮಾಭಿವೃದ್ಧಿಗಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದ್ದು ಪ್ರತೀ ವರ್ಷ ಪೂರಕ ಅನುದಾನಗಳನ್ನು ಮಂಜೂರು ಮಾಡುತ್ತಿದ್ದಾರೆ. ರಾಜ್ಯ ಸರಕಾರವು ವಿವಿಧ ಯೋಜನೆಗಳಿಗೆ ಈಗಾಗಲೇ ರೂ. 20 ಕೋಟಿ ಹಾಗೂ ಬಂಡವಾಳ ವೆಚ್ಚಕ್ಕೆ ರೂ. ೫ ಕೋಟಿ ಮಂಜೂರು ಮಾಡಿದೆ ಎಂದರು.

ಸ್ವಾತಂತ್ರ ಭಾರತದಲ್ಲಿ ಪ್ರಥಮ ಭಾರಿಗೆ ಆದಾಯ ಪ್ರಮಾಣ ಪತ್ರ:
ಬ್ರಾಹ್ಮಣರಿಗೆ ಕಳೆದ ೭೬ ವರ್ಷಗಳಲ್ಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಬರುತ್ತಿರಲಿಲ್ಲ. ಸ್ವತಂತ್ರ ನಂತರ ಭಾರತದಲ್ಲಿ ಈ ವರ್ಷ ಪ್ರಥಮ ಭಾರಿಗೆ ಆದಾಯ ಪ್ರಮಾಣಪತ್ರ ಲಭ್ಯವಾಗುತ್ತಿದೆ. ಇದರ ಕುರಿತು ಕಳೆದ ಆರು ತಿಂಗಳಿನಿಂದ ಪ್ರಯತ್ನ ಪಟ್ಟಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ಬ್ರಾಹ್ಮಣರಿಗೂ ಜಾತಿ ಆದಾಯ ಪ್ರಮಾಣ ಪತ್ರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರ ಸರಕಾರದ ಹಿಂದುಳಿದವರಿಗಾಗಿ ನೀಡುವ ಶೇ. ೧೦ರ ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೂ ನೀಡುವಂತೆ ರಾಜ್ಯ ಸರಕಾರಕ್ಕೆ ಶಾಸಕರ ಮೂಲಕ ಮನವಿ ಮಾಡಿದ್ದು ಇದರ ಕರಡು ಪ್ರತಿ ತಯಾರಾಗಿದ್ದು ಮುಂದಿನ ಸಚಿವ ಸಂಪುಟದಲ್ಲಿ ಮುಖ್ಯ ಮಂತ್ರಿಗಳು ಅನುಮೋದನೆ ನೀಡಲಿದ್ದಾರೆ ಎಂದರು.

ಶಿಕ್ಷಣ, ಉದ್ಯಮಶೀಲತೆ :
ಬ್ರಾಹ್ಮಣರಿಗೆ ಶಿಕ್ಷಣ ಮತ್ತು ವೇದಾಧ್ಯನಕ್ಕಾಗಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ವಿದ್ಯಾಭ್ಯಾಸ ಪಡೆಯುತ್ತಿರುವ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಾಂದಿಪನಿ ಶಿಷ್ಯವೇತನ, ವೇದ, ಅಗಮ ವಿದ್ಯಾರ್ಥಿಗಳಿಗೆ ಆಚಾರ್ಯತ್ರಯ ವೇದ ಶಿಷ್ಯವೇತನ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಐಎಎಸ್, ಐಪಿಎಸ್, ಐಎಪ್‌ಎಸ್, ಐಆರ್‌ಎಸ್ ಇತ್ಯಾದಿ ಪರೀಕ್ಷೆಗಳ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಚಾಣಕ್ಯ ಆಡಳಿತ ತರಬೇತಿ ಯೋಜನೆಯಲ್ಲಿ ಉಚಿತ ತರಬೇತಿ, ಸನ್ನಿಧಿ ಯೋಜನೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಮತ್ತು ಉಚಿತ ವಿದ್ಯಾರ್ಥಿನಿಲಯ, ಸರ್.ಎಂ ವಿಶ್ವೇಶ್ವರಯ್ಯ ಕೌಶಾಲಾಭಿವೃದ್ಧಿ ಯೋಜನೆಯ ಮೂಲಕ ಉದ್ಯೋಗ, ಸ್ವಯಂ ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ ಉದ್ಯೋಗ ಮೇಳ, ಮಹಿಳೆಯರಿಗೆ ಕರಕುಶಲ ವಸ್ತುಗಳ ತಯಾರಿಕೆಗಾಗಿ ಗುಡಿ ಕೈಗಾರಿಕೆಗಳಾ ತರಬೇತಿ ಸಹಾಯಧನ ಪಾವತಿ ಹಾಗೂ ಮಾರುಕಟ್ಟೆ ನಿರ್ಮಾಣ, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಹಾಗೂ ಸಹಾಯ ನೀಡುವ ನಿಟ್ಟಿನಲ್ಲಿ ಪುರುಷೋತ್ತಮ ಯೋಜನೆ ಬ್ರಾಹ್ಮಣ ಸ್ವಸಹಾಯ ಸಂಘಗಳ ಸ್ಥಾಪನೆ, ಕೃಷಿ ಆಧಾರಿತ ಉದ್ಯಮಗಳ ಸ್ಥಾಪಿಸಲು ಕಡಿಮೆ ಬಡ್ಡಿ ದರದಲ್ಲಿ ಬ್ರಾಹ್ಮಣ ರೈತರಿಗೆ ಸಾಲ ಒದಗಿಸಲು ಅನ್ನದಾತ ಯೋಜನೆ, ಸುಭದ್ರಾ ಯೋಜನೆಯ ಮೂಲಕ ಅನಾಥ, ನಿರಾಶ್ರಿತ ಅಂಗವಿಕಲ, ವಿಧವಾ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ, ಸೌಖ್ಯ ಯೋಜನೆಯ ವಿಧವೆ ಹಾಗೂ ಹಿರಿಯ ನಾಗರಿಕರಿಗೆ ಆಶ್ರಯ ಕಲ್ಪಿಸಲು ವೃದ್ದಾಶ್ರಮಗಳ ಸ್ಥಾಪನೆ, ಕಲ್ಯಾಣ ಯೋಜನೆಯ ಮೂಲಕ ಸಾಮೂಹಿಕ ವಿವಾಹ, ಉಪನಯನ, ಯುವ ಪೀಳಿಗೆಯ ಸಂಘಟನೆಗಳಿಗಾಗಿ ಚೈತನ್ಯ ಉತ್ಸವ ಯೋಜನೆಯ ಮೂಲಕ ಯುವ ಉತ್ಸವಗಳನ್ನು ಆಯೋಜಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಸಾಮಾಜಿಕ ಯೋಜನೆಗಳು:
ಇತರ ಸಾಮಾಜಿಕ ಯೋಜನೆಗಳಾದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಕಡಿಮೆ ವೆಚ್ಚದ ಮನೆ ಮಂಜೂರಿಗೆ ಶಿಪಾರಸ್ಸು, ಬ್ರಾಹ್ಮಣ ಸಮುದಾಯ ಬಗ್ಗೆ ರಾಜ್ಯಾದ್ಯಂತ ಸರ್ವೆ ನಡೆಸುವುದು, ಅಂತ್ಯಕಾಲದಲ್ಲಿ ಮತ್ತು ದೀರ್ಘಕಾಲಿಕ ಅನಾರೋಗ್ಯಕ್ಕೆ ತುತ್ತಾಗಿರುವವರಿಗೆ ವೈದ್ಯಕೀಯ ಧನ ಸಹಾಯ, ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಧನಸಹಾಯ, ನಿರ್ಗತಿಕ ಬ್ರಾಹ್ಮಣ ನಿಧನರಾದರೆ ಅಂತ್ಯಕ್ರಿಯೆ ನಡೆಸಲು ಧನಸಹಾಯ, ಆಚಾರ್ಯತ್ರಯ ಮತ್ತು ಬ್ರಾಹ್ಮಣ ಸಾಧಕರ ಜಯಂತಿ ಆಚರಣೆ, ಜಿಲ್ಲಾ ಕೇಂದ್ರಗಳ ಸ್ಥಾಪನೆ, ಸಮಾಜದ ಎಲ್ಲಾ ಸಮುದಾಯಗಳೊಂದಿಗೆ ವಿಚಾರ ಸಂಕೀರ್ಣಗಳನ್ನು ನಡೆಸಿ ಸಂವಿಧಾನಕ್ಕೆ ಅನುಗಿಣವಾಘಿ ಸಮಾಜದಲ್ಲಿ ಏಕತೆಯ ಸ್ಫೂರ್ತಿ ಬೆಳೆಸುವುದು ಹಾಗೂ ಬ್ರಾಹ್ಮಣ ಸಮುದಾಯ ಸರ್ವೋತೋಮುಖ, ಅಭಿವೃದ್ಧಿಗಾಗಿ ಇನ್ನಿತರ ಯೋಜನೆಗಳನ್ನು ಕೈಗೊಳ್ಳಲಾಗುವುದು. ಮೃತರ ಆತ್ಮ ಸದ್ಗತಿಗಾಗಿ ಅಪರಕ್ರಿಯೆಗಳನ್ನು ನಡೆಸಲು ವ್ಯವಸ್ಥಿತ ಕಟ್ಟಡಗಳನ್ನು ದಾನಿಗಳ ನೆರವಿನಿಂದ ಮಂಡಳಿಯು ನಿರ್ಮಾಣ ಮಾಡುತ್ತಿದ್ದು ಗಯಾಪದ ಕ್ಷೇತ್ರ ದಕ್ಷಿಣ ಕಾಶಿ ಉಪ್ಪಿನಂಗಡಿಯಲ್ಲಿ ಇಂತಹ ಕಟ್ಟಡ ವ್ಯವಸ್ಥೆಯನ್ನು ಮಾಡುವಂತೆ ಈಗಾಗಲೇ ಶಾಸಕ ಸಂಜೀವ ಮಠಂದೂರು ನನ್ನ ಗಮನಕ್ಕೆ ತಂದಿದ್ದು ತ್ವರಿತವಾಗಿ ಈ ಯೋಜನೆಯ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಶಾಸಕ ಸಂಜೀವ ಮಠಂದೂರು, ಮಂಗಳೂರು ವಿಭಾಗ ಬಿಜೆಪಿ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.