ಹಿರೇಬಂಡಾಡಿ ಪೆಲತ್ತಡಿ ಶ್ವೇತಾ ಆತ್ಮಹತ್ಯೆ ಪ್ರಕರಣ: ಆರೋಪಿ ಪತಿಗೆ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಿರೇಬಂಡಾಡಿ ಗ್ರಾಮದ ಪೆಲತ್ತಡಿಯಲ್ಲಿ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯಕ್ಕೆ ದುಷ್ಪ್ರೇರಣೆ ನೀಡಿದ್ದ ಆರೋಪಿಯಾಗಿರುವ ಆಕೆಯ ಪತಿಗೆ ರಾಜ್ಯ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪೆಲತ್ತಡಿ ನಿವಾಸಿ ಲೋಕೇಶ್ ಎಂಬವರ ಪತ್ನಿ ಶ್ವೇತಾ(24ವ.)ಎಂಬವರು ಕಳೆದ ಜೂ.14ರಂದು ಬೆಳಿಗ್ಗೆ ಮನೆಯ ಕೊಠಡಿಯೊಂದರಲ್ಲಿ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.ಧರ್ಮಸ್ಥಳ ನಿವಾಸಿ ಚಂದ್ರಶೇಖರ್‌ರವರ ಪುತ್ರಿ ಶ್ವೇತಾ ಹಾಗೂ ಹಿರೇಬಂಡಾಡಿ ಪೆಲತ್ತಡಿ ನಿವಾಸಿ ಲೋಕೇಶ್‌ರವರಿಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು ಈ ದಂಪತಿಗೆ ೩ ವರ್ಷದ ಪುತ್ರ ಇದ್ದಾರೆ.

ತಂದೆಯಿಂದ ದೂರು:
ಶ್ವೇತಾ ಆತ್ಮಹತ್ಯೆಗೆ ಆಕೆಯ ಪತಿ ಲೋಕೇಶ್ ಹಾಗೂ ಅತ್ತೆಯ ದುಷ್ಪ್ರೇರಣೆಯೇ ಕಾರಣ ಎಂದು ಆರೋಪಿಸಿ ಶ್ವೇತಾರವರ ತಂದೆ ಚಂದ್ರಶೇಖರ್‌ರವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ತಾಯಿಗೆ ನಿರೀಕ್ಷಣಾ ಜಾಮೀನು:
ಪ್ರಕರಣದ ಆರೋಪಿಯಾಗಿರುವ ಲೋಕೇಶ್‌ರವರ ತಾಯಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.ಆದರೆ ಲೋಕೇಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.ಇದೀಗ ರಾಜ್ಯ ಉಚ್ಛ ನ್ಯಾಯಾಲಯವು ಲೋಕೇಶ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲ ಅಬ್ದುಲ್ ಅನ್ಸಾರ್ ವಿಟ್ಲ ವಾದಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.